Breaking News

ವೇಣೂರಿನ ಭಗವಾನ್ ಬಾಹುಬಲಿಗೆ ಮಹಾಮಸ್ತಕಾಭಿಷೇಕ, ಸಿಂಗಾರಗೊಂಡ ಊರು, ಸಕಲ ಸಿದ್ಧತೆ  

 

ಆರ್. ಸುಂದರ್ ಕುಮಾರ್, ಮಾರೂರು

ವೇಣೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಎಂಬ ಗ್ರಾಮದ ಫಲ್ಗುಣಿ ನದಿ ತೀರದಲ್ಲಿ ಕ್ರಿ.ಶ. 1604ರಲ್ಲಿ ಅಳದಂಗಡಿ ಅರಮನೆಯ ಅಜಿಲ ಅರಸರಾದ ತಿಮ್ಮಣ್ಣಾ ಅಜಿಲರಸರು ಪ್ರತಿಷ್ಠಾಪಿಸಿದ ಭಗವಾನ್ ಬಾಹುಬಲಿಗೆ 12 ವರ್ಷಗಳಿಗೊಮ್ಮೆ ನಡೆವ ಮಹಾಮಸ್ತಕಾಭಿಷೇಕವು ಇದೇ 22ರಿಂದ ಮಾರ್ಚ್ 1ವರಿಗೆ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ್ ಅಜಿಲ ಅವರ ಅಧ್ಯಕ್ಷತೆ, ಶ್ರೇಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರ ಅಧ್ಯಕ್ಷತೆ ಹಾಗೂ ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಅದ್ಧೂರಿಯಾಗಿ  ನಡೆಯಲಿದೆ.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು 9 ದಿನಗಳ ಕಾಲ ನಡೆಯುವ ಮಹಾಮಸ್ತಕಾಭಿಷೇಕ ಮಹೋತ್ಸವ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸಂಸದರು, ಸಚಿವರು ಮತ್ತು ಶಾಸಕರು ಕೂಡ ಭಾಗವಹಿಸಲಿದ್ದಾರೆ.

ಮಹಾಮಸ್ತಕಾಭಿಷೇಕದ 9 ದಿನಗಳಲ್ಲಿಯೂ ಸಂಜೆ ಧಾರ್ಮಿಕ ಸಭೆಯೊಂದಿಗೆ ಆರಂಭಗೊಂಡು ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಮುಕ್ತಾಯಗೊಳ್ಳಲಿದೆ. ಮಹಾಮಸ್ತಕಾಭಿಷೇಕಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಸಾವಿರಾರು ಭಕ್ತರು ಆಗಮಿಸಲಿದ್ದು, ಪ್ರತಿದಿನ ಅನ್ನದಾಸೋಹ ನಡೆಯಲಿದೆ. ಯಾತ್ರಿಕರ ಮನೋರಂಜನೆಗಾಗಿ ವಸ್ತುಪ್ರದರ್ಶನ ಮತ್ತು ಮನೋರಂಜನೆ ಕಾರ್ಯಕ್ರಮ ನಡೆಯಲಿದೆ. ಭಕ್ತರಿಗೆ ಯಾವುದೇ ತೊಂದೆಯಾಗದಂತೆ ಉತ್ಸಾಹಿ ಸ್ವಯಂಸೇವಕರ ತಂಡವು ಸೇವೆ ನೀಡಲು ಸಜ್ಜಾಗಿದೆ.

ಸಂಚಾರ ಮತ್ತು ಭದ್ರತೆ ವಿಭಾಗದಲ್ಲಿ ಜಿಲ್ಲಾ ಪೋಲಿಸ್ ಇಲಾಖೆ ಕಟ್ಟುನಿಟ್ಟಿನ ವ್ಯಸ್ಥೆಯನ್ನು ಮಾಡಿದ್ದು, ಡಿವೈಎಸ್ಪಿ, ಏಳು ಮಂದಿ ಸಿಪಿಐಗಳು, 12 ಮಂದಿ ಪಿಎಸ್ ಐಗಳು ಸೇರಿದಂತೆ 275 ಪೋಲೀಸ್ ಸಿಬ್ಬಂದಿ ತಂಡ ಭದ್ರತೆ ಕಾರ್ಯಕ್ಕೆ ನಿಯೋಜನೆಗೊಂಡಿದೆ.

  1.  

ಅದಲ್ಲದೇ ಆರೋಗ್ಯ ಇಲಾಖೆ ಸಿಬ್ಬಂದಿ, ಅಗ್ನಿಶಾಮಕ ದಳದ ಸಿಬ್ಬಂದಿ ಸೇವೆಗೆ ಸಜ್ಜುಗೊಂಡಿದ್ದಾರೆ. ಪ್ರಕೃತಿ ಮಡಿಲಲ್ಲಿ ಮಜ್ಜನ ಸಂಭ್ರಮ: ಹಚ್ಚಹಸಿರಿನ ಸುಂದರ ಪ್ರಕೃತಿಯ ದಕ್ಷಿಣ ಕನ್ನಡ ಜಿಲ್ಲೆಯ ಮಲೆನಾಡಿನ ಸೆರಗಿನಲ್ಲಿ ತುಳುನಾಡನ್ನು ಆಳಿದ ರಾಜ ಮನೆತನ ಅಜಿಲ ಮನೆತನ, ಒಂದು ಹದಿನಾಲ್ಕು ಮಾಗಣೆಗೆ ವೇಣೂರು ರಾಜಧಾನಿಯಾಗಿತ್ತು . ಈ ಊರಿನಲ್ಲಿ 400 ವರ್ಷಗಳ ಹಿಂದೆ ಸುಮಾರು 900 ಜೈನ ಕುಟುಂಬ ಇದ್ದವು ಎಂದು ಜೈನಾಚಾರ ಎಂಬ ಗ್ರಂಥದಲ್ಲಿ ಉಲ್ಲೇಖವಿದೆ.

ಮಸ್ತಕಾಭಿಷೇಕಗೊಳ್ಳುತ್ತಿರುವ ವೇಣೂರಿನ 35 ಅಡಿ ಎತ್ತರದ ಗೊಮ್ಮಟ ಸ್ವಾಮಿ ವಿಗ್ರಹ 1154 ರಿಂದ 1764 ಈ ಪ್ರದೇಶದಲ್ಲಿ ರಾಜ್ಯಭಾರ ಮಾಡಿ ತಿಮ್ಮರಾಜ ಅಜಿಲ ದೊರೆ (ರಾಜನು)(1604) ವೇಣೂರಿನ ದಕ್ಷಿಣ ತಳ(ತಟ)ದಲ್ಲಿ ಫಲ್ಗುಣಿ/ಗುರುಪುರ ನದಿಯ ತಳದಿಂದ 60 ಅಡಿ ಎತ್ತರದ ಸ್ಥಳ ಸಮತಲದ ಸ್ಥಳ ಬಾಹುಬಲಿ ಮೂರ್ತಿ ಪ್ರತಿಷ್ಠಾಪಿಸಲ್ಪಟ್ಟಿರುವ ಕರಿಕಲ್ಲಿನ ಈ ಮೂರ್ತಿಯ ಹೊಟ್ಟೆಯ ಭಾಗದಲ್ಲಿ ಅಂಕಿತಗೊಳಿಸಲಾಗಿರುವ ಸ್ವಾಭಾವಿತನವನ್ನು ಕೊಡುತ್ತದೆ ಉದ್ದನೆ ಕಿವಿಗಳು ಸ್ಪರ್ಶಿಸುತ್ತವೆ ಕಾಲುಗಳು ಕೈಗಳನ್ನು ಬಳ್ಳಿಲತೆಗಳು ಸುತ್ತಿಕೊಂಡಿರುತ್ತವೆ.

ಬಾಹುಬಲಿ ಕುರಿತು ಕೆಲವು ವಿವರಗಳು: ಪ್ರತಿಯಾದಕಾಲ ಶಾಲಿವಾಹನ ಶಕ: 1526 ನೇ ಶೋಭಕೃತ್ ಸಂವತ್ಸರದ ಫಲ್ಗುಣ ಶುದ್ಧ 10ನೇಯ ಪುಷ್ಯಾ ನಕ್ಷತ್ರದ ಮಾರ್ಚ್ 1, 1604 ರ ಗುರುವಾರ ಮಿಥುನ ಲಗ್ನದಲ್ಲಿ ಮೂಹರ್ತದಲ್ಲಿ ಪ್ರತಿಷ್ಠಾಪನೆ ನಡೆಯಿತು. ಕೆತ್ತಿದ ಸ್ಥಳ ವೇಣೂರಿನಿಂದ 8 ಕಿಲೋ ಮೀಟರ್ ದೂರ ಕಲ್ಲಣೆ ಎಂಬ ಸ್ಥಳ ಬಾಹುಬಲಿ ಸ್ವಾಮಿ ಉತ್ತರ ದಿಕ್ಕಿನಲ್ಲಿದೆ 50 ಅಡಿ ಉದ್ದ ಶಿಲೆಯೊಂದು ನಿರ್ಮಾಣ ಹಂತದಲ್ಲಿ ತುಂಡಾಗಿರುವುದು ಕಾಣಬಹುದು. ಶಿಲ್ಪಿಯ ಹೆಸರು ಬೀರು ಅಚ್ಚವ ಕಲ್ಕುಡ ಕೇಳಿ ಬಂತು. 415 ವರ್ಷ ಬಳಿಕ ಇವರ ವಂಶದವರು ಕೆತ್ತಿದ ಮೂರ್ತಿ ಎಂದು ತಿಳಿದು ಬಂದಿದೆ.

ಈ ಪರಿಸರದಲ್ಲಿರುವ ಬಸದಿಗಳು ಮತ್ತು ದೇವಸ್ಥಾನಗಳು: ಅಕ್ಕಂಗಳ ಬಸದಿ, ಬಿನ್ನಾಣಿ ಬಸದಿ, ಪಾರ್ಶ್ವನಾಥ ಸ್ವಾಮಿ ಬಸದಿ, ಕಲ್ಲು ಬಸದಿ,  ಸರ್ವಾ ಯಕ್ಷಶಾಂತಿನಾಥ ಬಸದಿ, ಪಂಚಪರಮೇಷ್ಠಿ, ಶಾಂತೀಶ್ವರ ಬಸದಿ, ಶಾಂತೀಶ್ವರ ಸ್ವಾಮಿ ಬಸದಿ, ಪಾರ್ಶ್ವ ಮತ್ತು ಚಂದ್ರನಾಥ ಬಸದಿ, . ಬ್ರಹ್ಮದೇವ ಶಾಂತೀಶ್ವರ ಬಸದಿ, ತೀರ್ಥಂಕರ ಬಸದಿ, ಬಾಹುಬಲಿ ಎದುರು ಬರ್ಮ (ಕ್ರಿ.ಶ 1604) ಮಾನಸ್ಥಂಭವಿದೆ. ಇದರಲ್ಲಿ 24 ತೀರ್ಥಂಕರರ ಚಿತ್ರಗಳನ್ನು ಕಲ್ಲಿನಲ್ಲಿ ಕೆತ್ತಲಾಗಿದೆ. ಅಜಿಲ ರಾಜ್ಯ ದೇವತೆ ಮಹಾಲಿಂಗೇಶ್ವರ ದೇವಾಲಯ ಬಲಬದಿಯಲ್ಲಿದೆ. ಇದರ ಸಮೀಪವೆ ವೇಣೂರಿನ ಅಜಿಲರಸರ ಅರಮನೆ ಕುರುಹುಗಳು, ಆನೆಬಾಗಿಲು ಕಲ್ಲಿನ ಅವಶೇಷಗಳು ಈಗಲೂ ಇದೆ. ಪ್ರಾಚೀನ ತುಳುನಾಡನ್ನು ಆಳಿದ ಅರಸರು ರಾಜಕೀಯ ಐತಿಹಾಸಿಕತೆಯ ಕಾಣಿಕೆಯನ್ನು ನೀಡಿರುತ್ತಾರೆ.

On the banks of Falguni river in Venur village of Belthangadi taluk of Dakshina Kannada district. In 1604, the Mahamastakabhishek of Lord Baahubali, which was installed by Thimmanna Ajila, the Ajila King of Aladangadi Palace, which takes place once in 12 years, was presided over by Dr. Padmaprasad Ajila, the Thimmannarasa of Aladangadi Palace, and the deacon of Shrekshetra Dharmasthala. D. Virendra Heggade as President and under the guidance of Panditacharya Swamiji Charukirthi Bhattarak of Moodbidire Jain Math.

(ಲೇಖಕರು  ಹಿರಿಯ ಪತ್ರಕರ್ತರು)

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com