Breaking News

ಸದೃಢ ಆರೋಗ್ಯ ನಿರ್ಮಾಣಕ್ಕೆ ಕ್ರೀಡೆ ಸಹಕಾರಿ: ಅರವಿಂದ್ ಕಲಗುಜಿ

 

ಕಾರ್ಕಳ: ಕ್ರೀಡಾ ಮನೋಭಾವ ಬೆಳೆಯಬೇಕು. ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ, ಪಾಲ್ಗೊಳ್ಳುವಿಕೆ ಮುಖ್ಯ, ಸದೃಢ ಆರೋಗ್ಯ ನಿರ್ಮಾಣಕ್ಕೆ ಕ್ರೀಡೆಯೇ ಮದ್ದು ಎಂದು ಕಾರ್ಕಳ ಡಿವೈಎಸ್‌ಪಿ ಅರವಿಂದ್ ಕಲುಗುಜಿ ಹೇಳಿದರು.

ಕಾರ್ಕಳ ಜ್ಞಾನಸುಧಾ ಕ್ರೀಡಾಂಗಣದಲ್ಲಿ ಕಾರ್ಕಳ ಹಾಗೂ ಉಡುಪಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಜಂಟಿ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ವ್ಯಕ್ತಿಯ ವ್ಯಕ್ತಿತ್ವ ಹಾಗೂ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಎಲ್ಲಾ ಭಾಗ್ಯಕ್ಕಿಂತಲೂ ಆರೋಗ್ಯ ಭಾಗ್ಯ ಅತೀ ಮುಖ್ಯ ಎಂದರು.
ಉಡುಪಿ ಅಮೆಚೂರ್ ಅಸೋಸಿಯೇಶನ್ ಸ್ಪೊರ್ಟ್ಸ್ ಕ್ಲಬ್‌ನ ಗೌರವಾಧ್ಯಕ್ಷ ಕೆ. ಬಾಲಕೃಷ್ಣ ಶುಭ ಹಾರೈಸಿದರು.
ಸಮಾರೋಪ: ಸಮಾರೋಪದಲ್ಲಿ ಹೆಬ್ರಿಯ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಅಮರೇಶ್ ಹೆಗ್ಡೆ ಮಾತನಾಡಿದರು.

ಅಜೆಕಾರ್ ಪದ್ಮಗೋಪಾಲ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ, ಸಂಸ್ಥೆಯ ಹಿತೈಷಿ ತ್ರಿವಿಕ್ರಮ ಕಿಣಿ, ಪಂಚಾಯಿತಿ ಸದಸ್ಯ ರೆಹಮತುಲ್ಲ, ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಣಾಧಿಕಾರಿ ಹಾಗೂ ಪ್ರಾಂಶುಪಾಲ ದಿನೇಶ್ ಎಂ ಕೊಡವೂರ್, ಉಡುಪಿ ಜ್ಞಾನಸುಧಾದ ಪ್ರಾಂಶುಪಾಲ ಗಣೇಶ್ ಶೆಟ್ಟಿ ಇದ್ದರು.
ಬಾಲಕರ ವಿಭಾಗದ ವೈಯಕ್ತಿಕ ಚಾಂಪಿಯನ್ ಷಿಪ್‌ ಪ್ರಶಸ್ತಿಯನ್ನು ಕಾರ್ಕಳ ಜ್ಞಾನಸುಧಾ ವಿದ್ಯಾರ್ಥಿ ಪ್ರಣಯ್ ಶೆಟ್ಟಿ, ಉಡುಪಿ ಜ್ಞಾನಸುಧಾದ ವಿದ್ಯಾರ್ಥಿ ವಾಂಚಿತ್ ಎಸ್ ಶೆಟ್ಟಿ, ಬಾಲಕಿಯರ ವಿಭಾಗದಲ್ಲಿ ಸಂಜನಾ ಬೆಸ್ಕೂರ್ ಹಾಗೂ ಸನ್ನಿಧಿ ಪೂಜಾರಿ- ಕಾರ್ಕಳ ಜ್ಞಾನಸುಧಾ, ಮೋಕ್ಞಾ ಶೆಟ್ಟಿ – ಉಡುಪಿ ಜ್ಞಾನಸುಧಾ ಪಡೆದರು.

  1.  

ಉಪನ್ಯಾಸಕಿ ಸಂಗೀತ ಕುಲಾಲ್ ಹಾಗೂ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಪ್ರಜ್ವಲ್ ಕುಲಾಲ್ ನಿರೂಪಿಸಿ ಕ್ರೀಡಾ ವೀಕ್ಷಕ ವಿವರಣೆ ನೀಡಿದರು. ಉಪಪ್ರಾಂಶುಪಾಲ ಸಾಹಿತ್ಯ ಸ್ವಾಗತಿಸಿದರು. ಸಂಸ್ಥೆಯ ಪಿ.ಆರ್.ಒ ಜ್ಯೋತಿ ಪಿ. ಭಂಡಿ ಹಾಗೂ ಉಡುಪಿ ಜ್ಞಾನಸುಧಾದ ದೈಹಿಕ ಶಿಕ್ಷಣ ನಿರ್ದೇಶಕ ಅರುಣ್ ಕುಮಾರ್ ವಂದಿಸಿದರು.

Sportsmanship should be developed. Karkala DySP Arvind Kaluguji said that winning or losing is not important in sports, participation is important, sports is the medicine for healthy health.

He spoke while inaugurating the joint annual sports event of Karkala and Udupi Jnanasudha Educational Institutions at the Karkala Gnanasudha Stadium.

One can maintain the personality and health of a person by participating in sports activities. Health is more important than all fortunes, he said.
Honorary President of Udupi Amateur Association Sports Club K. Balakrishna wished him well.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com