Breaking News

ಡಿಎಂಕೆ ಪಕ್ಷದ ಸ್ಥಾಪಕ, ಹಿರಿಯ ನಟ ವಿಜಯಕಾಂತ್ ನಿಧನ, ಅಭಿಮಾನಿಗಳ ಕಂಬನಿ

 

ಚೆನ್ನೈ: ಡಿಎಂಡಿಕೆ ಸ್ಥಾಪಕ, ಹಿರಿಯ ನಟ ವಿಜಯಕಾಂತ್‌(71) ಅವರು ಚೆನ್ನೈ ಆಸ್ಪತ್ರೆಯಲ್ಲಿ ಗುರುವಾರ ನಿಧನರಾದರು. ಅವರಿಗೆ ಕೋವಿಡ್‌ ಸೋಂಕು ಇರುವುದು ದೃಢಪಟ್ಟಿದೆ.

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ಅವರ ಪಕ್ಷವು ಅಧಿಕೃತವಾಗಿ ಟ್ವಿಟ್‌ ಮೂಲಕ ಮಾಹಿತಿ ನೀಡಿತ್ತು. ನವೆಂಬರ್‌ ತಿಂಗಳಿನಲ್ಲೂ ಅವರನ್ನು ಚೆನ್ನೈನ ಎಂಐಒಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆಗ ಅವರು ಕೆಮ್ಮು ಮತ್ತು ಗಂಟಲು ನೋವಿನಿಂದ ಬಳಲುತ್ತಿದ್ದರು.  ಪರಿಣಾಮ ಅವರಿಗೆ 14 ದಿನಗಳ ಕಾಲ ಅವರು ವೈದ್ಯರ ನಿಗಾದಲ್ಲಿ ಇದ್ದರು.

  1.  

ವಿಜಯಕಾಂತ್‌ ಅವರು 154 ಕ್ಕೂ ಹೆಚ್ಚು ತಮಿಳು ಚಲನಚಿತ್ರಗಳಲ್ಲಿ ನಟಿಸಿದ್ದರು, ಇದರ ಜತೆಗೆ ರಾಜಕೀಯಕ್ಕೂ ಎಂಟ್ರಿ ಕೊಟ್ಟಿದ್ದರು.  ದಕ್ಷಿಣ ಭಾರತೀಯ ಕಲಾವಿದರ ಸಂಘದಲ್ಲಿ ಸಕ್ರಿಯರಾಗಿದ್ದ ವಿಜಯಕಾಂತ್‌ ಅವರು 2005 ರಲ್ಲಿ ದೇಸೀಯ ಮುರ್ಪೊಕ್ಕು ದ್ರಾವಿಡ ಕಝಗಂ ಪಕ್ಷವನ್ನು ಸ್ಥಾಪಿಸಿದ್ದರು.  2011ರಲ್ಲಿ ಎಐಎಡಿಎಂಕೆ ಜತೆ ಹೊಂದಾಣಿಕೆ ಮಾಡಿಕೊಂಡು 41 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 26 ರಲ್ಲಿ ಅವರ ಪಕ್ಷ ಜಯ ಸಾಧಿಸಿ ಮುಖ್ಯ ವಿರೋಧ ಪಕ್ಷ ಸ್ಥಾನವನ್ನು ಪಡೆದಿತ್ತು.  2011-2016 ಅವಧಿಯಲ್ಲಿ ಅವರು ತಮಿಳುನಾಡು ವಿಧಾನಸಭೆಯ ವಿಪಕ್ಷ ನಾಯಕರಾಗಿದ್ದರು. ನಂತರ ಅವರು ಎಐಎಡಿಎಂಕೆ ಜತೆಗೆ ಹೊಂದಾಣಿಕೆ ಕಡಿದುಕೊಂಡಿದ್ದರು.

ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು ವಿರುಧಾಚಲಂ ಮತ್ತು ರಿಷಿವಂದಿಯಂ ಕ್ಷೇತ್ರಗಳನ್ನು ಪ್ರತಿನಿಧಿಸಿದ್ದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com