Breaking News

ಸಿರಸಿ ಮಾರಿಕಾಂಬಾ ಜಾತ್ರೆ ಮಾರ್ಚ್‌ 19 ರಿಂದ; 5 ಲಕ್ಷ ಮಂದಿ ಭಕ್ತರು ಸೇರುವ ನಿರೀಕ್ಷೆ!

 

ಸಿರಸಿ : ಮಾರಿಕಾಂಬಾ ದೇವಿ ಜಾತ್ರೆಗೆ ಮತ್ತೆ ಕ್ಷಣಗಣನೆ ಶುರುವಾಗಿದೆ. ತನ್ನದೇ ವಿಶಿಷ್ಟತೆ ಅಲಂಕರಿಸಿಕೊಂಡಿರುವ ಮಾರಿಕಾಂಬೆಯ ಭಕ್ತರು ಮತ್ತೆ ಜಾತ್ರೆಯ ಸೊಬಗನ್ನು ತುಂಬಿಕೊಳ್ಳಬಹುದು, ಜಾತ್ರೆಯಲ್ಲಿ ಈ ಬಾರಿ 5 ಲಕ್ಷಕ್ಕೂ ಹೆಚ್ಚು ಜನರು ಅಮ್ಮನ ವೈಭವ ಕಣ್ತುಂಬಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ.

ಮಹಿಳೆಯರಿಗೆ ಈ ಬಾರಿ ಸರಕಾರ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿರುವುದರಿಂದ ರಾಜ್ಯದ ಮೂಲೆ ಮೂಲೆಗಳಿಂದ ಮಹಿಳೆಯರು ಅಮ್ಮನ ದರ್ಶನಕ್ಕೆ ಹರಿದು ಬರುವ ಸಾಧ್ಯತೆ ಇದೆ. ಜಾತ್ರೆಯ ಮೊದಲ ದಿನವೇ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಹರಿದು ಬರುವ ಸಾಧ್ಯತೆ ಇದ್ದು, ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆಗೆ ಇದು ಸವಾಲಾಗಿ ಪರಿಣಮಿಸಬಹುದು.

  1.  

ರಾಜ್ಯದ ದೊಡ್ಡ ಸಿರಸಿ ಮಾರಿಕಾಂಬಾ ದೇವಿ ಜಾತ್ರೆ ಮಾರ್ಚ್‌ 19 ರಿಂದ 27 ರವರಿಗೆ ನಡೆಯಲಿದೆ. ನಗರದ ಮಾರಿಕಾಂಬಾ ದೇವಾಲಯದಲ್ಲಿ ನಡೆದ ಜಾತ್ರಾ ಮುಹೂರ್ತ ನಿಗದಿ ಕಾರ್ಯಕ್ರಮದಲ್ಲಿ ಮುಹೂರ್ತ ನಿಗದಿ ಆಗಿದೆ. ಈ ಬಾರಿ ಭಕ್ತರು ಹೆಚ್ಚು ಸೇರುವುದರಿಂದ ಜಿಲ್ಲಾಡಳಿತಕ್ಕೂ ಇದು ಸವಾಲಾಗಿ ಪರಿಣಮಿಸಲಿದೆ.

ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆವ ಜಾತ್ರಾ ಪೂರ್ವ ವಿಧಿಗಳು ಜ. 31 ರಿಂದ ಪ್ರಾರಂಭವಾಗಲಿವೆ. ಮಾರ್ಚ್ 19 ರಂದು ದೇವಿ ರಥದ ಕಳಶ ಪ್ರತಿಷ್ಠೆ ಮತ್ತು ಕಲ್ಯಾಣ ಪ್ರತಿಷ್ಠೆ ಹಾಗೂ ಮಾರ್ಚ್ 20 ರಂದು ರಥೋತ್ಸವ ನೆರವೇರಲಿದೆ. ನಂತರ ರಾಜ್ಯದ ವಿವಿ ಕಡೆಗಳಿಂದ ಬರುವ ಲಕ್ಷಾಂತರ ಜನರು ಎಂಟು ದಿನಗಳ ಕಾಲ ಜಾತ್ರೆಯ ಗದ್ದುಗೆಯಲ್ಲಿ ಪ್ರತಿಷ್ಠಾಪನೆಗೊಳ್ಳುವ ದೇವಿಯ ದರ್ಶನವನ್ನು ಪಡೆದು ಹರಕೆ ಸಮರ್ಪಣೆ ಮಾಡಲಾಲಿದ್ದಾರೆ.

ಮಾರ್ಚ್‌ 21 ರಿಂದ ಜಾತ್ರೆಯ ಗದ್ದುಗೆಯಲ್ಲಿ ಸೇವೆಗೆ ಅವಕಾಶ ಇರಲಿದೆ. 27 ರಂದು ಜಾತ್ರಾ ವಿಧಿಗಳು ಮುಗಿಯಲಿದ್ದು, ಯುಗಾದಿಗೆ ದೇವಾಲಯದಲ್ಲಿ ಮಾರಿಕಾಂಬಾ ದೇವಿ ಪುನರ್ ಪ್ರತಿಷ್ಠೆ ಆಗಲಿದೆ ಎಂದು ತಿಳಿಸಲಾಗಿದೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com