Breaking News

ಬರ್ತಡೇ ದಿನವೇ ವಿರಾಟ್ ಕೊಹ್ಲಿ ಸ್ಪೋಟ ಬ್ಯಾಟಿಂಗ್ 49ನೇ ಶತಕ ಸಂಭ್ರಮ

 

ಕೋಲ್ಕತ್ತಾ: 2023ರ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಅವರು ತಮ್ಮ ಬರ್ತ ಡೇ ದಿನವೇ 49 ನೇ ಶತಕ ಸಿಡಿಸುವ ಮೂಲಕ ಸಚಿನ್‌ ತೆಂಡೂಲ್ಕರ್ ಅವರ ದಾಖಲೆ ಸರಿಗಟ್ಟಿದ್ದಾರೆ.

ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆದ  ಭಾರತ ಮತ್ತು ದಕ್ಷಿಣ ಆಫ್ರಿಕಾ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ತಮ್ಮ ಅಬ್ಬರ ಬ್ಯಾಟಿಂಗ್ ಮೂಲಕ  ಭಾರತ ತಂಡ 50 ಓವರ್‌ಗೆ 5 ವಿಕೆಟ್ ನಷ್ಟಕ್ಕೆ 326 ರನ್‌ ಗಳಿಸುವ ಮೂಲಕ ಸೌತ್‌ ಆಫ್ರಿಕಾಗೆ 327 ರನ್‌ಗಳ ಬಿಗ್‌ ಟಾರ್ಗೆಟ್‌ ನೀಡಿತು.

  1.  

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆಯೇ ಭಾರತ ತಂಡದ ಆರಂಭಿಕ ಆಟಗಾರರಾದ ನಾಯಕ ರೋಹಿತ್ ಶರ್ಮಾ ಸಿಡಿಸಲಬ್ಬರದ ಬ್ಯಾಟಿಂಗ್‌ ಮಾಡುವ ಮೂಲಕ ಪವರ್‌ ಪ್ಲೇನಲ್ಲಿ ತಂಡದ ಮೊತ್ತವನ್ನು ಹೆಚ್ಚಿಸುವಲ್ಲಿ ಸಹಾಯಕರಾದರು.

ಇನ್ನು, ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ತಂಡಕ್ಕೆ ನಾಯಕ ರೋಹಿತ್‌ ಶರ್ಮಾ ಅಬ್ಬರದ ಬ್ಯಾಟಿಂಗ್‌ ಉತ್ತಮ ಆರಂಭ ನೀಡುವಲ್ಲಿ ಸಹಾಯಕವಾಯಿತು. 35 ನೇ ವರ್ಷದ ಜನ್ಮದಿನದ ಖುಷಿಯಲ್ಲಿ ಇರುವ ವಿರಾಟ್ ಕೊಹ್ಲಿ ಆಫ್ರಿಕಾ ವಿರುದ್ಧ ಭರ್ಜರಿ ಶತಕ ಸಿಡಿಸಿ ಸಚಿನ್‌ ಅವರ 49 ಶತಕಗಳ ದಾಖಲೆಯನ್ನು ಸರಿಗಟ್ಟಿದರು. ಕೊಹ್ಲಿ 121 ಎಸೆತದಲ್ಲಿ 10 ಬೌಂಡರಿಗಳ ಮೂಲಕ 101 ರನ್‌ ಸಿಡಿಸಿ ಅಬ್ಬರಿಸಿದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com