Breaking News

ಅಕ್ಷರ ಸಂತ, ಬಂಡಾಯ ಕವಿ, ದಲಿತ ಸಂವೇದನೆಯ ಸಾಹಿತಿ ಅಂಕೋಲೆಯ ವಿಷ್ಣು ನಾಯ್ಕ ನಿಧನ

 

ಕಾರವಾರ (ಅಂಕೋಲಾ): ಖ್ಯಾತ ಸಾಹಿತಿ, ಪ್ರಕಾಶಕ, ನಿವೃತ್ತ ಶಿಕ್ಷಕ ಅಕ್ಷರ ಸಂತ ವಿಷ್ಣು ನಾಯ್ಕ (79) ಅವರು ಶನಿವಾರ ರಾತ್ರಿ ಕಾರವಾರದ ಸಿವಿಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.  ಅವರ ನಿಧನಕ್ಕೆ ಸಾಹಿತ್ಯ ಲೋಕವು ಕಂಬನಿ ಮಿಡಿದಿದೆ.  ಭಾನುವಾರ 11.30ಕ್ಕೆ ಅಂಕೋಲಾದ ಪರಿಮಳ ಅಂಬಾರಕೊಡ್ಲಿ ಅವರ ಮೃತ ದೇಹವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಂಬಾರಕೊಡ್ಲಾದಲ್ಲಿ 1944 ರಲ್ಲಿನಿರಕ್ಷರಿ ತಂದೆ –ತಾಯಿಯರ ಆರು ಮಕ್ಕಳಲ್ಲಿ ಮೂರನೆಯವರಾಗಿ ವಿಷ್ಣು ನಾಯ್ಕ್  ಅವರು ಜನಿಸಿದ್ದರು.

ಎಂಎ ಸ್ನಾತಕೋತ್ತರ ಪದವಿಯಲ್ಲಿ ಜಾನಪದ ಮುಖ್ಯ ವಿಷಯವಾಗಿ ವ್ಯಾಸಂಗ ಮಾಡಿದ್ದರು. ವಿದ್ಯಾರ್ಥಿ ಕವಿ ಆಗಿ ಸಾಹಿತ್ಯಕ್ಕೆ ರಂಗ ಪ್ರವೇಶ ಮಾಡಿದವರು. 45 ವರ್ಷಗಳ ಬರವಣಿಗೆಯ ಬದುಕಿನಲ್ಲಿ 55 ಗ್ರಂಥಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ಆಗಿ ನೀಡಿದ ಹೆಗ್ಗಳಿಕೆ ವಿಷ್ಣು ನಾಯ್ಕರದು.

10 ಕವನ ಸಂಕಲನ,  ಎಂಟು ನಾಟಕ ವಿಚಾರ ವಿಮರ್ಶೆ, ಅಂಕಣ ಸಾಹಿತ್ಯಕ್ಕೆ ಸೇರಿದ ಎಂಟು ಗ್ರಂಥಗಳು, ಒಂದು ಕಥಾ ಸಂಕಲನ, ಜೀವನ ಚರಿತ್ರೆಗೆ ಸಂಬಂಧಪಟ್ಟ ನಾಲ್ಕು ಹೊತ್ತಿಗೆ, ಕಾಯ್ಕಿಣಿ ಸಮಗ್ರ ಸಾಹಿತ್ಯದ 10 ಸಂಪುಟಗಳು ಸೇರಿದಂತೆ ಒಟ್ಟು 25 ಸಂಪಾದಿತ ಗ್ರಂಥಗಳು ವಿಷ್ಣು ನಾಯಕ ಅವರ ಮೊನಚಾದ ಲೇಖನಿಯ ಮೂಲಕ ಅರಳಿವೆ.

  1.  

ಸಾಹಿತ್ಯ, ಶಿಕ್ಷಣ, ಕಲೆ ಮತ್ತಿತರ ಜನಪರ ಕಾಳಜಿಯ ಸಾಂಸ್ಕೃತಿಕ ವೇದಿಕೆಯಾಗಿ ಆರಂಭವಾದ ರಾಘವೇಂದ್ರ ಪ್ರಕಾಶನ ಸ್ಥಾಪಕ ಸಂಚಾಲಕರು, ಈ ಮೂಲಕ ಇದೂವರೆಗೆ 165ಕ್ಕೂ  ಹೆಚ್ಚು ಗ್ರಂಥಗಳ ಪ್ರಕಟಣೆ, ಸಾಹಿತ್ಯ ಗೋಷ್ಠಿಗಳು, ಕಮ್ಮಟಗಳು ಸೇರಿದಂತೆ ಹತ್ತು ಹಲವು ಚಟುವಟಿಕೆಗಳು, ನಾಟಕ ಮತ್ತು ಯಕ್ಷಗಾನದಲ್ಲಿ ನಟರಾಗಿ ನಿರ್ದೇಶಕರಾಗಿ ಸುದೀರ್ಘಕಾಲದ ಅನುಭವ, ಬೀದಿ ನಾಟಕಗಳ ಮೂಲಕ ಜಾಗೃತಿ ಕೆಲಸ ಮಾಡಿದವರು  ವಿಷ್ಣು ನಾಯ್ಕ ಅವರು.

ವರದಿಗಾರರಾಗಿ, ಅಂಕಣ ಬರಹಗಾರರಾಗಿ ಸಂಪಾದಕರಾಗಿ ಪತ್ರಿಕಾ ಕ್ಷೇತ್ರದಲ್ಲೂ ತಮ್ಮ ಬರವಣಿಗೆ ಮೂಲಕ, ಹರಿತ ಲೇಖನಗಳ ಮೂಲಕ ಜಾಗೃತ ಸಮಾಜವನ್ನುಂಟು ಮಾಡುವುದಕ್ಕೆ ತಮ್ಮದೇ ಆದಂತಹ ಸೇವೆಯನ್ನ ಉತ್ತರ ಕನ್ನಡ ಜಿಲ್ಲೆಯ ಅಂಕೋಲೆಯ ಲೇಖಕ ವಿಷ್ಣು ನಾಯ್ಕ ಅವರು ಮಾಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯೊಳಗೆ ದಿನಕರ ದೇಸಾಯಿ ಅವರ ನೇತೃತ್ವದಲ್ಲಿ ನಡೆದ ಸಮಾಜವಾದಿ ರೈತ ಆಂದೋಲನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಹತ್ತು ಹಲವು ಸಾರ್ವಜನಿಕ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಕೂಡ ಕೆಲಸ ಮಾಡಿದ್ದರು.

ಆದರ್ಶ ಶಿಕ್ಷಕ ರಾಜ್ಯ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ,ಬೇಂದ್ರೆ ಕಾವ್ಯ ಪುರಸ್ಕಾರ, ಲಿಂಗರಾಜ ಸಾಹಿತ್ಯ ಪ್ರಶಸ್ತಿ, ಕಾಯ್ಕಿಣಿ ಪ್ರತಿಷ್ಠಾನ ಕಾವ್ಯ ಪ್ರಶಸ್ತಿ, ಎಸ್ ಪಿ, ಪರಮೇಶ್ವರ್ ಭಟ್ ಪರಿಚಾರಿಕೆ ಪ್ರಶಸ್ತಿ, ಅತ್ಯುತ್ತಮ ಗ್ರಂಥ ಪ್ರಕಾಶಕ ಪ್ರಶಸ್ತಿ, ಅತ್ಯುತ್ತಮ ಗ್ರಾಮಾಂತರ ವರ್ಗದ ಪ್ರಶಸ್ತಿಯು ಅವರಿಗೆ ಸಂದ ಗೌರವಳಲ್ಲಿ ಅತ್ಯುತ್ತಮ ಸಾಲಿಗೆ ಸೇರ್ಪಡೆ ಆಗುತ್ತವೆ. ಪರಿಮಳದಂಗಳ ಎಂಬ 60 ರ ಅಭಿನಂದನಾ ಗ್ರಂಥವನ್ನು ಇವರಿಗೆ ನಾಡಿನ ಸಾಹಿತ್ಯ ವಲಯ ಸಮರ್ಪಿಸಿದೆ.

Akshara Sant Vishnu Nayka (79), a famous writer, publisher and retired teacher, passed away at the Civil Hospital in Karwar on Saturday night. The literary world mourned his death. Family sources said that the dead body of Ankola Parimana Ambarakodli will be kept for public viewing at 11.30 am on Sunday.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com