Breaking News

ಸಿಎಫ್ಎಎಲ್ ಪ್ರಗತಿಯಡಿ ವಿದ್ಯಾರ್ಥಿಗಳಿಗೆ ಜೆಇಇ, ನೀಟ್ ತರಬೇತಿ: ಸಿಇಒ ಡಾ. ಆನಂದ್

 

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಮತ್ತು ಅನುದಾನಿತ ಪಿಯುಸಿ ಕಾಲೇಜು ವಿದ್ಯಾರ್ಥಿಗಳಿಗೆ ಸೆಂಟರ್ ಫಾರ್ ಅಡ್ವಾನ್ಸ್‌ಡ್‌ ಲರ್ನಿಂಗ್ (ಸಿಎಫ್‌ಎಎಲ್) ಸಂಸ್ಥೆಯ  ಪ್ರಗತಿ ವಿಶಿಷ್ಟ ಕಾರ್ಯಕ್ರಮದಡಿ ನೀಡುವ ಜೆಇಇ, ನೀಟ್ ಉಚಿತ ತರಬೇತಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು 2024ರ ಜ.14 ರಂದು ಪ್ರವೇಶ ಪರೀಕ್ಷೆ ನಡೆಯಲಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ. ಆನಂದ ಕೆ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜೆಇಇ ಹಾಗೂ ನೀಟ್‌ ತರಬೇತಿಗೆ ಖಾಸಗಿ ಸಂಸ್ಥೆಗಳು ರೂಪಾಯಿ 1 ಲಕ್ಷಕ್ಕೂ ಹೆಚ್ಚು ಶುಲ್ಕ ಪಡೆಯುತ್ತವೆ. ಆದರೆ ಸಿಎಫ್‌ಎಎಲ್‌ ಸಂಸ್ಥೆ ಸಾಮಾಜಿಕ ಹೊಣೆಗಾರಿಕೆ ಅಡಿ ಸರ್ಕಾರಿ ಹಾಗೂ ಅನುದಾನಿತ ಪಿ.ಯು. ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುವ ಮಹತ್ವದ ಕಾರ್ಯಕ್ರಮವು ಕಲಿಕೆ ಪ್ರೋತ್ಸಾಹಕ್ಕೆ ವಿಶಿಷ್ಟ ಬೆಳವಣಿಗೆ ಆಗಿ ಎಂದು ಅವರು ಹೇಳಿದರು.

  1.  

ಗ್ರಾಮೀಣ ಪ್ರದೇಶದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಜೆಇಇ, ನೀಟ್‌ ತರಬೇತಿ ನೀಡಲು ಇನ್ನಷ್ಟು ಸಂಸ್ಥೆಗಳು ಮುಂದೆ ಬರಬೇಕು. ಸಿಎಫ್ ಎಎಲ್ ಇಂತಹ ಕಾರ್ಯಕ್ರಮ ನೀಡುವ ಮೂಲಕ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಲು ಮುಂದೇ ಬಂದಿದೆ ಎಂದರು.

ಸಿಎಫ್‌ಎಎಲ್‌ನ ನಿರ್ದೇಶಕ ವಿಜಯ್ ಮೊರಾಸ್ ಅವರು ಮಾತನಾಡಿ, ಕುಟುಂಬದ ಒಬ್ಬ ವ್ಯಕ್ತಿ ಅಭಿವೃದ್ಧಿ ಇಡೀ ಕುಟುಂಬದ ವಾತಾವರಣವನ್ನು ಬದಲಿಸುವ ಶಕ್ತಿ ಹೊಂದಿದೆ. ಪ್ರತಿಭಾನ್ವಿತ ವಿದ್ಯಾರ್ಥಿಗಳ ಕನಸುಗಳನ್ನು ನನಸು ಮಾಡುವ ಉದ್ದೇಶದಿಂದ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಭವಿಷ್ಯದ ವಿದ್ಯಾರ್ಥಿಗಳನ್ನು ಉತ್ತಮ ನಾಯಕರನ್ನಾಗಿ ಮಾಡುವ ಉದ್ದೇಶದಿಂದ ಪ್ರಗತಿ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.

ಸಿಎಫ್‌ಎಎಲ್‌ ಉಪ ಪ್ರಾಂಶುಪಾಲ ಗೌರೀಶ್‌ರಾಜ್‌ ಅವರು ಮಾತನಾಡಿ, 2022 ರಲ್ಲಿ  32 ವಿದ್ಯಾರ್ಥಿಗಳಿಗೆ ಹಾಗೂ 2023ರಲ್ಲಿ 38 ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡಿದ್ದೇವೆ. ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆಯಾಗುವ 40 ಮಂದಿಗೆ ಎರಡು ವರ್ಷಗಳಲ್ಲಿ ಉತ್ತಮ ತರಬೇತಿ ಸಿಗಲಿದೆ. ನಗರದ ಬೆಸೆಂಟ್‌ ಕಾಲೇಜಿನಲ್ಲಿ ಸಂಜೆ 5.30 ರಿಂದ 7 ಗಂಟೆಯವರೆಗೆ ತರಬೇತಿ ಆಯೋಜಿಸಲಾಗುತ್ತದೆ. ಈ ಬಾರಿ 4500 ಕ್ಕೂ ಹೆಚ್ಚು ಮಂದಿ ಆಯ್ಕೆಗೆ ಪರೀಕ್ಷೆ ಬರೆಯಬಹುದು. ಪ್ರಗತಿ ಯೋಜನೆ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಸುಸ್ಥಿರಗೊಳಿಸುವ ಈ ಕಾರ್ಯಕ್ರಮ ಉತ್ತಮ ವೇದಿಕೆ ಆಗಿದೆ ಎಂದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಡಿ.ಜಯಣ್ಣ ಇದ್ದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com