Breaking News

ಹೀಗಿದೆ ನಿಮ್ಮ ಭಾನುವಾರದ ರಾಶಿಫಲ

 

ಮೇಷ: ನಿಮ್ಮ ಹೊಣೆಗಾರಿಕೆ ನಿಭಾಯಿಸಲು ಕಷ್ಟ ಪಡುವ ಸಾಧ್ಯತೆ ಇದೆ. ಹತಾಶೆಗೆ ತಳ್ಳುವ ಬೆಳವಣಿಗೆ. ಮನಸ್ಸಿಗೆ ಸಂತೋಷ ಕೊಡುವ ವಿಚಾರದ ಕಡೆಗೆ ಗಮನ ಹರಿಸಿ.

ವೃಷಭ: ಪ್ರೀತಿ ಪಾತ್ರರಲ್ಲಿ ನಿಮ್ಮ ಭಾವನೆ ವ್ಯಕ್ತಪಡಿಸಿ. ಪೂರಕ ಸ್ಪಂದನೆ ದೊರಕುವುದು. ಕೆಲ ವಿಷಯ ಮನದಲ್ಲಿ ಇಟ್ಟುಕೊಂಡು ಕೊರಗುತ್ತಿರುವ ಬದಲು ಮುಂದೇ ಹೆಜ್ಜೆ ಹಾಕಿರಿ.

ಮಿಥುನ: ಬಾಕಿ ಉಳಿದ ಕಾರ್ಯಗಳನ್ನು ಮಾಡಲು ಗಮನ ಕೇಂದ್ರೀಕರಿಸಿ. ಹಿನ್ನಡೆ ಆಗುತ್ತದೆ ಎಂದು ಹೆದರಿಕೆ ಬೇಡ. ಕಷ್ಟದ ಕಾರ್ಯವೂ ಸುಗಮವಾಗಿ ಮಂಜಿನಂತೆ ಕರಗಲಿದೆ.

ಕಟಕ: ಇತರರ ಕಷ್ಟ,ಸುಖಕ್ಕೆ ಸ್ಪಂದಿಸುವಿರಿ. ಇದರಿಂದ ಅವರ ಪ್ರೀತಿ ಗಳಿಸುವಿರಿ. ಆದರೆ, ನಿಮ್ಮ ದೌರ್ಬಲ್ಯ ಇತರರಿಗೆ ತೋರಿಸಬೇಡಿ. ಹಳೆಯ ನೆನಪು ಕೆದಕುವ ಸ್ನೇಹಿತರ ಭೇಟಿ ಸಾಧ್ಯತೆ.

ಸಿಂಹ: ಹೆಚ್ಚಿನ ಆತ್ಮವಿಶ್ವಾಸ ನಿಮ್ಮಲ್ಲಿ ಈ ದಿನ ಕಂಡು ಬರಲಿದೆ. ಕಾರ್ಯದಲ್ಲಿ ಉತ್ಸಾಹ. ಮುಖ್ಯ ಕಾರ್ಯ ಮಾಡುವ ಮುನ್ನ ಅದರ ಸಾಧಕ ಬಾಧಕ ಯೋಚನೆ ಮಾಡಿ, ಕೌಟುಂಬಿಕ ಸಹಕಾರ ಅಗತ್ಯ.

ಕನ್ಯಾ: ಬೆಳಗಿನ ಹೊತ್ತು ಕುಂದಿದ ಮನಸ್ಸು. ಕೆಲಸದಲ್ಲಿ ನಿರಾಸಕ್ತಿ. ಆದರೆ ಬಳಿಕ ನಿಮ್ಮ ಹೊಣೆಯತ್ತ ಗಮನ ಹರಿಸುತ್ತಾ ಉಲ್ಲಾಸ ಪಡೆಯುವಿರಿ.

  1.  

ತುಲಾ: ಇಂದು ನಿಮಗೆ ಕೆಲಸದ ಒತ್ತಡ ಹೆಚ್ಚಾಗಿ ಇರಲಿದೆ. ಎಲ್ಲವೂ ಸುಲಭ ಎಂದು ನೀವು ಭಾವಿಸಿದರೂ, ಅದರ ಕಷ್ಟ ಅರಿವಾಗಲಿದೆ. ಹೊಟ್ಟೆ ಕೆಡುವ ಸಂಭವವಿದೆ. ಮಿತವಾದ ಆಹಾರ ಸೇವನೆ ಒಳ್ಳೆಯದು.

ವೃಶ್ಚಿಕ: ಸಮಸ್ಯೆಯಿಂದಲೇ ದಿನದ ಆರಂಭ. ಆದರೆ, ದಿನ ಕಳೆದಂತೆ ಸಮಸ್ಯೆ ಪರಿಹಾರ ಕಾಣುವುದು. ದಿನದ ಅಂತ್ಯಕ್ಕೆ ತೃಪ್ತಿ, ನಿರಾಳತೆ ಪಡೆಯುವಿರಿ. ಕೌಟುಂಬಿಕ ಶಾಂತಿ ಸಿಗಲಿದೆ.

ಧನು: ನೀವು ಎದುರಿಸುವ ಪ್ರತಿ ಪರಿಸ್ಥಿತಿಯನ್ನೂ ಸಮಾಧಾನದಿಂದ ನಿಭಾಯಿಸಿ. ತಕ್ಷಣದ ಪ್ರತಿಕ್ರಿಯೆ ತೋರಿ ನಿಮಗೆ ನೀವೇ ಹಾನಿ ತಂದುಕೊಳ್ಳದಿರಿ.

ಮಕರ: ಸಫಲ ದಿನ. ಸಮಸ್ಯೆ ಎದುರಾದರೂ ಅದನ್ನು ಸಮರ್ಥವಾಗಿ ನಿಭಾಯಿಸುವಿರಿ. ಬಾಕಿ ಇರುವ ಕಾರ್ಯ ಪೂರೈಸುವಿರಿ. ಆರೋಗ್ಯವೂ ಸುಸ್ಥಿರವಾಗಿ ಇರಲಿದೆ.

ಕುಂಭ: ಸಣ್ಣ ವಿಷಯಗಳನ್ನು ಬಹುವಾಗಿ ಹಿಗ್ಗಿಸದಿರಿ. ಅದು ನಿಮ್ಮ ಶಾಂತಿ ಕದಡುವುದು. ಕೆಲವು ವಿಚಾರ ಕಡೆಗಣಿಸಿದರೇ ನಿಮಗೆ ಒಳಿತು. ಆಪ್ತರಿಂದ ಸಾಂತ್ವನ.

ಮೀನ: ವಿರಾಮದಿಂದ ದಿನ ಕಳೆಯುವ ಉದ್ದೇಶವಿದ್ದರೂ ಕೆಲಸದ ಹೊರೆ ಹೆಚ್ಚುವುದು. ಕೌಟುಂಬಿಕ ಭಿನ್ನಮತ ಉಂಟಾಗುವ ಸಾಧ್ಯತೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com