Breaking News

ಆಸ್ಟ್ರೇಲಿಯಾ ಮುಡಿಗೆ ಮತ್ತೆ ವಿಶ್ವಕಪ್‌, ಗೆಲುವಿಗೆ ತಿಣಿಕಾಡಿದ ಟೀಂ ಇಂಡಿಯಾ, ಕನಸು ಛಿದ್ರ

 

ಅಹಮದಾಬಾದ್‌: ವಿಶ್ವಕಪ್‌ ಫೈನಲ್‌ನಲ್ಲಿ ಟೀಂ ಇಂಡಿಯಾ ಎದುರು 6 ವಿಕೆಟ್‌ ಅಂತರದ ಗೆಲುವು ದಾಖಲಿಸುವ ಮೂಲಕ ಆಸ್ಟ್ರೇಲಿಯಾ ತಂಡವು 6 ನೇ ಬಾರಿ ಕೂಡ ಚಾಂಪಿಯನ್‌ ಆಗಿ ಹೊರಹೊಮ್ಮಿತು. ಚಾಂಪಿಯನ್‌ ಕನಸಿನ ಹಾದಿಯಲ್ಲಿದ್ದ ಟೀಂ ಇಂಡಿಯಾ ಕನಸು ಭಗ್ನವಾಯಿತು.

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಆಸೀಸ್‌ ತಂಡವು ಬ್ಯಾಟಿಂಗ್‌ ಬದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡಿತ್ತು. ಆದರೆ ಟೀಂ ಇಂಡಿಯಾ ಬ್ಯಾಟಿಂಗ್‌ ಗೆ ಇಳಿಯಿತು. 50 ಓವರ್‌ಗಳಲ್ಲಿ 240 ರನ್‌ ಗಳಿಸಿ ಎಲ್ಲ ವಿಕೆಟ್‌ ಕಳೆದುಕೊಂಡಿತು. ಟ್ರಾವಿಸ್‌ ಹೆಡ್‌ ಗಳಿಸಿದ ಅಮೋಘ ಆಟದಿಂದ ಆಸ್ಟ್ರೇಲಿಯಾ ತಂಡವು ಇನ್ನೂ 7 ಓವರ್‌ಗಳು ಬಾಕಿ ಇರುವಾಗಲೇ 4 ವಿಕೆಟ್‌ ನಷ್ಟಕ್ಕೆ ಗೆಲುವಿನ ನಗೆ ಬೀರಿತು.

ಭಾರತದ ಮಾನ ಉಳಿಸಿದ ರಾಹುಲ್:‌  ನಾಯಕ ರೋಹಿತ್ ಶರ್ಮಾ, ವಿರಾಟ್‌ ಕೊಹ್ಲಿ ಹಾಗೂ ಕೆ.ಎಲ್‌.ರಾಹುಲ್‌ ಹೊರತುಪಡಿಸಿ ಉಳಿದ ಆಟಗಾರರು ಅಷ್ಟಾಗಿ ಉತ್ತಮ ಪ್ರದರ್ಶನ ನೀಡದೇ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಪರೇಡ್‌ ನಡೆಸಿದರು.

  1.  

ಶುಭಮನ್‌ ಗಿಲ್‌ ಹಾಗೂ ಶ್ರೇಯಸ್‌ ಅಯ್ಯರ್‌ ಅವರ ಮೇಲೆ ಇಟ್ಟುಕೊಂಡಿದ್ದ ಭರವಸೆ ಸಂಪೂರ್ಣ ಕುಸಿಯಿತು. ರೋಹಿತ್‌ ಕೇವಲ 31 ಎಸೆತಗಳಲ್ಲಿ 47 ರನ್‌ ಗಳಿಸಿ ಅರ್ಧಶತಕ ದಾಖಲಿಸುವ ಹೊತ್ತಿನಲ್ಲಿ ಔಟಾಗಿ ಪೆವಿಲಿಯನ್‌ ಗೆ ಮರಳಿದರು. ಸಂಕಷ್ಟದ ಸ್ಥಿತಿಯಲ್ಲಿಯೂ ತಾಳ್ಮೆಯ ಆಟ ಪ್ರದರ್ಶಿಸಿದ ಕೆ.ಎಲ್‌ ರಾಹುಲ್ 66 ರನ್‌ ದಾಖಲಿಸುವ ಮೂಲಕ ತಂಡದ ಮಾನ ಉಳಿಸಿದರು.

ರವೀಂದ್ರ ಜಡೇಜ (9), ಸೂರ್ಯಕುಮಾರ್‌ ಯಾದವ್‌ (18) ಕುಲದೀಪ್‌ ಯಾದವ್‌ (10), ಮೊಹಮ್ಮದ್‌ ಸಿರಾಜ್‌ ಕೂಡ ದೊಡ್ಡ ಮೊತ್ತದ ರನ್‌ ಕಲೆ ಹಾಕುವಲ್ಲಿ ಯಶಸ್ಸು ಕಾಣಲಿಲ್ಲ.

240 ರನ್‌ ಬೆನ್ನು ಹತ್ತಿದ್ದ ಆಸ್ಟ್ರೇಲಿಯಾಗೆ ಆರಂಭಿಕ ಹಂತದಲ್ಲಿಯೇ ಬೂಮ್ರಾ ಮತ್ತು ಮೊಹಮ್ಮದ್‌ ಶಮಿ ವಿಕೆಟ್‌ ಕಬಳಿಸುವ ಮೂಲಕ ಆಘಾತ ನೀಡಿದರು. 47 ರನ್‌ ಕಲೆ ಹಾಕುವ ಹೊತ್ತಿದೆ ಡೇವಿಡ್‌ ವಾರ್ನರ್‌ (7), ಮಿಚೇಲ್‌ ಮಾರ್ಷ್‌ (15) ಹಾಗೂ ಸ್ಟೀವ್‌ ಸ್ಮಿತ್‌ (4)  ಔಟಾದರು.

ಟ್ರಾವಿಸ್‌ ಹೆಡ್‌ ಮತ್ತು ಮಾರ್ನಸ್‌ ಲಾಬುಷೇನ್‌ ಅವರ ಉತ್ತಮ ಜತೆ ಆಟದಿಂದ 192 ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com