Breaking News

ಫೆ. 16 ಕ್ಕೆ ರಾಜ್ಯದಾದ್ಯಂತ ರವಿಕೆ ‌ಪ್ರಸಂಗ ತೆರೆಗೆ, ಅಪ್ಪು ನಮನದಲ್ಲಿ ರವಿಕೆ ಪ್ರಸಂಗ ಚಿತ್ರತಂಡ

 

ಬೆಂಗಳೂರು:  ಫೆ. 16 ರಂದು ರಾಜ್ಯದಾದ್ಯಂತ ಭರ್ಜರಿಯಾಗಿ ಸಿನಿಮಾ ಮಂದಿರಗಳಿಗೆ ಗ್ರ್ಯಾಂಡ್ ಆಗಿ ಲಗ್ಗೆ ಇಡುತ್ತಿರುವ ರವಿಕೆ ‌ಪ್ರಸಂಗ ಸಿನಿಮಾ ಸಾಕಷ್ಟು ನಿರೀಕ್ಷೆಗಳನ್ನು ನೋಡುಗರಲ್ಲಿ ಹುಟ್ಟು ಹಾಕಿದೆ. ದಿನೇ ದಿನೇ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಕ್ರೇಜ್ ಹೆಚ್ಚಾಗುತ್ತಿದೆ. ನೋಡುಗರಿಗೆ ಫುಲ್ ಮಿಲ್ಸ್ ನೀಡುವು ಚಿತ್ರ ಇದಾಗಿದೆ ಎಂದು ಚಿತ್ರ ತಂಡದವರು ಸಿನಿಮಾ ಪ್ರಮೋಷನ್ ಮಾಡುತ್ತಿದ್ದು, ಹೋದ ಹೋದ ಕಡೆಗೆ ಜನರಿಂದ ಸಖತ್ ರೆಸ್ಪಾನ್ಸ್ ಸಿಗ್ತಾ ಇದೆ.

ಅಖಿಲ ಕರ್ನಾಟಕ ವಾದ್ಯಗೋಷ್ಠಿ ಮಹಾಸಂಘ ದ ವತಿಯಿಂದ ಆಯೋಜಿಸಿದ್ದ ಅಪ್ಪು ನಮನ ಕಾರ್ಯಕ್ರಮದಲ್ಲಿ “ರವಿಕೆ ಪ್ರಸಂಗ” ಚಿತ್ರ ತಂಡ ಪಾಲ್ಗೊಂಡಿತು.  ರವಿಕೆ ಪ್ರಸಂಗ ಸಿನಿಮಾದ ಟೈಟಲ್ ಅನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಬಿಡುಗಡೆಗೊಳಿಸಿರುವುದನ್ನು ಗೀತಾ ಭಾರತಿ ಭಟ್ ನೆನಪಿಸಿಕೊಂಡರು.

  1.  

ಅಪ್ಪುವಿಗೆ ವಿಶೇಷವಾಗಿ ಸಾವಿರಕ್ಕೂ ಹೆಚ್ಚಿನ ವಾದ್ಯಗೋಷ್ಠಿ ಕಲಾವಿದರೊಂದಿಗೆ ರವಿಕೆಪ್ರಸಂಗ ಚಿತ್ರದ ನಾಯಕಿ ಗೀತಾಭಾರತಿ ಭಟ್, ಕಲಾರತಿ ಮಹಾದೇವ್, ರಕ್ಷಕ್, ನಿರ್ದೇಶಕರಾದ ಸಂತೋಷ್ ಕೊಡೆಂಕೇರಿ, ಹಾಗೂ ಚಿತ್ರಕ್ಕೆ  ಕಥೆ ಮತ್ತು ಸಂಭಾಷಣೆ ಬರೆದ ಪಾವನ ಸಂತೋಷ್ ಮತ್ತು ಚಿತ್ರದ ನಿರ್ಮಾಣದಲ್ಲಿ ಕೈ ಜೋಡಿಸಿದ ಶಿವರುದ್ರಯ್ಯ, ಗಿರೀಶ್.ಬಿ, ಸಂಸ್ಥಾಪಕರು, ರಾಧಾಕೃಷ್ಣ ಚಾರಿಟಬಲ್ ಟ್ರಸ್ಟ್ ಮತ್ತು ಕಂದಯ್ಯಶೆಟ್ಟಿ , ಹಾಗೂ “ರವಿಕೆ‌ಪ್ರಸಂಗ” ಚಿತ್ರದ ಟೈಟಲ್ ಸಾಂಗಿಗೆ ಅದ್ಭುತವಾಗಿ ಕೋರಿಯೋಗ್ರಫಿ‌ ಮಾಡಿದ್ದ ರಾಜು ಮಾಸ್ಟರ್  ಸೇರಿ‌ ಎಲ್ಲರೂ ಅಪ್ಪುವಿಗೆ ಬೊಂಬೇ ಹೇಳುತೈತೆ ಹಾಡನ್ನು ಹಾಡುವ ಮೂಲಕ ನಮನ ಸಲ್ಲಿಸಿದ್ದು ಬಹಳ ವಿಶೇಷವಾಗಿತ್ತು.

ಅಖಿಲ ಕರ್ನಾಟಕ ವಾದ್ಯಗೋಷ್ಠಿ ಕಲಾವಿದರ ಮಹಾ ಸಂಘದ ಅಧ್ಯಕ್ಷ ಡಾ. ಆರ್. ಶಂಕರ್ ಅವರ ಜತೆಗೆ ಅಲ್ಲಿ ನೆರೆದಿದ್ದ ವಾದ್ಯಗೋಷ್ಠಿಯ ಕಲಾವಿದರೆಲ್ಲಾ ರವಿಕೆ‌ಪ್ರಸಂಗ ಚಿತ್ರತಂಡಕ್ಕೆ ಶುಭಕೋರಿ, ತಾವೆಲ್ಲರೂ‌ ಕುಟುಂಬದೊಂದಿಗೆ ಥಿಯೇಟರಿಗೆ ಬಂದು ಸಿನಿಮಾ ನೋಡುವುದಾಗಿ‌ ವಾಗ್ದಾನ ಮಾಡಿದರು.

ನಿರ್ದೇಶಕ  ಸಂತೋಷ್ ಕೊಡೆಂಕೇರಿ ಮಾತನಾಡಿ, ರವಿಕೆ ಎಂದರೇ ತಾಯಿಯಷ್ಟೇ ಮುಖ್ಯ, ನಾವೂ ಯಾವುದೇ ಹಬ್ಬ ಹರಿದಿನಗಳಲ್ಲಿ ‌ಅರಿಷಿಣ-ಕುಂಕುಮದ ಜತೆಗೆ ರವಿಕೆ ಕೊಡುವ ಸಂಪ್ರದಾಯ ಪಾಲಿಸುತ್ತಾ ಬಂದಿದ್ದೇವೆ. ಹಾಗೇ ರವಿಕೆಗೆ ತನ್ನದೇ ಆದ ವಿಶೇಷ ಮಹತ್ವವಿದೆ. ಅಂಥ ರವಿಕೆ ಕಥೆ ನ್ಯಾಷನಲ್ ಇಷ್ಷ್ಯೂ ಆಗುವ ಕಥಾಹಂದರ ಹೊಂದಿರುವ ಈ ಚಿತ್ರ ಮನರಂಜನಾ ಪೂರಕ ಎಂದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com