Breaking News

ಬೆಂಗಳೂರು: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಹಿಳಾ ವಿಜ್ಞಾನಿ ಕೊಲೆ

 

ಬೆಂಗಳೂರು: ಬೆಂಗಳೂರಿನಲ್ಲಿ ಭಾನುವಾರ ಬೆಳಿಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವಿಜ್ಞಾನಿಯ  ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ. ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದ ಮಹಿಳೆ ಕೊಲೆಯು ರಾಜಧಾನಿ ಬೆಚ್ಚಿ ಬೀಳುವಂತೆ ಮಾಡಿದೆ.

ಬೆಂಗಳೂರಿನ ಗ್ರಾಮಾಂತರ ಭೂ ಗರ್ಭಶಾಸ್ತ್ರ ವಿಭಾಗದ ಹಿರಿಯ ಅಧಿಕಾರಿ ಪ್ರತಿಮಾ (37) ಕೊಲೆಯಾದವರು.  ಸುಬ್ರಹ್ಮಣ್ಯ ಪುರ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡಕಲ್ಲಸಂದ್ರದ ಗೋಕುಲ್‌ ಅಪಾರ್ಟ್ ಮೆಂಟ್  ನಲ್ಲಿ ಈ ಘಟನೆ ನಡೆದಿದೆ.

ಪ್ರತಿಮಾ ದೊಡ್ಡಕಲ್ಲಸಂದ್ರದ ಕುವೆಂಪು ನಗರದಲ್ಲಿ ವಾಸವಾಗಿದ್ದರು. ಪತಿ ಮತ್ತು ಮಗ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನೆಲೆಸಿದ್ದಾರೆ. ಪ್ರತಿಮಾ ಅವರು ಒಬ್ಬರೇ ಇದ್ದಾಗ ದುಷ್ಕರ್ಮಿಗಳು ಬಂದು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಪ್ರತಿಮಾ ಅವರನ್ನು ಚಾಲಕ ಮನೆಗೆ ಬಿಟ್ಟು ಮಾಡಿ ಹೊರಟಿದ್ದರು. ಪ್ರತಿಮಾ ಅವರಿಗೆ ಅಣ್ಣ ರಾತ್ರಿ ಕರೆ ಮಾಡಿದ್ದರು. ಆದರೆ ಕರೆ ಸ್ವೀಕರಿಸದ ಕಾರಣ ಬೆಳಿಗ್ಗೆ ಬಂದು ನೋಡಿದ್ದಾರೆ. ಈ ವೇಳೆ ಕೊಲೆ ಆಗಿರುವುದು ಬೆಳಕಿಗೆ ಬಂದಿದೆ.

  1.  

It has come to light that a scientist of the Department of Mines and Earth Sciences was murdered in Bangalore on Sunday morning. The murder of a woman who lived in an apartment has shocked the capital.

Pratima (37), a senior officer of the Rural Land Obstetrics Department in Bangalore, was murdered. The incident took place at Gokul Apartment in Dodkalasandra under Subrahmanyapur police station.

Pratima lived in the city of Kuvempu in Doddakkallasandra. Husband and son reside in Theerthahalli of Shimoga district. When Pratima was alone, miscreants came and killed her and escaped.

Pratima was left at home by the driver at around 8 pm on Saturday night. Anna had called Pratima at night. But as he did not receive the call, he came to see him in the morning. In this case, the murder has come to light.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com