Breaking News

ಗೋಮಾಳ ಜಾಗದಲ್ಲಿ ಪರಶುರಾಮ ಥೀಂ ಪಾರ್ಕ್, ಶಾಸಕ ಸ್ಥಾನದಿಂದ ಸುನಿಲ್ ಕುಮಾರ್ ಅಮಾನತಿಗೆ ಮಿಥುನ್ ರೈ ಆಗ್ರಹ

 

ಮಂಗಳೂರು: ಉಡುಪಿ ಜಿಲ್ಲೆಯ ಕಾರ್ಕಳದ ಬೈಲೂರಿನಲ್ಲಿ ಗೋಮಾಳಕ್ಕೆ ಮೀಸಲು ಇಟ್ಟಿದ್ದ ಜಾಗದಲ್ಲಿ ಅನಧಿಕೃತವಾಗಿ ಪರಶುರಾಮ ಥೀಂ ಪಾರ್ಕ್ ಮತ್ತು ನಕಲಿ ಪರಶುರಾಮ ಮೂರ್ತಿ ಸ್ಥಾಪಿಸಿದ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ಶಾಸಕ ಸುನೀಲ್ ಕುಮಾರ್ ಅವರನ್ನು ಶಾಸಕ ಸ್ಥಾನದಿಂದ ತಕ್ಷಣವೇ  ಅಮಾನತುಗೊಳಿಸಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಪರಶುರಾಮ ಥೀಂ ಪಾರ್ಕ್ ಮತ್ತು ನಕಲಿ ಪ್ರತಿಮೆ ಸ್ಥಾಪನೆ ಅವ್ಯವಹಾರದಲ್ಲಿ ಭಾಗಿ ಆಗಿರುವ ಎಲ್ಲ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಸರಕಾರವನ್ನು ಆಗ್ರಹಿಸಿದರು.

ಚಿರಂಜೀವಿ ಪರಶುರಾಮನ ನೈಜ ಮೂರ್ತಿ ನಿರ್ಮಾಣ ಮಾಡಬೇಕು. ಅದು ಥೀಂ ಪಾರ್ಕ್‌ನಲ್ಲೇ ಆಗಬಹುದು ಅಥವಾ ಅವಿಭಜಿತ ಜಿಲ್ಲೆಯ ಎಲ್ಲಿಬೇಕಾದರೂ ಪರಶುರಾಮನ ಉತ್ತಮ ಮೂರ್ತಿ ನಿರ್ಮಾಣ ಮಾಡಲಿ. ಪರಶುರಾಮನ ಮೂರ್ತಿ ನಿರ್ಮಾಣದಲ್ಲಿ ಆಗಿರುವ ಅನ್ಯಾಯ, ಅವ್ಯವಹಾರದ ವಿರುದ್ಧ ಧ್ವನಿ ಎತ್ತದೆ ಇದ್ದರೆ ಖಂಡಿತ ಪರಶುರಾಮನ ಶಾಪ ತಟ್ಟಬಹುದು ಎಂದು ಎಚ್ಚರಿಕೆ ನೀಡಿದರು.

ಪರಶುರಾಮನ ಮೂರ್ತಿ ನಿರ್ಮಾಣದಲ್ಲಿ ಆಗಿರುವ ಅನ್ಯಾಯದ ವಿರುದ್ಧ, ಧರ್ಮವನ್ನು ರಕ್ಷಿಸಲು, ಅಧರ್ಮದ ವಿರುದ್ಧ ಒಬ್ಬ ನಿಜವಾದ  ಹಿಂದೂವಾಗಿ ಹೋರಾಡಲು ತಾನು ಎಲ್ಲ ಸ್ವಾಮೀಜಿಗಳನ್ನು, ಮಠಾಧೀಶರನ್ನು ಭೇಟಿಯಾಗಿ ಅವರ ಆರ್ಶಿರ್ವಾದ ಮತ್ತು ಬೆಂಬಲ ಪಡೆಯುವ ಅಭಿಯಾನ ಆರಂಭಿಸುವುದಾಗಿ ತಿಳಿಸಿದರು.

  1.  

ಕಾರ್ಕಳ ಪುರಸಭಾ ಸದಸ್ಯ ಶುಭೋದ್ ರಾವ್, ಕಾಂಗ್ರೆಸ್ ಪ್ರಮುಖರಾದ ಪ್ರವೀಣ್ ಚಂದ್ರ ಆಳ್ವ, ಎಸಿ ವಿನಯರಾಜ್, ಅನಿಲ್ ಪೂಜಾರಿ, ಪ್ರಕಾಶ್ ಸಾಲಿಯಾನ್, ಮೋಹನ್ ಕೋಟಿಯನ್, ವಿಶ್ವಾಸ್‌ ದಾಸ್, ಅಪ್ಪಿ, ವಿಕಾಸ್ ಶೆಟ್ಟಿ, ದುರ್ಗಾ ಪ್ರಸಾದ್, ಶಾಂತಲಾ ಗಟ್ಟಿ, ರಾಕೇಶ್ ದೇವಾಡಿಗ ಇದ್ದರು.

Karnataka Pradesh Congress Committee general secretary Mithun Rai on Tuesday demanded immediate suspension of BJP MLA Sunil Kumar from the post of MLA in connection with the unauthorized establishment of Parashurama theme park and fake Parashurama idol in Bailoor of Karkala in Udupi district.

He demanded the government to suspend all officials involved in the Parasurama theme park and fake statue scam.

A real statue of Chiranjeevi Parasurama should be constructed. Be it in a theme park itself or build a good statue of Parasurama anywhere in the undivided district. He warned that if he does not raise his voice against the injustice and misbehavior in the construction of Parashurama’s idol, he will surely be cursed by Parashurama.

He said that he will meet all the Swamijis and Mathadhis and start a campaign to seek their blessings and support to fight as a true Hindu against the injustice in the construction of Parasurama’s idol, to protect the religion and to fight against the adharma.

Karkala municipal councilor Shubhod Rao, Congress leaders Praveen Chandra Alva, AC Vinayaraj, Anil Pujari, Prakash Salian, Mohan Kotian, Vishwas Das, Appi, Vikas Shetty, Durga Prasad, Shantala Gatti, Rakesh Devadiga were present.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com