Breaking News

ಯಕ್ಷಗಾನ ಕಲಾವಿದ ಪೆರುವೋಡಿ ನಾರಾಯಣ ಭಟ್ ನಿಧನ

 

ಪುತ್ತೂರು: ಯಕ್ಷಗಾನ ಕಲಾವಿದ ಪುತ್ತೂರು ಬಲ್ನಾಡಿನ ನೂಜಿ ನಿವಾಸಿ ಪೆರುವೋಡಿ ನಾರಾಯಣ ಭಟ್ (96) ಮಂಗಳವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಪೆರುವೋಡಿ ನಾರಾಯಣ ಭಟ್ ಅವರು ಯಕ್ಷಗಾನದಲ್ಲಿ ಹಾಸ್ಯ ಪಾತ್ರಗಳಿಗೆ ಜೀವ ತುಂಬುವ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು.

ಧರ್ಮಸ್ಥಳ ಮೇಳ ಸೇರಿದಂತೆ ಹಲವು ಮೇಳಗಳಲ್ಲಿ ಕಲಾವಿದರಾಗಿದ್ದ ಪೆರುವೋಡಿ ನಾರಾಯಣ ಭಟ್ಟರು ಪಾಪಣ್ಣ ಭಟ್ರು ಎಂದೇ ಖ್ಯಾತಿ ಪಡೆದಿದ್ದರು.

ಪೆರುವೋಡಿ ಅವರು ಪಾಪಣ್ಣ ವಿಜಯ ಗುಣಸುಂದರಿ ಪ್ರಸಂಗದ ಪಾಪಣ್ಣ ಪಾತ್ರದ ವಿನ್ಯಾಸ ಹಾಗೂ ಪಾತ್ರಾಭಿವ್ಯಕ್ತಿಯ ಮೂಲಕ ತಮ್ಮ ಕಲ್ಪನಾಶಕ್ತಿಯನ್ನು ಪ್ರದರ್ಶಿಸಿ ಜನ ಮನ್ನಣೆ ಗಳಿಸಿದ್ದರು. ದಮಯಂತಿ ಪುನರ್ ಸ್ವಯಂವರ ಪ್ರಸಂಗದ ಬಾಹುಕ ಪಾತ್ರಕ್ಕೆ ಹೊಸ ರೂಪ ನೀಡಿದ್ದರು.

  1.  

Yakshagaana artiste Peruodi Narayan Bhatt (96), a resident of Nuji, Puttur Balnad, died in a private hospital on Tuesday. Peruvodi Narayan Bhatt captured the attention of the audience by bringing life to comic characters in Yakshagana.

Peruodi Narayan Bhatt, who was an artist in many melas including Dharmasthala Mela, was popularly known as Papanna Bhattu.

Peruvodi gained public recognition by showing his imagination through the design and portrayal of the character of Papanna in the episode of Papanna Vijaya Gunasundari. Damayanti gave a new look to the multi-faceted character of Punar Swayamvar episode.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com