Breaking News

ದೈವ ನರ್ತಕ, ಕೊರಗಜ್ಜ ಕ್ಷೇತ್ರದ ದೈವಾರಾಧಕ ಅಶೋಕ್ ಬಂಗೇರ ಹೃದಯಾಘಾತದಿಂದ ನಿಧನ

 

ಮಂಗಳೂರು: ದೈವ ನರ್ತನ ಮಾಡುವಾಗಲೇ ಎದೆ ನೋವು ಕಾಣಿಸಿಕೊಂಡ ಪರಿಣಾಮ ಪ್ರಸಿದ್ಧ ದೈವ ನರ್ತಕ ಪದವಿನಂಗಡಿ ಗಂಧಕಾಡು ನಿವಾಸಿ ಅಶೋಕ್ ಬಂಗೇರ (47)  ಸಾವನ್ನಪ್ಪಿದ್ದಾರೆ.

ಮೃತರಿಗೆ ತಾಯಿ, ಭಟ್ರಕುಮೇರು ಕೊರಗತನಿಯ ಕ್ಷೇತ್ರದ ದೈವಾರಾಧಕ ಭಾಸ್ಕರ್ ಬಂಗೇರ ಸೇರಿದಂತೆ ಐದು ಮಂದಿ ಸಹೋದರರು, ಪತ್ನಿ ಹಾಗೂ ಮೂವರು ಪುತ್ರಿಯರು ಹಾಗೂ ಅಪಾರ ಬಂಧುಗಳು ಇದ್ದಾರೆ.

ಶುಕ್ರವಾರ ರಾತ್ರಿ ಅವರು ಹಳೆಯಂಗಡಿ ಸಮೀಪ ರಕ್ತೇಶ್ವರಿ ದೈವದ ಕೋಲದಲ್ಲಿ ವೇಷ ಹಾಕಿದ್ದ ವೇಳೆ ಅವರಿಗೆ ಸುಸ್ತಾಗಿದ್ದರು, ಕೋಲ ಕೊನೆಯ ಘಟ್ಟದಲ್ಲಿದ್ದಾಗ ಎದೆ ನೋವು ಉಂಟಾಗಿದ್ದು, ಕೂಡಲೇ ಅವರು ವೇಷ ಕಳಚಿ ಕೋಲವನ್ನು ತಮ್ಮ ಸಹೋದರ ನಿರ್ವಹಿಸಲಿದ್ದಾರೆ ಎಂದು ಹೇಳಿದ್ದಾರೆ. ಈ  ಆದರೆ ಅವರಿಗೆ ಅಲ್ಲಿಯೇ ಇದ್ದ ವೈದ್ಯರೊಬ್ಬರು ಶುಗರ್ ಲೋ ಆಗಿರಬಹುದು ಎಂದು ಸಿಹಿ ಪದಾರ್ಥಗಳನ್ನು ನೀಡಲಾಗಿದೆ. ಅದರ ನಂತರ ಅವರು ಮನೆಗೆ ಬಂದು ವಿಶ್ರಾಂತಿ ಪಡೆದುಕೊಂಡಿದ್ದಾರೆ. ಶನಿವಾರ ಬೆಳಿಗ್ಗೆ ಮತ್ತೆ ಎದೆ ನೋವು ಕಾಣಿಸಿಕೊಂಡಿದೆ. ತುರ್ತು ಆಗಿ ಅಶೋಕ್ ಬಂಗೇರ ಅವರು ಆಸ್ಪತ್ರೆಗೆ ತೆರಳಿದ್ದಾರೆ. ಆಸ್ಪತ್ರೆಯಲ್ಲಿ ಹೃದಯಾಘಾತ ಉಂಟಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

  1.  

ಹಳೆಯಂಗಡಿ ಕೊಳುವೈಲು ರೆಂಜದಡಿ ಕುಟುಂಬಸ್ಥರ ದೈವಸ್ಥಾನದಲ್ಲಿ ನಿನ್ನೆ ರಾತ್ರಿ ರಕ್ತೇಶ್ವರಿ ದೈವದ ಕೋಲ ನಡೆದಿತ್ತು. ಅರ್ಧಕ್ಕೆ ನಿಲ್ಲಿಸಿದ್ದರಿಂದ ದೈವದ ಕೋಲವನ್ನು ಅಶೋಕ್ ಬಂಗೇರ ಅವರ ತಮ್ಮ ಪೂರ್ಣಗೊಳಿಸಿದ್ದರು.‌ ಅಶೋಕ್ ಬಂಗೇರ ಅವರ ದೈವ ನರ್ತನದ ಕೊನೆ ವಿಡಿಯೊ ಕೂಡ ಮೊಬೈಲಿನಲ್ಲಿ ಸೆರೆ ಆಗಿದೆ. ಅಶೋಕ್ ಬಂಗೇರ ಅವರು ಪದವಿನಂಗಡಿ ಕೊರಗಜ್ಜ ಕ್ಷೇತ್ರದ ದೈವಾರಾಧಕರಾಗಿದ್ದರು.  ಮೃತರ ನಿಧನಕ್ಕೆ ಹಲವು ಗಣ್ಯರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

Ashok Bangera (47), resident of Gandhakadu, a famous divine dancer, died as a result of chest pain while performing divine dance.

The deceased has five brothers, wife and three daughters including Bhaskar Bangera, a deity worshiper of Bhatrakumeru Koragatani Constituency and extended family.

On Friday night, when he was dressing up in the kola of Rakteshwari deity near the old shop, he felt tired, when the kola was in its last stage, he developed chest pain, and immediately he took off the costume and said that his brother would manage the kola. But a doctor who was there gave him sweets that could be low sugar. After that he came home and rested. On Saturday morning the chest pain appeared again. Ashok Bangera has gone to the hospital urgently. It is learned that he died of a heart attack in the hospital.

A Kola of Rakteshwari Deity was held last night at Kudumbasthara Deity of Old Koluvailu Renjadadi. Ashok Bangera had completed his daiva kola as it was stopped halfway. The last video of Ashok Bangera’s daiva dance was also recorded on the mobile. Ashok Bangera was the patron saint of Koragajja Constituency. Many dignitaries have paid tribute to the deceased.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com