Breaking News

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಸಚಿವೆಯಾಗಿ ಜಯಲಕ್ಷ್ಮಿ ರಾಯಕೋಡ್ ಅಧಿಕಾರ ಸ್ವೀಕಾರ

 

ಧಾರವಾಡ: ಕೃಷಿ ವಿಶ್ವವಿದ್ಯಾಲಯದ ಕುಲಸಚಿವೆಯಾಗಿ ಹಿರಿಯ ಶ್ರೇಣಿಯ ಕೆಎಎಸ್ ಅಧಿಕಾರಿ ಜಯಲಕ್ಷ್ಮಿ ರಾಯಕೋಡ್ ಅವರು ಅಧಿಕಾರ ವಹಿಸಿಕೊಂಡರು.

ಉತ್ತರ ಕನ್ನಡ ಜಿಲ್ಲೆಯ ಕಾರವಾರ ಉಪವಿಭಾಗಾಧಿಕಾರಿ ಆಗಿದ್ದ ಅವರನ್ನು ಸರಕಾರವು ಧಾರವಾರ ಕೃಷಿ ವಿಶ್ವವಿದ್ಯಾಲಯದ ಕುಲಸಚಿವರನ್ನಾಗಿ ವರ್ಗಾವಣೆ ಮಾಡಿತ್ತು.

ಜಯಲಕ್ಷ್ಮಿ ರಾಯಕೋಡ್ ಅವರು ಕಾರವಾರ ಉಪವಿಭಾಗದ ವಿಭಾಗಾಧಿಕಾರಿ ಆಗಿದ್ದ ವೇಳೆ ಸಾಕಷ್ಟು ಜನಮನ್ನಣೆ ಕೂಡ ಪಡೆದುಕೊಂಡಿದ್ದಾರೆ. ಆರು ತಿಂಗಳು ಹಿಂದೇ ಅವರನ್ನು ವರ್ಗಾವಣೆ ಮಾಡಲಾಗಿತ್ತು, ಆದರೆ ಅವರ ವರ್ಗಾವಣೆ ಆದೇಶವನ್ನು ರದ್ದುಗೊಳಿಸಿ ಅದೇ ಹುದ್ದೆಯಲ್ಲಿ ಮುಂದುವರೆಸಲಾಗಿತ್ತು.

ಅಕ್ರಮ ಮರಳು ಗಣಿಗಾರಿಕೆ  ಹಾಗೂ ಅಕ್ರಮ ಮರಳು ಸಂಗ್ರಹದ ಅಡ್ಡೆಗಳ ಮೇಲೆ ದಾಳಿ ಮಾಡುವ ಮೂಲಕ ಅಕ್ರಮ ಧಂದೆಕೋರರಿಗೆ ನಡುಕ ಹುಟ್ಟಿಸಿದ್ದರು. ಇದರ ಜತೆಗೆ ಸಿಬರ್ಡ್ ಹಾಗೂ ಸಾಕಷ್ಟು ಹಳೆಯದಾಗಿದ್ದಂತ ಕೊಂಕಣ ರೈಲ್ವೆ ಪ್ರಕರಣಗಳ ಇತ್ಯರ್ಥಕ್ಕೂ ಅವರು ಆದ್ಯತೆ ನೀಡಿದ್ದರು. ದಾಂಡೇಲಿ ತಾಲ್ಲೂಕಿನ ಕುಗ್ರಾಮವೊಂದರಲ್ಲಿ ಜನಸ್ಪಂದನ ಕಾರ್ಯಕ್ರಮ ಮಾಡುವ ಮೂಲಕ ತಮ್ಮ ವಿಶಿಷ್ಟ ಕಾರ್ಯವೈಖರಿ ಮೆರೆದಿದ್ದರು.

  1.  

Senior KAS officer Jayalakshmi Rayakod took charge as Chancellor of Dharwad Agricultural University.

He was the Sub-Divisional Officer of Karwar in Uttara Kannada district and was transferred by the government as Chancellor of Dharwad Agricultural University.

Jayalakshmi Rayakod has also gained a lot of public recognition when she was the Divisional Officer of Karwar sub-division. He was transferred six months ago, but his transfer order was canceled and he was continued in the same post.

By attacking the roadblocks of illegal sand mining and illegal sand collection, he created a tremor for the illegal traders. Apart from this, he also prioritized the settlement of Siburd and Konkan Railway cases which were quite old. He showed his unique performance by organizing a public rally in a village of Dandeli taluk.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com