Breaking News

ದ.ಕ ಜಿಲ್ಲೆಯ 46 ಮಂದಿ ಸಾಧಕರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ

 

ಮಂಗಳೂರು:   2023ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳ 46 ಮಂದಿ ಸಾಧಕರನ್ನು ಗುರುತಿಸಲಾಗಿದ್ದು, ಪತ್ರಿಕೋದ್ಯಮ ಕ್ಷೇತ್ರದ ಸಾಧನೆಯನ್ನು ಹಿರಿಯ ಪತ್ರಕರ್ತರಾದ ರವಿ ಪೊಸವಣಿಕೆ ಹಾಗೂ ಇಬ್ರಾಹಿಂ ಅಡ್ಕಸ್ಥಳ ಅವರನ್ನು ಆಯ್ಕೆ ಮಾಡಲಾಗಿದೆ.  ಸಾಹಿತ್ಯ ಕ್ಷೇತ್ರದಲ್ಲಿ ನಿವೃತ್ತ ಪ್ರಾಧ್ಯಾಪಕ ಡಾ.ಪ್ರಭಾಕರ ನೀರುಮಾರ್ಗ, ಕೊಂಕಣಿ ಸಾಹಿತಿ ಎಚ್ ಎಂ. ಪೆರ್ನಾಲ್ (ಹೆನ್ರಿ ಮೆಂಡೋನ್ಸ) ಅವರನ್ನು ಆಯ್ಕೆ ಮಾಡಲಾಗಿದೆ.

  1.  

ಸಂಗೀತ ಕ್ಷೇತ್ರದಲ್ಲಿ ಜಗದೀಶ್ ಆಚಾರ್ಯ ಶಿವಪುರ, ಎ. ಸುರೇಶ್, ನಾಟಕ ಕ್ಷೇತ್ರದಲ್ಲಿ ರವಿಚಂದ್ರ ಬಿ. ಸಾಲಿಯಾನ್ ಗುಂಡೂರಿ, ಜನಪದ – ಡಾ. ರವೀಶ ಪರವ ಪಡುಮಲೆ, ಯಕ್ಷಗಾನ – ದೇವಾನಂದ ಭಟ್, ದಿನೇಶ್ ಶೆಟ್ಟಿಗಾರ್, ಭರತನಾಟ್ಯ – ಪ್ರಮೋದ್ ಉಳ್ಳಾಲ್, ಸಹಕಾರ ಕ್ಷೇತ್ರ – ಚಿತ್ತರಂಜನ್ ಬೋಳಾರ, ಕ್ರೀಡೆ – ಜಯಪ್ಪ ಲಮಾಣಿ, ವಿಜಯ ಕಾಂಚನ್, ಪರಿಸರ – ಬಿ.ಎಸ್ ಹಸನಬ್ಬ, ಉದ್ಯಮ ಕ್ಷೇತ್ರ- ರೊನಾಲ್ಡ್ ಸಿಲ್ವನ್ ಡಿಸೋಜ, ಕೃಷಿ ಕ್ಷೇತ್ರ – ಕೇಶವ ಭಂಡಾರಿ, ದೈವ ನರ್ತನ – ಮಾಧವ ಪರವ ಸಿದ್ದಕಟ್ಟೆ, ದೈವಾರಾಧನೆ, ಜನಪದ ಸಾಹಿತ್ಯ- ಮನ್ಮಥ ಜೆ. ಶೆಟ್ಟಿ ಪುತ್ತೂರು, ಕಲಾಕ್ಷೇತ್ರ – ಎ.ಎಸ್. ದಯಾನಂದ ಕುಂತೂರು, ದೈವಾರಾಧನೆ – ಶೇಖರ ಪಂಬದ ಸೇರಿ 46 ಮಂದಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com