Breaking News

ಅಬಕಾರಿ ಅಧಿಕಾರಿಗಳಿಂದ ದಾಳಿ: ಅಕ್ರಮ 2240 ಲೀಟರ್‌ ಸ್ಪಿರಿಟ್ ವಶ

 

ಮಂಗಳೂರು: ಕೇರಳ ಗಡಿಭಾಗ ತಲಪಾಡಿಯಲ್ಲಿ ಸದ್ದಿಲ್ಲದೆ ನಡೆಯುತ್ತಿದ್ದ ಅಂತರ ರಾಜ್ಯ ಮಟ್ಟದ ಸ್ಪಿರಿಟ್ ತಯಾರಿಕೆ ಮತ್ತು ಮಾರಾಟ ದಂಧೆ ಮಾಡುತ್ತಿದ್ದ ಪ್ರಕರಣವನ್ನು ಭೇದಿಸಿರುವ ಅಬಕಾರಿ ಅಧಿಕಾರಿಗಳು ಎರಡು ಸಾವಿರಕ್ಕೂ ಅಧಿಕ ಲೀಟರ್ ಸಾರಾಯಿ ಸ್ಪಿರಿಟ್ ವಶಕ್ಕೆ ಪಡೆದುಕೊಂಡಿದ್ದಾರೆ.

ಕೇರಳ ಗಡಿಭಾಗ ಕಿನ್ಯಾ ಗ್ರಾಮದ ಸಾಂತ್ಯ ಎಂಬಲ್ಲಿ ಅಕ್ರಮ ಸಾರಾಯಿ ತಯಾರಿಸುತ್ತಿದ್ದ ಮನೆ ಮೇಲೆ ಅಬಕಾರಿ ಪೊಲೀಸರು ಮಂಗಳವಾರ ರಾತ್ರಿ ದಾಳಿ ಮಾಡಿದ್ದಾರೆ. ಬೃಹತ್ ಮಟ್ಟದಲ್ಲಿ ಸಾರಾಯಿ ತಯಾರಿಸುತ್ತಿದ್ದ ಜಾಲವನ್ನು ಪೊಲೀಸರು ಪತ್ತೆ ಮಾಡಿದ್ದು ಈ ವೇಳೆ, ಪ್ರಮುಖ ಆರೋಪಿ ಪರಾರಿಯಾಗಿದ್ದಾನೆ‌.

  1.  

2,240 ಲೀಟರ್ ಮದ್ಯದ ಸ್ಪಿರಿಟ್, 222 ಲೀಟರ್ ನಕಲಿ ಬ್ರಾಂಡಿ ಸೇರಿದಂತೆ ಮದ್ಯ ತಯಾರಿಕೆಗೆ ಬಳಸಿದ ಯಂತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಮದ್ಯವನ್ನು ತಯಾರಿಸಿ ಕೇರಳ ರಾಜ್ಯಕ್ಕೆ ಸಾಗಿಸಿ ಮಾರಾಟ ನಡೆಸುತ್ತಿದ್ದರು ಎನ್ನಲಾಗಿದೆ. ಅಬಕಾರಿ ದಳದ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ 25 ಕ್ಕೂ ಅಧಿಕ ಸಿಬ್ಬಂದಿ ಪಾಲ್ಗೊಂಡಿದ್ದರು.‌

ಮಂಗಳೂರು ವಿಭಾಗದ ಆಯುಕ್ತ ನಾಗರಾಜಪ್ಪ ಟಿ. ಹಾಗೂ ಅಬಕಾರಿ ಇಲಾಖೆಯ ಡೆಪ್ಯುಟಿ ಕಮಿಷನರ್ ಟಿ.ಎಂ ಶ್ರೀನಿವಾಸ್ ನಿರ್ದೇಶನದಲ್ಲಿಅಬಕಾರಿ ನಿರೀಕ್ಷಕಿ ಕಮಲಾ ಎಚ್.ಎನ್, ಉಪಾಧೀಕ್ಷಕರಾದ ಸೈಯ್ಯದ್ ತಫೀಜುಲ್ಲಾ ಅವರ ಮಾರ್ಗದಶನದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com