Breaking News

ವಿರಾಟ್‌ ಕೊಹ್ಲಿ ಶತಕದ ಕಮಾಲ್,‌ ಟೀಂ ಇಂಡಿಯಾ ಫೈನಲ್‌ ಗೆ, ನ್ಯೂಜಿಲೆಂಡ್‌ ಗೆ ಸೋಲಿನ ರುಚಿ

 

ಮುಂಬೈ: ಇಲ್ಲಿನ ವಾಂಖಡೆ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡವು ನ್ಯೂಜಿಲೆಂಡ್ ತಂಡದ ವಿರುದ್ಧ 70 ರನ್‌ಗಳ ಅಂತರ ಐತಿಹಾಸಿಕ ಗೆಲುವು ದಾಖಲಿಸುವ ಮೂಲಕ ಫೈನಲ್ ಲಗ್ಗೆ ಹಾಕಿದ  ಭಾರತ ತಂಡವು 2019 ರ ಮುಯ್ಯಿ ತೀರಿಸಿಕೊಂಡಂತೆ ಆಗಿದೆ.

ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡವು 4 ನೇ ಭಾರಿಗೆ ಫೈನಲ್ ಪ್ರವೇಶ ದಾಖಲಿಸಿದಂತೆ ಆಗಿದೆ. 2019ರ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ ತಂಡದ ವಿರುದ್ಧ ಸೋಲು ಕಂಡಿದ್ದ ಟೀಂ ಇಂಡಿಯಾ 12 ವರ್ಷಗಳ ನಂತರ ಸೇಡು ತೀರಿಸಿಕೊಂಡಿದೆ.

  1.  

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ರೋಹಿತ್‌ ಶರ್ಮಾ ಪಡೆ ಅಮೋಘ 397 ರನ್‌ಗಳ ಗುರಿಯನ್ನು ಎದುರಾಳಿ ತಂಡಕ್ಕೆ ನೀಡಿತು. ಬೌಲಿಂಗ್‌ ಮಾಡಿ ದಣಿದಿದ್ದ ನ್ಯೂಜಿಲೆಂಡ್ ತಂಡ ಬ್ಯಾಟ್ಸ್‌ ಮನ್‌ ಗಳು ಉತ್ತಮ ಆರಂಭಿಕ ರನ್‌ ಗಳನ್ನು ದಾಖಲೆ ಮಾಡಿದರು ಹೋರಾಟ ವಿಫಲವಾಯಿತು. 48.5 ಓವರ್‌ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 327 ರನ್‌ ಗಳಿಸಲು ಶಕ್ತವಾಯಿತು.

113 ಎಸೆತಗಳಿಗೆ ವಿರಾಟ್ ಕೊಹ್ಲಿ 9 ಬೌಂಡರಿ ಹಾಗೂ ಎರಡು ಸಿಕ್ಸರ್‌ ಬಾರಿಸುವ ಮೂಲಕ 117 ರನ್ ಗಳಿಸಿದರು. ವಾಂಖೆಡ್‌ ಕ್ರೀಡಾಂಗಣದಲ್ಲಿಯೇ 50ನೇ ಶತಕ ದಾಖಲಿಸುವ ಮೂಲಕ ಐತಿಹಾಸಿ ಕ್ಷಣಕ್ಕೆ ಸಾಕ್ಷಿಯಾದರೂ. ವಿರಾಟ್‌ ಕೊಹ್ಲಿ ಶತಕ ಪೂರೈಸುತ್ತಿದ್ದಂತೆ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದವರು ಎದ್ದು ನಿಂತು ಗೌರವ ಸಲ್ಲಿಸಿದರು. ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ ಚಪ್ಪಾಳೆ ತಟ್ಟುವ ಮೂಲಕ ತಮ್ಮ ಖುಷಿ ಹಂಚಿಕೊಂಡರು.

ಟೀಮ್ ಇಂಡಿಯಾ ಪರ ಶುಭಮನ್ ಗಿಲ್ (80), ರೋಹಿತ್ ಶರ್ಮಾ (47) ಹಾಗೂ ಕೆ.ಎಲ್ ರಾಹುಲ್ (39) ರನ್‌ ಪೇರಿಸಿದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com