Breaking News

ರಾಜ್ಯಮಟ್ಟದ ಪುರುಷರ ಕೊಕ್ಕೊ: ಆಳ್ವಾಸ್ ಗೆ ಒಲಿದ ಚಾಂಪಿಯನ್ ಕಿರೀಟ್

 

ಮೂಡುಬಿದಿರೆ: ವಿಜಯನಗರದ ಕೊಟ್ಟೂರಿನಲ್ಲಿ ಜ. 19 ರಿಂದ 21 ರವರಿಗೆ ನಡೆದ ರಾಜ್ಯ ಮಟ್ಟದ ಪುರುಷರ ಹಾಗೂ 18 ವರ್ಷದ ವಯೋಮಿತಿ ಒಳಗಿನ ಬಾಲಕಿಯರ ಕೊಕ್ಕೊ ಟೂರ್ನಿಯಲ್ಲಿ ಆಳ್ವಾಸ್ ತಂಡವು ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಬಾಚಿಕೊಂಡಿದೆ.
ಪುರುಷರ ವಿಭಾಗದಲ್ಲಿ ಆಳ್ವಾಸ್ ತಂಡವು ಪ್ರಥಮ ಸ್ಥಾನ ಪಡೆದು ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ದಾವಣಗೆರೆ ಡಿವೈಇಎಸ್ ಕಾಲೇಜು ದ್ವಿತೀಯ, ಬೆಂಗಳೂರಿನ ವೈಪಿಎಸ್‌ಸಿ ಕಾಲೇಜು ತೃತೀಯ ಹಾಗೂ ಭದ್ರಾವತಿ ಸರ್ ಎಂ.
ವಿ. ಕಾಲೇಜು ಚತುರ್ಥ ಸ್ಥಾನವನ್ನು ಪಡೆದಿದ್ದಾರೆ.

  1.  

ಬಾಲಕಿಯರ ವಿಭಾಗದಲ್ಲಿ ಮೈಸೂರಿನ ಕಾವೇರಿ ಕಪಿಲಾ ತಂಡವು ಪ್ರಥಮ ಸ್ಥಾನ ಪಡೆದಿದ್ದು, ಆಳ್ವಾಸ್ ತಂಡವು ದ್ವಿತೀಯ ಸ್ಥಾನ ಪಡೆಯಿತು. ಈ ವಿಭಾಗದಲ್ಲಿ ಬೆಂಗಳೂರಿನ ಬಿಸಿವೈಎ ತೃತೀಯ ಹಾಗೂ ಖ್ಯಾತನಹಳ್ಳಿಯ ಕೆಕೆಓ ತಂಡ ನಾಲ್ಕನೇ ಸ್ಥಾನ ಪಡೆಯಿತು.
ಆಳ್ವಾಸ್ ತಂಡದ ಆಟಗಾರರನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com