Breaking News

ನಮ್ಮಿಬ್ಬರದು ಲವಕುಶ ಸಂಬಂಧ, ಅಷ್ಟು ಸುಲಭ ಹುಳಿ ಹಿಂಡಲು ಆಗಲ್ಲ: ಸಚಿವ ಮಂಕಾಳ ವೈದ್ಯ

 

ಕಾರವಾರ: ಜಿಲ್ಲೆಯಲ್ಲಿ ಸತೀಶ್ ಸೈಲ್ ಮತ್ತು ನಾನ್ನ ನಡುವಿನ ಸಂಬಂಧ ಲವ–ಕುಶರು ಇದ್ದ ಹಾಗೇ ಇದ್ದೇವೆ. ಯಾರೂ ಕೂಡ ನಮ್ಮಿಬ್ಬರ ನಡುವೆ ವೈಮನಸ್ಸು ಉಂಟು ಮಾಡಲು ಸಾಧ್ಯ ಆಗಲ್ಲ. ಸತೀಶ ಸೈಲ್ ಹಾಗೂ ನಮ್ಮ‌ ಬಗ್ಗೆ ವರದಿಗಳು ಬರತ್ತಲೇ ಇರುತ್ತವೆ. ನಮ್ಮನ್ನ ಬೇರೆ ಮಾಡುವ ಬಗ್ಗೆ ಯಾರು ಎಷ್ಟೇ ಪ್ರಯತ್ನ ಮಾಡಿದ್ದರು ಅದು ಸಾಧ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಎದುರಾಳಿಗಳಿಗೆ ಟಾಂಗ್ ನೀಡಿದರು.

ಕಾರವಾರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಅವರು, ಮುಖ್ಯಮಂತ್ರಿಯಾಗಿ ಯಾರು ಮುಂದುವರೆಯಬೇಕು ಎನ್ನುವದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ರಾಜ್ಯದ ಜನ ಕಾಂಗ್ರೆಸ್ ಪಕ್ಷಕ್ಕೆ 136 ಸ್ಥಾನ‌ ಗೆಲ್ಲಿಸಿಕೊಟ್ಟಿದ್ದಾರೆ. ಐದು ವರ್ಷ ಅಧಿಕಾರ ನಡೆಸಲು ಅವಕಾಶ ಕೊಟ್ಟಿದ್ದಾರೆ. ಯಾರನ್ನ ಸಿಎಂ ಮಾಡಬೇಕು,‌ ಎಷ್ಟು ವರ್ಷ ಮಾಡಬೇಕು ಎಂದು ಹೈಕಮಾಂಡ್ ನಿರ್ಧರಿಸಲಿದೆ ಎಂದರು‌.

ಮಾಜಿ ಸಚಿವ ಈಶ್ವರಪ್ಪ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಇರುವುದಿಲ್ಲ ಎನ್ನುವ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈಶ್ವರಪ್ಪ ಅವರಿಗೆ ಮೊದಲು ಅವರ ಪಕ್ಷಕ್ಕೆ ಅಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಲು ತಿಳಿಸಿ. ವಿರೋಧ ಪಕ್ಷದ ನಾಯಕರೇ ಮಾಡಲು ಆಗದವರು, ನಮ್ಮ ಮೇಲೆ ಟೀಕೆ ಮಾಡುವುದಕ್ಕೆ ಅವರಿಗೆ ನೈತಿಕತೆ ಇಲ್ಲ ಎಂದರು.

  1.  

In the district, the relationship between Satish Sail and myself is the same as Lava-Kusharu. No one can create enmity between us. Reports about Satish Sail and us keep coming. District in-charge minister Mankalu Vaidya gave a tong to the opponents that no matter how much they tried to make us different, it was not possible.

Speaking to the media representatives at Karwar, he said that the High Command will decide who should continue as Chief Minister. The people of the state have won 136 seats for the Congress party. He has been allowed to hold office for five years. He said that the high command will decide who should be made CM and for how many years.

Reacting to former minister Eshwarappa’s statement that the Congress government will not be in the state, he told Eshwarappa to first elect a president and leader of the opposition for his party. He said that the leaders of the opposition party cannot do it, they have no morals to criticize us.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com