Breaking News

ಜನಸಾಮಾನ್ಯರ ಭಾವನೆಗಳ ಜತೆ ರಾಜಕೀಯ ಸಲ್ಲದು: ಡಿಸಿಎಂ ಡಿ.ಕೆ. ಶಿವಕುಮಾರ್

 

ಮಂಗಳೂರು: ಜನರ ಭಾವನೆಗಳ ಜತೆಗೆ ರಾಜಕೀಯ ಚೆಲ್ಲಾಟ ಆಡುವುದನ್ನು ಪ್ರಬುದ್ಧ ಜನರು ಒಪ್ಪುವ ಮಾತೇ ಇಲ್ಲ.  ಜನರ ಬದುಕಲ್ಲಿ ಶಕ್ತಿ ತುಂಬುವ ಕೆಲಸ ಮಾಡಬೇಕು. ಅದನ್ನು ನಮ್ಮ ಸರಕಾರ ಮಾಡುತ್ತಿದೆ. ಭಾವನೆಗಳ ಮೂಲಕ ದೇಶ ಛಿದ್ರ ಮಾಡುವ ಶಕ್ತಿಗಳಿಂದ ದೇಶ ರಕ್ಷಣೆ ಮಾಡುವ ಹೊಣೆ ಜಾತ್ಯತೀತರಾದ ನಮ್ಮ ಹೊಣೆಗಾರಿಕೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪರೋಕ್ಷವಾಗಿ ಬಿಜೆಪಿ ವಿರುದ್ಧ ಕಿಡಿಕಾರಿದರು.

ಅಡ್ಯಾರ್  ಷಾ ಗಾರ್ಡನ್‌ನಲ್ಲಿ ನಡೆದ ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ (ಎಸ್‌ವೈಎಸ್) ದ 30 ನೇ ವಾರ್ಷಿಕ ಮಹಾ ಸಮ್ಮೇಳನವ ಉದ್ಘಾಟಿಸಿ ಅವರು ಮಾತನಾಡಿದರು.

ಧರ್ಮ ಯಾವುದಾದರೂ ತತ್ವ ಒಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ, ಕರ್ಮ ಹಲವಾದರೂ ನಿಷ್ಠೆ ಒಂದೇ, ದೇವನೊಬ್ಬ ನಾಮ ಹಲವು ಎಂಬುವುದನ್ನು ನಾವು ಒಪ್ಪಿಕೊಳ್ಳಬೇಕು. ಗಾಳಿ, ಸೂರ್ಯ, ಚಂದ್ರ, ನೀರಿಗೆ ಯಾವುದೇ ಜಾತಿ, ಧರ್ಮ ಬೇಧ ಇಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಮಾನವೀಯತೆಯೇ ಬದುಕುವ ಸಾರಗೊಳ್ಳಬೇಕು ಎಂದರು.

ದೇಶದ ಸಂವಿಧಾನವು ವಿದ್ವಾಂಸರಿಂದ, ಬುದ್ಧಿಜೀವಿಗಳಿಂದ ರಚಿಸಲ್ಪಟ್ಟಿವೆ. ಅದನ್ನು ಬದಲಾಯಿಸಲು ಯಾರಿಗೂ ಅಧಿಕಾರವಿಲ್ಲ. ಯಾವ ಕಾರಣಕ್ಕೂ ಸಂವಿಧಾನ ಬದಲಾಯಿಸಲು ನಾವು ಬಿಡುವುದಿಲ್ಲ ಎಂದು ಭಾರತದ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಹೇಳಿದರು.

  1.  

ಪರಂಪರೆಯ ಪ್ರತಿನಿಧಿಗಳಾಗೋಣ ಎಂಬ ಧ್ಯೇಯವಾಕ್ಯದಡಿ ನಡೆದ ಸಮ್ಮೇಳನದ ಪೂರ್ವಭಾವಿಯಾಗಿ ನಗರದ ಪಡೀಲ್‌ನಿಂದ ಅಡ್ಯಾರ್ ಷಾ ಗಾರ್ಡನ್‌ವರೆಗೆ ಆಕರ್ಷಕ ರ‍್ಯಾಲಿ  ನಡೆಯಿತು.

ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ಹಾಜಿ ಬಿ.ಎಂ. ಮುಮ್ತಾಝ್ ಅಲಿ ಪ್ರಾಸ್ತಾವಿಕ ಮಾತನಾಡಿದರು.

ಎಸ್‌ವೈಎಸ್ ರಾಜ್ಯಾಧ್ಯಕ್ಷ ಅಬ್ದುಲ್ ಹಫೀಲ್ ಸಅದಿ ಕೊಳಕೇರಿ ಸ್ವಾಗತಿಸಿದರು. ಸ್ವಾಗತ ಸಮಿತಿಯ ಕೋಶಾಧಿಕಾರಿ ಕೆ.ಎಂ. ಶಾಫಿ ಸಅದಿ ಬೆಂಗಳೂರು ಠರಾವು ಮಂಡಿಸಿದರು. ಸ್ವಾಗತ ಸಮಿತಿಯ ಮುಖ್ಯ ಸಂಯೋಜಕ ಡಾ. ಎಮ್ಮೆಸ್ಸೆಂ ಝೈನಿ ಕಾಮಿಲ್ ಮತ್ತು ಕೆ.ಎಂ. ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ಕಾರ್ಯಕ್ರಮ ನಿರೂಪಿಸಿದರು.

ವೇದಿಕೆಯಲ್ಲಿ ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್, ರಾಜ್ಯ ಹಜ್ ಸಚಿವ ರಹೀಂ ಖಾನ್, ಶಾಸಕರಾದ ಬಿ.ಎಂ. ಫಾರೂಕ್, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಯೆನೆಪೊಯ ವಿವಿಯ ಕುಲಾಧಿಪತಿ ವೈ. ಅಬ್ದುಲ್ಲಾ ಕುಂಞಿ, ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಹಾಜಿ ಕೆಎಸ್ ಮುಹಮ್ಮದ್ ಮಸೂದ್, ಕರ್ನಾಟಕ ಜಂ ಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಕೆ.ಪಿ. ಹುಸೈನ್ ಸಅದಿ ಕೆ.ಸಿ.ರೋಡ್, ಸಯ್ಯಿದ್ ಖಲೀಲುಲ್ ಬುಖಾರಿ ತಂಙಳ್, ಸಯ್ಯಿದ್ ಕೂರತ್ ತಂಙಳ್, ಪೆರೋಡ್ ಅಬ್ದುರ‌್ರಹ್ಮಾನ್ ಸಖಾಫಿ, ಡಾ. ಹಝ್ರತ್ ಫಾಝಿಲ್ ರಝ್ವಿ ಕಾವಲಕಟ್ಟೆ, ರಾಜೀವ್ ಗಾಂಧಿ ವಿವಿಯ ಸಿಂಡಿಕೇಟ್ ಸದಸ್ಯ ಯು.ಟಿ. ಇಫ್ತಿಕಾರ್ ಅಲಿ, ಮಾಜಿ ಶಾಸಕರಾದ ಮೊಯ್ದಿನ್ ಬಾವ, ಐವನ್ ಡಿಸೋಜ, ಕೇರಳದ ಶಾಸಕ ರೋಝಿ ಜಾನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಇನಾಯತ್ ಅಲಿ ಮುಲ್ಕಿ, ಮಿಥುನ್ ರೈ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಜಿ.ಎ.ಬಾವ, ಕಣಚೂರು ಮೋನು, ಇಸ್ಮಾಯಿಲ್ ತಂಙಳ್ ಉಜಿರೆ, ಅಬೂಸ್ವಾಲಿಹ್ ಉಸ್ತಾದ್ ಕಿಲ್ಲೂರು, ಜಿಎಂ ಕಾಮಿಲ್ ಸಖಾಫಿ, ಪಳ್ಳಂಗೋಡು ಅಬ್ದುಲ್ ಖಾದರ್ ಮದನಿ, ಅಬೂಸುಫ್ಯಾನ್ ಮದನಿ, ಸೈಯದ್ ಪೆರುವಾಯಿ ತಂಙಳ್, ಸುಫಿಯಾನ್ ಸಖಾಫಿ, ಹೈದ್ರೋಸ್ ತಂಙಳ್ ಕೊಡಗು, ಎಪಿಎಸ್ ತಂಙಳ್ ಚಿಕ್ಕಮಗಳೂರು, ಸೈಯದ್ ಅಶ್ರಫ್ ತಂಙಳ್ ಆದೂರು, ಜಲಾಲ್ ತಂಙಳ್ ಪೊಸೋಟ್, ಶಿಹಾಬ್ ತಂಙಳ್ ತಲಕ್ಕಿ, ಮುಹಿಯ್ಯುದ್ದೀನ್ ಸಖಾಫಿ ತೋಕೆ, ನ್ಯಾಷನಲ್ ಅಬ್ದುಲ್ ರಹ್ಮಾನ್ ತೀರ್ಥಹಳ್ಳಿ, ಎಸ್.ಎಂ. ರಶೀದ್ ಹಾಜಿ, ರಕ್ಷಿತ್ ಶಿವರಾಂ, ಕೆ.ಕೆ. ಶಾಹುಲ್ ಹಮೀದ್ ಇದ್ದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com