Breaking News

ಉಡುಪಿ: ಅಂತರ ಕಾಲೇಜು ವಿವಿ ಟೇಬಲ್ ಟೆನಿಸ್– ಎಂಜಿಎಂ, ಸಂತ ಅಲೋಷಿಯಸ್ ಕಾಲೇಜಿಗೆ ಪ್ರಶಸ್ತಿ

 

ಉಡುಪಿ: ಇಲ್ಲಿನ ಎಂಜಿಎಂ ಕಾಲೇಜಿನಲ್ಲಿ ನಡೆದ ವಿವಿ ಮಟ್ಟದ ಅಂತರ ಕಾಲೇಜು ಟೇಬಲ್ ಟೆನಿಸ್  ಟೂರ್ನಿಯಲ್ಲಿ ಎಂಜಿಎಂ ಕಾಲೇಜು ತಂಡವು ಮೊದಲ ಸ್ಥಾನಕ್ಕೆ ಮುತ್ತಿಕ್ಕಿದೆ.

ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯಲ್ಲಿ 23 ಕ್ಕೂ ಹೆಚ್ಚು ತಂಡಗಳು ಪಾಲ್ಗೊಂಡಿದ್ದವು.  ಪುರುಷರ ವಿಭಾಗದಲ್ಲಿ ಎಂಜಿಎಂ ತಂಡವು ಫೈನಲ್‌ನಲ್ಲಿ ಮಂಗಳೂರಿನ ಸಂತ ಅಲೋಷಿಯಸ್ ತಂಡದ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ಗೆಲುವು ಸಾಧಿಸಿ ಪ್ರಶಸ್ತಿ ಪಡೆದುಕೊಂಡಿದೆ.

  1.  

ಮಹಿಳಾ ವಿಭಾಗದಲ್ಲಿ ಮಂಗಳೂರಿನ ಸಂತ  ಅಲೋಷಿಯಸ್ ತಂಡವು ಎಂಜಿಎಂ ಮಹಿಳಾ ತಂಡವನ್ನು ಸೋಲಿಸಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಟೂರ್ನಿಯ ಅತ್ಯುತ್ತಮ ಪುರುಷ ಆಟಗಾರ ಪ್ರಶಸ್ತಿಗೆ ಎಂಜಿಎಂ ಕಾಲೇಜು ತಂಡದ ಸೃಜನ್ ಹಾಗೂ ಮಹಿಳಾ ವಿಭಾಗದಲ್ಲಿ ಮಂಗಳೂರಿನ ಸಂತ ಅಲೋಷಿಯಸ್‌ ಕಾಲೇಜಿನ ಪ್ರೇಕ್ಷಾ ಬಾಚಿಕೊಂಡಿದ್ದಾರೆ.

The MGM college team won the first place in the university level inter-college table tennis tournament held at the MGM college here.

More than 23 teams participated in the tournament held at the college’s indoor stadium. In the men’s category, MGM won the title in the final against St. Aloysius of Mangalore in an exciting match.

In the women’s category, Mangalore’s St. Aloysius team defeated MGM women’s team and bagged the first position. Srujan of MGM College won the best male player award of the tournament and Preksha of St. Aloysius College, Mangalore won the women’s category.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com