Breaking News

ಬೀಚ್ ನಲ್ಲಿ ಕಸ ಎಸೆದರೇ ದಂಡ ವಸೂಲಿ ಗ್ಯಾರಂಟಿ: ಡಿಸಿ ಗಂಗೂಬಾಯಿ ಮಾನಕರ

 

ಕಾರವಾರ: ರವೀಂದ್ರನಾಥ ಟ್ಯಾಗೋರ್ ಬೀಚ್ ನಲ್ಲಿ ಕಸ ಎಸೆದು ಮಾಲಿನ್ಯ ಉಂಟು ಮಾಡುವ ಪ್ರವಾಸಿಗರು ಮತ್ತು ಸಾರ್ವಜನಿಕರಿಂದ  ಕಟ್ಟುನಿಟ್ಟಾಗಿ ದಂಡ ವಸೂಲಿ ಮಾಡಬೇಕು ಎಂದು ನಗರಸಭೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರಸಭೆಯ ವತಿಯಿಂದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿನಡೆದ, ನಮ್ಮ ಕಾರವಾರ -ಸ್ವಚ್ಛ ಕಾರವಾರ  ತ್ಯಾಜ್ಯ ವಿಂಗಡಣೆ ತ್ರೈ ಮಾಸಿಕ ಅಭಿಯಾನ ಕಾರ್ಯಕ್ರಮದಲ್ಲಿ , ಬೀಚ್ ನಲ್ಲಿ ಬಿದ್ದಿದ್ದ ಕಸವನ್ನು ಸ್ವಚ್ಚಗೊಳಿಸಿ ಅವರು ಮಾತನಾಡಿದರು.

  1.  

ಕಾರವಾರದ ಪ್ರಮುಖ ಪ್ರವಾಸಿ ತಾಣ ಬೀಚ್ ವೀಕ್ಷಣೆಗೆ ವಿವಿಧ ಜಿಲ್ಲೆಗಳ ಪ್ರವಾಸಿಗರು ಮತ್ತು ಜಿಲ್ಲೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಬೀಚ್ ಗೆ ಬರುವಾಗ ತಮ್ಮೊಂದಿಗೆ ತರುವ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಿದ್ದು , ಇದರಿಂದ ಕಡಲ ತೀರದಲ್ಲಿ ಮಾಲಿನ್ಯ ಉಂಟಾಗಿ ಬೀಚ್ ಪ್ರಾಕೃತಿಕ ಸೌಂದರ್ಯಕ್ಕೆ ಧಕ್ಕೆ ಉಂಟಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಇನ್ಮುಂದೇ ಮುಂದೆ ಬೀಚ್ ನಲ್ಲಿ ತ್ಯಾಜ್ಯ ಹಾಕುವವರ ವಿರುದ್ಧ ಸ್ಥಳದಲ್ಲೇ ಕಟ್ಟುನಿಟ್ಟಾಗಿ  ದಂಡ ವಸೂಲಿ ಮಾಡುವಂತೆ ಸೂಚನೆ ನೀಡಿದರು.

ಬೀಚ್ ನಲ್ಲಿ ಕಸ ಹಾಕುವವವರ ವಿರುದ್ಧ ದಂಡ ಸಂಗ್ರಹಣೆ ಮಾಡಲು  ಹಾಗೂ ಮೇಲ್ವಿಚಾರಣೆ ಮಾಡಲು ಒಬ್ಬ ಪ್ರತ್ಯೆಕ  ಸಿಬ್ಬಂದಿ ಬೀಚ್ ನಲ್ಲಿ ಕರ್ತವ್ಯಕ್ಕೆ ನಿಯೋಜಿಸುವಂತೆ ನಿರ್ದೇಶನ ನೀಡಿದರು.

ಬೀಚ್ ನಲ್ಲಿ ಬಿದ್ದಿರುವ ಕಸ ಸಂಗ್ರಹಣೆ ಮತ್ತು ನಿರ್ವಹಣೆ ಮಾಡುವುದು ಸರ್ಕಾರಿ ಇಲಾಖೆಗಳು, ಅಧಿಕಾರಿಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳ ಕಾರ್ಯ ಮಾತ್ರವಲ್ಲದೇ ಇಲ್ಲಿಗೆ ಆಗಮಿಸುವ ಪ್ರವಾಸಿಗರು ಮತ್ತು ಸಾರ್ವಜನಿಕರ ಜವಾಬ್ದಾರಿ ಕೂಡ ಆಗಿದೇ. ಬೀಚ್ ಅನ್ನು  ತ್ಯಾಜ್ಯ ವಸ್ತುಗಳನ್ನು ಹಾಕುವುದರ ಮೂಲಕ ಮಲಿನಗೊಳಿಸದಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ನಗರಸಭೆಯ ಪೌರಾಯುಕ್ತ ಚಂದ್ರಮೌಳಿ ಹಾಗೂ ನಗರಸಭೆ ಮತ್ತು ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಪಾಲ್ಗೊಂಡಿದ್ದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com