Breaking News

ಉ.ಕ ಜಿಲ್ಲೆಯಲ್ಲಿ 12,07,433 ಮತದಾರರು: ಡಿಸಿ ಗಂಗೂಬಾಯಿ ಮಾನಕರ

 

ಕಾರವಾರ: ಜಿಲ್ಲೆಯ ಅಂತಿಮ ಮತದಾರರ ಪಟ್ಟಿಯಲ್ಲಿ ಪ್ರಸ್ತುತ 6,04,466 ಪುರುಷರು ಮತ್ತು 6,02,961
ಮಹಿಳೆಯರು ಹಾಗೂ 6 ಇತರೆ ಸೇರಿದಂತೆ ಒಟ್ಟು 12,07,433 ಮತದಾರರು ಇದ್ದಾರೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ರಾಜಕೀಯ ಪಕ್ಷದ ಮುಖಂಡರಿಗೆ ಮತದಾರರ ಅಂತಿಮ ಪಟ್ಟಿಯನ್ನು ವಿತರಿಸಿ ಅವರು ಮಾತನಾಡಿದರು.

ಜ.1 ರಂದು ಅರ್ಹತಾ ದಿನದಂತೆ ಅಂತಿಮ ಮತದಾರರ ಪಟ್ಟಿಯನ್ನು ಜ.22 ರಂದು ಜಿಲ್ಲೆಯ ಎಲ್ಲ ಮತದಾರರ ನೋಂದಣಾಧಿಕಾರಿ (ಸಹಾಯಕ ಆಯುಕ್ತರ) ಕಚೇರಿ, ಸಹಾಯಕ ಮತದಾರರ ನೋಂದಣಾಧಿಕಾರಿ (ತಹಶೀಲ್ದಾರ) ಕಚೇರಿ ಹಾಗೂ ಆಯಾ ಮತಗಟ್ಟೆಗಳಲ್ಲಿ ಪ್ರಕಟಿಸಲಾಗಿದೆ. ಮತದಾರರ ಪಟ್ಟಿಯನ್ನು ಪಾರದರ್ಶಕವಾಗಿ ಪ್ರಕಟಿಸಲಾಗಿದ್ದು, ಯಾವುದೇ ಆಕ್ಷೇಪಗಳಿದ್ದರೆ ಫೆಬ್ರವರಿ ಅಂತ್ಯದೊಳಗೆ ಮಾಹಿತಿ ನೀಡುವಂತೆ ಸೂಚಿಸಿದ ಅವರು, ಅ.27 ರಂದು ಪ್ರಕಟಿಸಿದ ಕರಡು ಮತದಾರರ ಪಟ್ಟಿಯಲ್ಲಿ ಒಟ್ಟು 11,98,532 ಮತದಾರರಿದ್ದು, ಪ್ರಸ್ತುತ 8,901 ಮತದಾರರ ಸಂಖ್ಯೆ ಹೆಚ್ಚಾಗಿದೆ ಎಂದು ಮಾಹಿತಿ ನೀಡಿದರು.

  1.  

2024ರ ಲೋಕಸಭಾ ಚುನಾವಣೆ ಸಂಬಂಧ ಜಿಲ್ಲೆಯಲ್ಲಿ ಒಟ್ಟು 29,229 ಹಿರಿಯ ನಾಗರೀಕ ಮತದಾರರು, 24,399 ಯುವ ಮತದಾರರು, ಹಾಗೂ 15,579 ವಿಕಲಚೇತನ ಮತದಾರರಿದ್ದಾರೆ. ಚುನಾವಣಾ ಆಯೋಗದಿಂದ ಜಿಲ್ಲೆಗೆ ನಿಯೋಜಿಸಿದ ಮತದಾರರ ಪಟ್ಟಿ ವೀಕ್ಷಕರು ಜಿಲ್ಲೆಗೆ ಭೇಟಿ ನೀಡಿ, ಜಿಲ್ಲೆಯ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸೇರ್ಪಡೆ, ತೆಗೆದು ಹಾಕುವಿಕೆ ಮುಂತಾದ ಅಂಶಗಳನ್ನು ಪರಿಶೀಲಿಸಿ ಚುನಾವಣಾ ಆಯೋಗಕ್ಕೆ ಈಗಾಗಲೇ ವರದಿಯನ್ನು ಸಲ್ಲಿಸಿದ್ದು, ಜಿಲ್ಲೆಯ ಮತದಾರರು ತಮ್ಮ ಹೆಸರು ಮತ್ತು ವಿವರಗಳು ಸರಿಇವೆಯೇ ಎಂಬ ಬಗ್ಗೆ ತಿಳಿದುಕೊಳ್ಳಲು ಸಂಬಂಧಪಟ್ಟ ಮತಗಟ್ಟೆ ಬೂತ್ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳುವುದು ಅಥವಾ ಸಂಬಂಧಪಟ್ಟ ತಹಶೀಲ್ದಾರ ಕಚೇರಿ ಅಥವಾ https://ceo.karnataka.gov.in ಮತ್ತು https://uttarakannada.nic.in ನಲ್ಲಿ ಸಹ ಪಡೆದುಕೊಳ್ಳಬಹುದಾಗಿದೆ ಎಂದರು.

2024 ರ ಲೋಕಸಭಾ ಚುನಾವಣೆ ಸಂಬಂಧ ಜಿಲ್ಲೆಗೆ ಒಟ್ಟು 1945 ಕಂಟ್ರೋಲ್‍ಂ ಯೂನಿಟ್, 2756 ಬ್ಯಾಲೆಟ್ ಯುನಿಟ್ ಹಾಗೂ 2035 ವಿವಿಪ್ಯಾಟ್‍ಗಳು ಹಂಚಿಕೆಯಾಗಿದ್ದು, ಪ್ರಥಮ ಹಂತದ ಪರಿಶೀಲನೆ ಪೂರ್ಣಗೊಳಿಸಲಾಗಿದೆ ಎಂದರು

ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಉಪವಿಭಾಗಾಧಿಕಾರಿ ಕನಿಷ್ಕ, ಕಾಂಗ್ರೆಸ್ ಸಮೀರ್‌ ನಾಯ್ಕ್‌, ಬಿಜೆಪಿ ಪಕ್ಷದ ಮನೋಜ್ ಭಟ್ ಇದ್ದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com