Breaking News

ಆರ್ಥಿಕ ಸ್ವಾವಲಂಬನೆಗೆ ವಿಕಸಿತ ಭಾರತ್‌ ಸಂಕಲ್ಪ ಸಹಕಾರಿ: ವೆಂಕಟೇಶ ನಾಯ್ಕ

 

ಸಿರಸಿ: ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಲು ಹಮ್ಮಿಕೊಂಡಿದ್ದ ವಿಕಸಿತ ಭಾರತ್ ಸಂಕಲ್ಪ ಯಾತ್ರೆ‌ಯನ್ನು ಸಿರಸಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಸ್ಕೂಡ್‌ ವೇಸ್ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ‌ ವೆಂಕಟೇಶ ನಾಯ್ಕ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕೇಂದ್ರ ಸರಕಾರದಿಂದ ಸಿಗುವ ಸಹಾಯಧನ ಸೇರಿದಂತೆ ವಿವಿಧ ಯೋಜನೆಗಳನ್ನು ಬಳಕೆ ಮಾಡಿಕೊಂಡು ಸ್ವಯಂ ಉದ್ಯೋಗದ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧ್ಯ ಆಗಲಿದ್ದು, ಯುವಪೀಳಿಗೆ ಈ ಬಗ್ಗೆ ಚಿಂತನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಸಂಪನ್ಮೂಲ ಅಧಿಕಾರಿ ಸುಜಯ್ ಭಟ್ ಅವರು ಮಾತನಾಡಿ, ಸರಕಾರದ ವಿವಿಧ ಸಹಾಯಧನದ ಯೋಜನೆಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಪಾಲ್ಗೊಂಡಿದ್ದರು.ದಿವ್ಯಾ ಶೇಟ್ ಪ್ರಾರ್ಥನೆ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಜಿಲ್ಲಾ ಲೀಡ್‌ ಬ್ಯಾಂಕ್ ಮುಖ್ಯಸ್ ಪ್ರಶಾಂತ್ ನಾಯ್ಕ, ಕೆನರಾ ಬ್ಯಾಂಕ್ ಸಿ ಪಿ ಬಝಾರ್ ಶಾಖೆಯ ಮುಖ್ಯ ಪ್ರಬಂಧಕ ಮಹೇಶ್ ಹೆಗಡೆ ಹಾಗೂ ಬ್ಯಾಂಕ್‌ ನ ಅಧಿಕಾರಿ ಜಗದೀಶ್ ಜಿ ಬಿ ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು.

  1.  

Vikasita Bharat Sankalpa Yatra, which was organized to provide information about various schemes of the Central Government, was organized in Sirasi.

Venkatesh Nayka, Chief Operating Officer of Scud Ways, inaugurated the program and said that financial self-sufficiency will be possible through self-employment by utilizing various schemes including subsidies from the central government, and said that the youth should think about this.
District Resource Officer Sujay Bhatt spoke and gave information about various subsidy schemes of the government.

Scientists from the Agricultural Science Center participated in the program. The program started with a prayer song by Divya Shet. District Lead Bank Chief Prashant Nayka, Canara Bank CP Bazar Branch Chief Manager Mahesh Hegde and bank officer Jagdish GB were present.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com