Breaking News

ಸರಕಾರಿ ನೌಕರರ ಕ್ರೀಡಾಕೂಟ: ಮಿಂಚಿದ ಭಾಗೀರಥಿ ರೈ, ಚಿನ್ನ, ಬೆಳ್ಳಿಯ ದಾಖಲೆ

 

ಮಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ತುಮಕೂರಿನಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ರಾಜ್ಯ ಸರಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯ ಕಾರ್ಯಕ್ರಮ ಸಂಯೋಜಕಿ ಭಾಗೀರಥಿ ರೈ  ಅವರು ಮುಕ್ತ ವಿಭಾಗದ  ಮಹಿಳೆಯರ ಡಿಸ್ಕಸ್ ಎಸೆತದಲ್ಲಿ ವಿಶಿಷ್ಟ ಸಾಧನೆ ಮಾಡುವ ಮೂಲಕ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ.

ಇದೇ ವಿಭಾಗದ ಮಹಿಳೆಯರ ಜಾವಲಿನ್ ಎಸೆತದಲ್ಲಿ ದ್ವಿತೀಯ ಸ್ಥಾನ ಗಳಿಸುವ ಮೂಲಕ ಬೆಳ್ಳಿ ಪದಕ ದಾಖಲಿಸಿದ್ದಾರೆ.

ಕಳೆದ ಬಾರಿಯೂ ಕೂಡ ಅವರು ಪೂನಾದಲ್ಲಿ ನಡೆದ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡು  ಅಲ್ಲಿಯೂ ಕೂಡ ನಾಲ್ಕನೇ  ಸ್ಥಾನಗಳಿಸಿದ್ದರು.  ಹರಿಯಾಣದಲ್ಲಿ ನಡೆದ ರಾಷ್ಟ್ರ ಮಟ್ಟದ ಸರಕಾರಿ ನೌಕರರ ಕ್ರೀಡಾ ಕೂಟದಲ್ಲಿ ಭಾಗೀರಥಿ ರೈ ಅವರು ರಾಜ್ಯವನ್ನು ಪ್ರತಿನಿಧಿಸಿ ಜಾವಲಿನ್ ನಲ್ಲಿ ಬೆಳ್ಳಿ ಪದಕ ದಾಖಲಿಸಿದ್ದರು.  ಡಿಸ್ಕಸ್ ನಲ್ಲಿ ಕಂಚಿನ ಪದಕ ದಾಖಲಿಸಿದ್ದರು.

  1.  

Bhagirathi Rai, Program Coordinator of Dakshina Kannada Zilla Panchayat District Adult Education Department, won the gold medal in the women’s discus throw of the open division in the state level sports and cultural competition of the state government employees, which was organized by the Youth Empowerment and Sports Department for three days in Tumkur.

In the same category, she won a silver medal by finishing second in the women’s javelin throw.

Last time too, he participated in the national level games held in Pune and finished fourth there as well. Bhagirathi Rai represented the state in the national level government employees sports meet in Haryana and won a silver medal in javelin. He won a bronze medal in discus.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com