Breaking News

ಡಾ. ಬಂಟ್ವಾಳ ನರಸಿಂಹ ಸೋಮಯಾಜಿ ನಿಧನ, ಗಣ್ಯರಿಂದ ಶ್ರದ್ಧಾಂಜಲಿ

 

ಮಂಗಳೂರು:  ಮೊದಲ ಗ್ಯಾಸ್ಟ್ರೋಎಂಟರಾಲಜಿಸ್ಟ್‌ ತಜ್ಞ ವೈದ್ಯರಾಗಿದ್ದ ಡಾ. ಬಂಟ್ವಾಳ ನರಸಿಂಹ ಸೋಮಯಾಜಿ ಅವರು ಮಂಗಳವಾರ ಮಂಗಳೂರಿನಲ್ಲಿ ನಿಧನರಾಗಿದ್ದಾರೆ.

ಡಾ. ನರಸಿಂಹ ಸೋಮಯಾಜಿ ಅವರಿಗೆ ಪತ್ನಿ ಸುಮೇಧ ಹಾಗೂ ಮಕ್ಕಳಾದ ಅನಿಲ್ ಮತ್ತು ಶಾಲಿನಿ ಹಾಗೂ ಅಪಾರ ಬಂಧುಮಿತ್ರರು ಇದ್ದಾರೆ.

ಗಾಂಧಿವಾದಿ ನಾರಾಯಣ ಸೋಮಯಾಜಿ ಮತ್ತು ಗೋಪಿ ಅಮ್ಮ ಅವರ ಎರಡನೇ ಮಗನಾಗಿ 1935 ರಲ್ಲಿ ಮಂಗಳೂರಿನಲ್ಲಿ ಜನಿಸಿದ್ದ ಡಾ. ನರಸಿಂಹ ಸೋಮಯಾಜಿ ಅವರು ಮಂಗಳೂರಿನ ಗಣಪತಿ ಪ್ರೌಢ ಶಾಲೆಯಲ್ಲಿ ಆರಂಭಿಕ ಶಿಕ್ಷಣವನ್ನು ಪಡೆದು, ಬಳಿಕ ಮದ್ರಾಸ್ ಮೆಡಿಕಲ್ ಕಾಲೇಜಿನಲ್ಲಿ 1958ರಲ್ಲಿ ಎಂಬಿಬಿಎಸ್ ಪದವಿಯನ್ನು ಪಡೆದರು.

  1.  

ಇಂಗ್ಲೆಂಡಿನ ಬರ್ಮಿಂಗ್ ಹಾಂ, ನಂತರ ಅಮೆರಿಕದ ಹ್ಯೂಸ್ಟನ್ ಗಳಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡಿ, ಅಮೆರಿಕದ ಟೆನಿಸಿ ರಾಜ್ಯದ ನಾಶ್‌ವಿಲ್‌ನ ಮೆಹಾರಿ ಮೆಡಿಕಲ್ ಕಾಲೇಜಿಲ್ಲಿ ಪಚನಾಂಗ ವಿಜ್ಞಾನದ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿದರು. ನಾಶ್‌ವಿಲ್‌ನಲ್ಲಿ ಪಚನಾಂಗ ತಜ್ಞರಾಗಿ 40ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದರು. ನಾಶ್‌ವಿಲ್‌ನಲ್ಲಿ ಟೆನಿಸಿಯ ಹಿಂದೂ ಸಾಂಸ್ಕೃತಿಕ ಕೇಂದ್ರವನ್ನು 1980ರಲ್ಲಿ ಸ್ಥಾಪಿಸುವಲ್ಲಿ ಅವರು ಪ್ರಮುಖ ಪಾತ್ರವನ್ನು ವಹಿಸಿದ್ದರು.

ಹದಿನೈದು ವರ್ಷಗಳ ಕಾಲ ಅದರ ಅಧ್ಯಕ್ಷರಾಗಿದ್ದಾಗ ಅವರ ನೇತೃತ್ವದಲ್ಲಿ ನಾಶ್‌ವಿಲ್‌ನಲ್ಲಿ ಭವ್ಯ ಗಣೇಶ ದೇವಾಲಯವನ್ನು ನಿರ್ಮಿಸಲಾಗಿತ್ತು. ಮಂಗಳೂರಿನ ಕಾವೂರಿನಲ್ಲಿ 1985ರಲ್ಲಿ ಸ್ಥಾಪಿಸಿದ ಸಪ್ತಗಿರಿ ಹೋಟೆಲ್‌ ಸಂಸ್ಥೆಯ ಅಧ್ಯಕ್ಷರಾಗಿದ್ದರಲ್ಲದೆ, ಸ್ಥಳೀಯ ಕಾರ್ಯಗಳಿಗೆ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡುವುದಕ್ಕಾಗಿ ಸಪ್ತಗಿರಿ ಫೌಂಡೇಷನ್ ಅನ್ನು 1989ರಲ್ಲಿ ಸ್ಥಾಪಿಸಿದ್ದರು.

ಡಾ. ಸೋಮಯಾಜಿ ಅವರ ನಿಧನಕ್ಕೆ ಖ್ಯಾತ ತಜ್ಞ ವೈದ್ಯರಾದ ಡಾ. ಶ್ರೀನಿವಾಸ್‌ ಕಕ್ಕಿಲಾಯ ಶ್ರದ್ಧಾಂಜಲ್ಲಿ ಸಲ್ಲಿಸಿದ್ದಾರೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com