Breaking News

ನಿವೃತ್ತ ನ್ಯಾ. ಸಂತೋಷ ಹೆಗ್ಡೆ, ಶಶಿಕಿರಣ್ ಶೆಟ್ಟಿಗೆ ಡಾಕ್ಟರೇಟ್ ಪ್ರದಾನ

 

ಮಂಗಳೂರು: ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯದ 13 ನೇ ವಾರ್ಷಿಕ ಘಟಿಕೋತ್ಸವ  ನ. 4 ರಂದು ಸಂಜೆ 4 ಗಂಟೆಗೆ ಕ್ಷೇಮಾ ಕ್ಯಾಂಪಸ್‌ ನಿಟ್ಟೆ ಸಭಾಂಗಣದಲ್ಲಿ ನಡೆಯಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿವಿಯ ಕುಲಪತಿ ಪ್ರೊ. ಎಂ. ಎಸ್. ಮೂಡಿತ್ತಾಯ ತಿಳಿಸಿದರು.

ವಿಶ್ವವಿದ್ಯಾಲಯದ ವಿವಿಧ ಕೋರ್ಸ್‌ಗಳಲ್ಲಿ ಉತ್ತೀರ್ಣರಾದ 1254 ಮಂದಿಗೆ ಪದವಿ ಮತ್ತು 25 ಮಂದಿಗೆ ಪಿಎಚ್‌ಡಿ ಪದವಿಗಳನ್ನು ಪ್ರದಾನ ಮಾಡಲಾಗುವುದು.  ಘಟಿಕೋತ್ಸವವು ವಿಶ್ವವಿದ್ಯಾಲಯದ ಮಹತ್ವದ ಮೈಲುಗಲ್ಲು ಆಗಿದ್ದು,  ಅರ್ಹ ಅಭ್ಯರ್ಥಿಗಳಿಗೆ ವೈದ್ಯಕೀಯ, ದಂತ ವೈದ್ಯಕೀಯ, ಔಷಧ ವಿಜ್ಞಾನ, ಶುಶ್ರೂಷೆ , ಜೀವವಿಜ್ಞಾನ, ಸಮಗ್ರ ಆರೋಗ್ಯ ವಿಜ್ಞಾನ, ಮಾನವಿಕ ಹಾಗೂ ವಾಸ್ತುಶಿಲ್ಪ ವಿಷಯಗಳಲ್ಲಿ, ಪಿಎಚ್ ಡಿ , ಸ್ನಾತಕೋತ್ತರ, ಫೆಲೋಶಿಪ್, ಸ್ನಾತಕೋತ್ತರ ಡಿಪ್ಲೊಮಾ ಪದವಿಗಳನ್ನು ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

‌ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಕಾನೂನು ಕ್ಷೇತ್ರಕ್ಕೆ ನೀಡಿದ ಅತ್ಯುನ್ನತ ಕೊಡುಗೆಗಾಗಿ ಮತ್ತು ವ್ಯವಹಾರಿಕ ಜಗತ್ತಿನ ಸಾಧನೆಗಾಗಿ ಆಲ್‌ಕಾರ್ಗೋ ಗ್ರೂಪ್‌ ಅಧ್ಯಕ್ಷರು ಮತ್ತು ಸಂಸ್ಥಾಪಕ ಶಶಿಕಿರಣ್ ಶೆಟ್ಟಿ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುವುದು. ನಿಟ್ಟೆ ವಿಶ್ವವಿದ್ಯಾಲಯದ 31 ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.

ವಿಶ್ವವಿದ್ಯಾಲಯದ ಕುಲಾಧಿಪತಿ ಎನ್.ವಿನಯ ಹೆಗ್ಡೆ ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದಾರೆ. ಫ್ಯಾರಿಸ್‌ ಬರ್ಗ್‌ ಪೆನ್ಸಿಲ್ವೇನಿಯಾ ಸ್ಟೇಟ್ ಯೂನಿವರ್ಸಿಟಿ ಅಂತರ ರಾಷ್ಟ್ರೀಯ ವ್ಯವಹಾರಗಳ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಹಮೀದ್ ಅನ್ಸಾರಿ ಮುಖ್ಯ ಅತಿಥಿಯಾಗಿ ಘಟಿಕೋತ್ಸವ ಭಾಷಣವನ್ನು  ಮಾಡಲಿದ್ದಾರೆ ಎಂದು ತಿಳಿಸಿದರು.

ಸಹಕುಲಾಧಿಪತಿಗಳಾದ ಡಾ. ಎಂ. ಶಾಂತರಾಮ ಶೆಟ್ಟಿ ಮತ್ತು ವಿಶಾಲ್ ಹೆಗ್ಡೆ, ಕುಲಪತಿ ಪ್ರೊ. ಡಾ.ಎಂ.ಎಸ್, ಮೂಡಿತ್ತಾಯ, ಕುಲಸಚಿವ ಡಾ.ಹರ್ಷ ಹಾಲಹಳ್ಳಿ ಮತ್ತು ಪರೀಕ್ಷಾ ನಿಯಂತ್ರಕ ಪ್ರೊ. ಡಾ. ಪ್ರಸಾದ್ ಬಿ ಶೆಟ್ಟಿ ಭಾಗವಹಿಸಲಿದ್ದಾರೆ. ನಿಟೆ ವಿಶ್ವವಿದ್ಯಾಲಯವು 2023ರ ಎನ್‌ಆರ್‌ಐಎಫ್ ಶ್ರೇಯಾಂಕ್ ದಲ್ಲಿ ಭಾರತೀಯ ವಿಶ್ವವಿದ್ಯಾಲಯಗಳ ಪೈಕಿ 65 ನೇ ಸ್ಥಾನ ಪಡೆದಿದೆ. ವಿಶ್ವವಿದ್ಯಾಲಯವು ರಾಷ್ಟ್ರೀಯ ಮೌಲ್ಯಮಾಪನಾ ಮಂಡಳಿ (ಎನ್‌ಎಎಸಿ) ಎ+ಗ್ರೇಡ್ ಪಡೆದುಕೊಂಡಿದೆ ಎಂದರು.

  1.  

2023ರ ಕ್ಯೂಎಸ್ ವರ್ಲ್ಡ್ ಯೂನಿವರ್ಸಿಟಿ ಶ್ರೇಯಾಂಕದ ಪ್ರಕಾರ ಏಷ್ಯಾದ ಅಗ್ರ 500 ವಿಶ್ವವಿದ್ಯಾಲಯಗಳಲ್ಲಿ ಸ್ಥಾನ ಪಡೆದಿದೆ. ಟೈಮ್ಸ್ ಹೈಯರ್ ಎಜುಕೇಷನ್ ಇಂಪ್ಯಾಕ್ಟ್ ರ‍್ಯಾಂಕಿಂಗ್ ನಲ್ಲಿ ಸುಸ್ಥಿರ ಅಭಿವೃದ್ಧಿ ಪ್ರಯತ್ನಗಳಿಗಾಗಿ ವಿಶ್ವದ ಅಗ್ರ 400 ವಿಶ್ವವಿದ್ಯಾಲಯಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ ಎಂದು ತಿಳಿಸಿದರು.‌

ಕುಲಸಚಿವ ಡಾ.ಹರ್ಷ ಹಾಲಹಳ್ಳಿ ಮತ್ತು ಪರೀಕ್ಷಾ ನಿಯಂತ್ರಕ  ಡಾ. ಪ್ರಸಾದ್ ಬಿ ಶೆಟ್ಟಿ ಇದ್ದರು.

13th Annual Convocation of Nitte Deemed University. In a press conference on Monday, the chancellor of the university Prof. M. S. Mudittaya said.

1254 graduates and 25 Ph.D degrees will be awarded in various courses of the University. He said that the convocation is an important milestone of the university and the deserving candidates will be awarded Ph.D., Master’s, Fellowship, Post-Graduate Diploma degrees in Medicine, Dentistry, Pharmaceutical Sciences, Nursing, Life Sciences, Comprehensive Health Sciences, Humanities and Architecture.

Supreme Court Retired Justice N. Allcargo Group Chairman and Founder Sasikiran Shetty will be awarded a doctorate degree for Santosh Hegde’s outstanding contribution to the field of law and achievement in the business world. He informed that gold medals will be distributed to 31 students of Nitte University.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com