Breaking News

ಅಣ್ಣನ ಪತ್ನಿ, ಮಕ್ಕಳಿಬ್ಬರನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ: ಹಾನಗಲ್ ನಲ್ಲಿ ಪ್ರಕರಣ ದಾಖಲು

 

ಹಾವೇರಿ: ಅಣ್ಣನ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಮೈದುನ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಯಳ್ಳೂರು ಗ್ರಾಮದಲ್ಲಿ ನಡೆದಿದೆ.

ಗೀತಾ ಹೊನ್ನೆಗೌಡ ಮರಿಗೌಡ (35), ಅಕುಲ್ (10) ಮತ್ತು ಅಂಕಿತಾ (6) ಎಂಬುವವರು ಕೊಲೆಯಾದವರು. ಗೀತಾ ಅವರ  ಪತಿ ಹೊನ್ನೆಗೌಡರ ತಮ್ಮ ಕುಮಾರಗೌಡ್ (35) ಕೊಲೆಯ ಆರೋಪಿ ಆಗಿದ್ದು, ಕೊಲೆ ಮಾಡಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಹೊನ್ನೆಗೌಡ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ ಎಂದು ತಿಳಿದು ಬಂದಿದೆ.

ಆಸ್ತಿ ವಿಚಾರಕ್ಕೆ ಸಂಬಂಧಿಸಿ ಈ ಕೊಲೆ ನಡೆದಿದೆ ಎಂದು ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಹಾನಗಲ್ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  1.  

The incident in which Anna’s wife and two children were hacked to death with Maidu’s machetes took place in Yallur village of Hanagal taluk of Haveri district.

Geeta Honnegowda Marigowda (35), Akul (10) and Ankita (6) were killed. According to the police, Geetha’s husband Honnegoudara Tama Kumaragoud (35) is the accused of the murder and is absconding after the murder. It is learned that Honnegowda is employed abroad.

It has been learned that this murder took place in connection with a property issue. The Hanagal police station has registered a case and is investigating.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com