Breaking News

ನಾಪತ್ತೆ ಆಗಿದ್ದ ಬೋಟ್‌ ಪತ್ತೆ; 27 ಮಂದಿ ಮೀನುಗಾರರ ರಕ್ಷಣೆ

 

ಕಾರವಾರ: ನಾಲ್ಕು ದಿನಗಳಿಂದ ಅರಬ್ಬಿ ಸಮುದ್ರದಲ್ಲಿ ನಾಪತ್ತೆ ಆಗಿದ್ದ ಗೋವಾ ಮೂಲದ ಮೀನುಗಾರಿಕಾ ಬೋಟ್ ಅರಬ್ಬಿ ಸಮುದ್ರದ 30 ನಾಟಿಕಲ್ ಮೈಲು ದೂರಲ್ಲಿ ಪತ್ತೆ ಆಗಿದ್ದು, ಬೋಟ್ ನಲ್ಲಿದ್ದ 27 ಮಂದಿ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.

  1.  

ಅಂಕೋಲಾ ಬೇಲಿಕೇರಿ ಬಂದರನಿಂದ 30 ನಾಟಿಕಲ್ ಮೈಲು ದೂರದಲ್ಲಿ ಬೋಟ್ ಪತ್ತೆ ಆಗಿದೆ. ಗೋವಾದ ಪಣಜಿ ಮೂಲದ ಮೀನುಗಾರಿಕಾ ಬೋಟ್ ಇದಾಗಿದೆ. ಅರಬ್ಬಿ ಸಮುದ್ರದಲ್ಲಿ ಹವಾಮಾನ ವೈಪರೀತ್ಯದಿಂದ ಎಂಜಿನ್‌ ನಲ್ಲಿ ಸಮಸ್ಯೆಯಾಗಿ ಸಮೀಪದ ಬಂದರಗೆ ಬಾರದೇ ನಾಪತ್ತೆ ಆಗಿತ್ತು. ಬೋಟ್ ನಲ್ಲಿದ್ದವರಿಗೆ ನೆಟ್‌ ವರ್ಕ್ ಸಂಪರ್ಕ ಸಿಗದೇ ಪತ್ತೆ ಮಾಡಲು ಸಮಸ್ಯೆ ಉಂಟಾಗಿತ್ತು.

ನಾಪತ್ತೆ ಆಗಿದ್ದ ಬೋಟ್‌ ಗಾಗಿ ಅಧಿಕಾರಿಗಳು ಹುಡುಕಾಟ ನಡೆಸಿದ್ದು, 30 ನಾಟಿಕಲ್ ಮೈಲ್ ದೂರದಲ್ಲಿ ಬೋಟ್ ಪತ್ತೆಯಾಗಿದೆ. ಪತ್ತೆ ಆಗಿರುವ ಬೋಟ್ ಹಾಗೂ 27 ಮಂದಿ ಮೀನುಗಾರರನ್ನು ಕಾರವಾರ ಬಂದರಿಗೆ ಕರೆ ತರಲಾಗಿದೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com