Breaking News

ಹೀಗಿದೆ ನಿಮ್ಮ ಭಾನುವಾರದ ರಾಶಿಫಲ

 

ಮೇಷ: ದಾಂಪತ್ಯದಲ್ಲಿ ಅಶಾಂತಿ. ಕುಟುಂಬ ಸದಸ್ಯರೊಡನೆ ಮಾಡುವ ಪಾಲುದಾರಿಕೆ ವ್ಯಾಪಾರ ಹೋಟೆಲ್ ವ್ಯವಹಾರ ಲಾಭದಾಯಕ. 

ವೃಷಭ:  ಅಧಿಕಾರಿಗಳಿಗೆ ಶುಭವಾರ್ತೆ ಸಿಗಲಿದೆ. ಉದ್ಯಮಿಗಳಿಗೆ ಮತ್ತು ಕಾರ್ಮಿಕರ ನಡುವಿನ ಮನಃಸ್ತಾಪ ಅಂತ್ಯಗೊಳ್ಳಲಿದೆ. ಶೇರು ಮಾರುಕಟ್ಟೆಯಲ್ಲಿ ನಿರೀಕ್ಷಿತ ಲಾಭ ದೊರೆಯುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಪುರುಷರು ಸ್ತ್ರೀಯರ ಜತೆ ಆದಷ್ಟು ಸಂಯಮದಿಂದ ವರ್ತಿಸಿ.

ಮಿಥುನ:  ಉತ್ಸಾಹದಿಂದ ಕೆಲಸ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ, ವಿದ್ಯುತ್, ಇಂಧನ, ಸಾರಿಗೆ ಇಲಾಖೆಯಲ್ಲಿ ಕೆಲಸ ಮಾಡುವವರು ಎಚ್ಚರ ವಹಿಸಿರಿ, ಎಲ್ಲಾ ವ್ಯಾಪಾರಸ್ಥರಿಗೆ ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ, ಉದ್ಯಮಿಗಳ ಕಾರ್ಮಿಕರ ಸಮಸ್ಯೆ ಪರಿಹಾರ, ಸರ್ಕಾರಿ ಅಧಿಕಾರಿಗಳಿಂದ ಸಹಾಯ ದೊರೆತು ನಿಮ್ಮ ವ್ಯವಹಾರಗಳ ಅಡಚಣೆ ನಿವಾರಣೆ ಆಗಲಿದೆ.

ಕರ್ಕಾಟಕ: ಕುಟುಂಬ ಸದಸ್ಯರಲ್ಲಿ ಮದುವೆ ಯೋಗ. ದಂಪತಿಗೆ ಸಂತಾನ ಭಾಗ್ಯ. ಅದೃಷ್ಟ ನಿಮ್ಮ ಹತ್ತಿರ ಹುಡುಕಿ ಬರಲಿದೆ. ಆಧುನಿಕ ವ್ಯವಸಾಯ ಪ್ರಾರಂಭ ಮಾಡಲು ಸೂಕ್ತ ಸಮಯ.  ನಿಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸದಾ ಸಿಗಲಿದೆ.

ಸಿಂಹ: ಆಸ್ತಿಯ ಸಮಸ್ಯೆ ಬಗೆಹರಿಯಲಿದೆ. ಅಪರಿಚಿತರಿಂದ ದೂರ ಇರಬೇಕು. ಅನೈತಿಕ ಸಂಬಂಧದಿಂದ ಅಪವಾದ– ಅಪಮಾನಗಳು ಎದುರಿಸಬೇಕಾಗುತ್ತದೆ. ನಿಮ್ಮ ಆರೋಗ್ಯಕ್ಕಾಗಿ ಹೆಚ್ಚಿನ ಹಣ ವೆಚ್ಚ ಆಗಲಿದೆ.

ಕನ್ಯಾ: ವಿವಾಹದ ನಂತರ ಬಹುದೊಡ್ಡ ಭಾಗ್ಯ ಐಶ್ವರ್ಯ, ಅಂತಸ್ತು ಮನೆ, ವಾಹನಗಳನ್ನು ಪಡೆಯುವಿರಿ. ಅನೈತಿಕ ಸಂಬಂಧಗಳು ಕೆಲವೊಮ್ಮೆ ಮಾರಕ, ಗುತ್ತಿಗೆದಾರರು ದೊಡ್ಡ ದೊಡ್ಡ ಅಣೆಕಟ್ಟುಗಳ ನಿರ್ಮಾಣ ರಸ್ತೆ ನಿರ್ಮಾಣ ಆಕ್ಷನ್ಸ್ ದೊರೆಯುತ್ತದೆ. ಉದ್ಯೋಗಿಗಳು ಅನಾವಶ್ಯಕವಾಗಿ ಮೇಲಧಿಕಾರಿಗಳ ಜತೆ ವಾದ- ವಿವಾದ.

  1.  

ತುಲಾ: ಮನೆಗಾಗಿ ಐಷಾರಾಮದ ವಸ್ತುಗಳ ಖರೀದಿ, ಜಮೀನಿಗೆ ಸಂಬಂಧಿಸಿದ ವ್ಯವಹಾರದ ಕದನ, ಉದ್ಯೋಗ ಕ್ಷೇತ್ರದಲ್ಲಿ ಬೇರೆಯವರು ಮಾಡಿರುವ ಅಪರಾಧಕ್ಕೆ ತಾವು ಬಲಿ ಪಶುವಾಗುವ ಸಾಧ್ಯತೆ, ಸೋದರ ಮಾವನಲ್ಲಿ ಹಣಕಾಸಿನ ಬೇಡಿಕೆ, ಅತ್ತೆ-ಮಾವನ ಆಸ್ತಿಗಾಗಿ ಹೋರಾಟ.

ವೃಶ್ಚಿಕ: ಉದ್ಯೋಗ ಕ್ಷೇತ್ರದಲ್ಲಿ ಸ್ವಲ್ಪಮಟ್ಟಿಗೆ ಹೊಂದಾಣಿಕೆ ಮತ್ತು ಕಾಯುವುದು ಉತ್ತಮ, ಸರ್ಕಾರಿ ಉದ್ಯೋಗ ಪಡೆಯುವುದಕ್ಕಾಗಿ ಶ್ರಮ ವಹಿಸಬೇಕು, ನಿವೇಶನ ಖರೀದಿಸುವ ಯೋಗವಿದೆ, ರಾಜಕೀಯ ವ್ಯಕ್ತಿಗಳಿಗೆ ಅನುಯಾಯಿಗಳಿಂದ ತೊಂದರೆ ಸಂಭವ.

ಧನಸ್ಸು: ಪುರುಷರಿಗೆ ಹೃದಯದ ಸಮಸ್ಯೆ. ಹೆಣ್ಣುಮಕ್ಕಳಿಗೆ ಗರ್ಭಕೋಶ ಸೋಂಕು, ಮಂಡಿನೋವು ಶಸ್ತ್ರಚಿಕಿತ್ಸೆ ಸಮಸ್ಯೆ ಎದುರಾಗಬಹುದು. ಅಧಿಕಾರಿಗಳಿಗೆ ವೃತ್ತಿ ಕ್ಷೇತ್ರದಲ್ಲಿ ಧನ ಲಾಭ, ಮನೆ ಕಟ್ಟುವ ವಿಚಾರ. ಶಿಕ್ಷಕರಿಗೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಆರ್ಥಿಕ ಸಂಕಷ್ಟ.

ಮಕರ: ಮದುವೆ ಯೋಗ, ಮನೆ ಖರೀದಿ, ಕುಟುಂಬದಲ್ಲಿ ನೆಮ್ಮದಿ, ಹೊಸ ಆದಾಯದ ಮೂಲ ಹುಡುಕುವಿರಿ, ಉದ್ಯೋಗ ಬದಲಾವಣೆ ಬೇಡ, ಲೇವಾದೇವಿಗಾರರ ಲಾಭ, ಸಾಲಗಾರರಿಂದ ಕಿರಿಕಿರಿ, ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ.

ಕುಂಭ: ಕುಟುಂಬ ಸದಸ್ಯರಲ್ಲಿ ಕಂಕಣಬಲ ಕೂಡಿ ಬರಲಿದೆ, ಚಿನ್ನ ಖರೀದಿ, ವ್ಯಾಪಾರಿಗಳಿಗೆ ಲಾಭದ ಜತೆಗೆ ಬೇರೆ ಅವಕಾಶ ದೊರೆಯುವುದು, ಭೂ ಸಂಬಂಧಿಸಿದ ಕಾರ್ಯಗಳಿಗೆ ಆರ್ಥಿಕ ಚೇತರಿಕೆ, ಉದ್ಯೋಗದಲ್ಲಿ ಅಧಿಕ ಒತ್ತಡ ಜೀವನ ಜಿಗುಪ್ಸೆ ಉಂಟಾಗಲಿದೆ.

ಮೀನ: ಹೈನು ಉದ್ಯಮದಾರರಿಗೆ ಉತ್ತಮ ಆದಾಯ, ಪ್ರೇಮಿಗಳ ಗಟ್ಟಿತನದ ನಿರ್ಧಾರಗಳು ನಿಮ್ಮ ಮದುವೆಗೆ ಕಾರಣ, ವೃತ್ತಿಗೆ ಸಂಬಂಧಪಟ್ಟ ಬಹುಮುಖ್ಯವಾದ ಕಡತಗಳ ಬಗ್ಗೆ ಭೀತಿ, ಹೊಸ ಉದ್ಯೋಗ ಆರಂಭದಲ್ಲಿ ಸ್ವಲ್ಪ ಮಟ್ಟಿನ ಸಮಸ್ಯೆ, ಸ್ತ್ರೀ ಸಂಘ ಮತ್ತು ಮಹಿಳಾ ರಾಜಕಾರಣಿಗೆ ಉನ್ನತ ಸ್ಥಾನ ಸಿಗಲಿದೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com