Breaking News

ಹೀಗಿದೆ ನಿಮ್ಮ ಗುರುವಾರದ ರಾಶಿಫಲ

 

ಮೇಷ: ಈ ರಾಶಿಯವರು ನ್ಯಾಯ, ನೀತಿ ಧರ್ಮಕ್ಕೆ ತಲೆಬಾಗುವವರು, ಇವರು ಯಾರಿಗೂ ಭಯ ಪಡುವುದಿಲ್ಲ, ನೀವು ಸಂಗಾತಿಯನ್ನು ತುಂಬಾ ಪ್ರೀತಿಸುತ್ತಿರಿ. ನೀವು ಪಟ್ಟ ಶ್ರಮಕ್ಕೆ ಈಗ ಪ್ರತಿಫಲ ದೊರೆಯಲಿದೆ. ವ್ಯಾಪಾರ- ವ್ಯವಹಾರ ಮಾಡುವವರಿಗೆ ಹೊಸ ಆದಾಯ ಮೂಲ ಗೋಚರಿಸಲಿದೆ.

ವೃಷಭ: ರಾಜಕಾರಣಿಗಳು ಮತ್ತು ಜನಪ್ರತಿನಿಧಿಗಳು ಸಾರ್ವಜನಿಕ ಕ್ಷೇತ್ರಗಳಲ್ಲಿ ಹೆಚ್ಚು ಪ್ರಕಾಶಿಸುವವರು, ಇವರು ಅಸ್ಥಿರ ಮನಸ್ಸಿನಿಂದ ಉದ್ಯೋಗ ಆಗಾಗ ಬದಲಿಸುವರು, ಇವರು ಕೆಳದರ್ಜೆಯ ಉದ್ಯೋಗಿಗಳಿಂದ ತೊಂದರೆ ಅನುಭವಿಸಲಿದ್ದಾರೆ.

ಮಿಥುನ: ಕಾಯಕವೇ ಕೈಲಾಸ ಎಂದು ನಂಬಿರುವ ನಿಮಗೆ ಜವಾಬ್ದಾರಿ ಹೆಗಲೇರಲಿದೆ. ಕೆಲಸದಲ್ಲಿ ಸ್ವಲ್ಪ ಮಟ್ಟಿಗೆ ಒತ್ತಡ ಕಾಣಿಸಿಕೊಳ್ಳಲಿದೆ. ಹಣದ ಒಳಹರಿವು ಉತ್ತಮ. ಕೆಲಸದ ವಿಚಾರದಲ್ಲಿ ಸಹೋದ್ಯೋಗಿಗಳ ಜೊತೆ ವಾಗ್ವಾದ ಸಂಭವ. ನಿಮ್ಮ ಮದುವೆ ವಿಳಂಬ ಸಾಧ್ಯತೆಯಿದೆ.

ಕರ್ಕಾಟಕ:  ದುಡ್ಡಿನ ವಿಚಾರದಲ್ಲಿ ಮನಃಸ್ತಾಪ ಸಹಜ ಮುಂದುವರೆಯಲಿದೆ. ಪ್ರೇಮಿಗಳ ಮನಸ್ಸು ಚಂಚಲಚಿತ್ತತೆ ಇರುತ್ತದೆ. ಲಕ್ಷ್ಮಿ ತಾಂಡವ ಆದರೆ ಕೈಯಲ್ಲಿ ಹಣ ನಿಲ್ಲುವುದಿಲ್ಲ. ನಿಮಗೆ ಸಂಬಂಧ ಪಡದ ಸಂಗತಿಗಳಿಂದ ನಿಮ್ಮ ಮೇಲೆ ಅಪವಾದ ಬರುವ ಸಾಧ್ಯತೆ.

ಸಿಂಹ: ಸಂಗಾತಿ ಸಹಕಾರ ದೊರೆಯಲಿದೆ, ನಾಯಕನಾಗುವ ಎಲ್ಲಾ ಅಹರ್ತೆ ಇದೆ, ಅವಕಾಶಕ್ಕಾಗಿ ಕಾಯುವಿರಿ. ಮಾತಾಪಿತೃ ಆರೋಗ್ಯದ ಕಡೆ ಹೆಚ್ಚಿನ ನಿಗಾ ವಹಿಸಿ. ನಿಮ್ಮದಲ್ಲದ ತಪ್ಪಿಗ ಶಿಕ್ಷೆ ನುಭವಿಸಬೇಕಾದಿತು, ಇದು ಮಧ್ಯಸ್ಥಿಕೆ ಜನರ ಕುತಂತ್ರ.

ಕನ್ಯಾ: ಈ ರಾಶಿಯವರ ಜೀವನದಲ್ಲಿ ಬಹಳವೇ ಏರುಪೇರು ಅನುಭವಿಸುತ್ತೀರಿ, ಮನಸ್ಸು ಚಂಚಲ ಹೊಂದಿರುತ್ತೀರಿ, ನೀವು ಒಂದೇ ಕಡೆ ನಿಲುಗಡೆ ಇಲ್ಲ ಸದಾ ತಿರುಗಾಟ ಜೀವನ ಅನುಭವಿಸುತ್ತಿರಿ, ಸಂಸಾರದ ಕಡೆ ಬಹಳ ಚಿಂತಾಕ್ರಾಂತ, ನಿಮ್ಮ ಸಂಬಂಧ ಮತ್ತು ಪತ್ನಿ ಸಂಬಂಧ ಸಮಾನವಾಗಿ ನೋಡುವ ದೃಷ್ಟಿಕೋನ ನಿಮ್ಮದು.

  1.  

ತುಲಾ: ಸಾಹಸ ಕ್ರೀಡೆಯಿಂದ ತೊಂದರೆ, ದುಡ್ಡು ಗಳಿಸುವಲ್ಲಿ ಉತ್ತಮ ವಿದ್ಯೆ ಹೊಂದಿರುವಿರಿ, ಒಂದೊಂದು ಸಲ ನಿಮ್ಮ ದಾಂಪತ್ಯ ಜೀವನದಲ್ಲಿ ವ್ಯತ್ಯಾಸ ಆಗಬಹುದು, ನೀವು ಪ್ರವಾಸ ತುಂಬಾ ಇಷ್ಟಪಡುತ್ತೀರಿ, ಬಹುದಿನದಿಂದ ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗಲಿದೆ.

ವೃಶ್ಚಿಕ: ಹೊಸ ಆವಿಷ್ಕಾರ ಕಂಡು ಹಿಡಿಯುವ ಶಕ್ತಿ ನಿಮ್ಮಲ್ಲಿದೆ, ಏಕಕಾಲದಲ್ಲಿ ಎರಡು ಮೂರು ವ್ಯಾಪಾರ ಪ್ರಾರಂಭಿಸಿ ಲಾಭಗಳಿಸುವಿರಿ, ಜೀವನದಲ್ಲಿ ಬಹಳ ಆಶಾವಾದಿಗಳಾಗಿರುತ್ತೀರಿ ಬಯಸಿದ್ದೆಲ್ಲ ಪಡೆವ ಛಲ ನಿಮ್ಮಲ್ಲಿದೆ, ಪರರನ್ನು ಆಕರ್ಷಿಸುವ ವ್ಯಕ್ತಿತ್ವ ನಿಮ್ಮದಾಗಿದೆ, ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಗೊಂದಲ ಸೃಷ್ಟಿ.

ಧನಸ್ಸು: ದುಡಿಮೆಯಲ್ಲಿ ಶಕ್ತಿಶಾಲಿ ಉಳ್ಳವರು, ಪರರಿಗೆ ಕೈಲಾದ ಸಹಾಯ ಮಾಡುವರು, ಕೆಲವೇ ಕೆಲವು ವರ್ಷಗಳಲ್ಲಿ ಐಶ್ವರ್ಯವನ್ನು ಭೋಗ ಜೀವನ ಅನುಭವಿಸುವಿರಿ , ಪ್ರಯತ್ನ ತಕ್ಕಂತೆ ಫಲ ಸಿಗುವುದು, ಹಗಲುಗನಸು ಕಾಣುವುದನ್ನು ಬಿಡಬೇಕು.

ಮಕರ: ವಾಹನ ಚಾಲನೆ ವೇಳೆ ಎಚ್ಚರಿಕೆ ಇರಲಿ. ನಿಮ್ಮ ಅಜಾಗರೂಕತೆಯಿಂದ ಬೆಲೆಬಾಳುವ ವಸ್ತುಗಳು ಕಳೆದುಕೊಳ್ಳುವ ಸಂಭವ. ನಿಮ್ಮ ಅತಿಯಾದ ಕೋಪ ನಡವಳಿಕೆಯಿಂದ ಆಪ್ತರ ಜತೆಗೆ ಮನಃಸ್ತಾಪ ಆಗಬಹುದು. ಹಣಕಾಸು ವಿಚಾರದಲ್ಲಿ ಸಮತೋಲನ ಕಾಪಾಡಿಕೊಳ್ಳಿ. ನಿಮ್ಮ ಸಂಗಾತಿ ಜೊತೆ ಭಾವನಾತ್ಮಕವಾದ ವಿಚಾರದಲ್ಲಿ ಸೂಕ್ತವಾದ ತೀರ್ಮಾನವನ್ನು ತೆಗೆದುಕೊಳ್ಳಿ.

ಕುಂಭ: ನೀವು ಉದ್ಯೋಗದಲ್ಲಿ ಎಷ್ಟೇ ಪ್ರಾಮಾಣಿಕವಾಗಿ ಕೆಲಸ ಮಾಡಿದರೂ ಅಧಿಕಾರಿ ಜತೆ ನಿಷ್ಠುರಾಗುವಿರಿ, ಆಸ್ತಿ ಭೂಮಿ ಖರೀದಿ ಯೋಗ, ಸ್ತ್ರೀ ಸಂಬಂಧಿ ವಿಚಾರದಲ್ಲಿ ಅಶಾಂತಿ, ಸಾಲ ಭಾದೆಯಿಂದ ಋಣಮುಕ್ತಿ, ಲೇವಾದೇವಿಗಾರರರಿಗೆ ಸ್ವಲ್ಪಮಟ್ಟಿಗೆ ನೆಮ್ಮದಿ ಸಿಗಲಿದೆ.

ಮೀನ:  ಉದ್ಯೋಗಸ್ಥರಿಗೆ ಪ್ರಾಮುಖ್ಯತೆ ಹೆಚ್ಚಾಗಲಿದೆ. ಪ್ರೇಯಸಿ ಜತೆ ರುಚಿಕಟ್ಟಾದ ಊಟ- ತಿಂಡಿಯನ್ನು ಸವಿಯಲಿದ್ದೀರಿ. ದಂಪತಿಗೆ ಸಂಬಂಧಿಕರಿಂದ ಔತಣಕೂಟಕ್ಕೆ ಆಹ್ವಾನ ಬರಲಿದೆ. ದೇವತಾರಾಧನೆಗೆ ಕುಟುಂಬ ಸಮೇತ ಭಾಗವಹಿಸುವಿರಿ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com