Breaking News

ಆಂಧ್ರಕ್ಕೆ ಅಕ್ರಮ ಮದ್ಯ ಸಾಗಣೆ, 24.13 ಲಕ್ಷ ಮೌಲ್ಯದ ಸ್ವತ್ತು ವಶಕ್ಕೆ

 

ಕಾರವಾರ: ಗೋವಾದಿಂದ ಆಂಧ್ರಪ್ರದೇಶಕ್ಕೆ ಲಾರಿಯೊಂದರಲ್ಲಿ ಗುಪ್ತವಾಗಿ ಕಂಪಾರ್ಟಮೆಂಟ್ ನಿರ್ಮಿಸಿ, ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯವನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ಅನಮೋಡ್ ತನಿಖಾ ಠಾಣೆಯಲ್ಲಿ ನಡೆದಿದೆ.

  1.  

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು, 3.20760 ಲೀಟರ್ ವಿವಿಧ ಬ್ರಾಂಡ್ ನ 5. 84 ಲಕ್ಷ ರೂಪಾಯಿ ಬೆಲೆಯ ಮದ್ಯ ವಶಕ್ಕೆ ಪಡೆದುಕೊಳ್ಳಲಾಗಿದೆ. ಇದರ ಜತೆಗೆ ದು ಒಟ್ಟು ವಾಹನ ಸೇರಿ 24.13 ಲಕ್ಷ ರೂಪಾಯಿ ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ ಎಂದು ಅಬಕಾರಿ ಇಲಾಖೆ ಅಧಿಕಾಗಳು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮೂಲದ ಜಂಗಿಲಿ ರಾಮು ಎಂಬುವವರನ್ನು ಬಂಧನ ಮಾಡಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ.
ಕಾರ್ಯಾಚರಣೆಯಲ್ಲಿ ಇಲಾಖೆ ಸಿಬ್ಬಂದಿಗಳಾದ ಟಿ. ಬಿ. ಮಲ್ಲಣ್ಣವರ್, ಆರ್. ಎನ್. ನಾಯಕ್, ಎನ್. ಜಿ. ಜೋಗಳೆಕರ್, ಬಾಲಕೃಷ್ಣ ಕುಪ್ಪಸ್ವಾಮಿ, ದೀಪಕ್ ಬಾರಾಮತಿ ಸೇರಿದಂತೆ ಹಲವರು ಇದ್ದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com