Breaking News

ಪ್ರಸಕ್ತ ವರ್ಷ ಕರಾವಳಿ ಉತ್ಸವ ನಡೆಸಲು ಚಿಂತನೆ: ಜಿಲ್ಲಾಧಿಕಾರಿ ಮುಲ್ಲೈ

 

ಮಂಗಳೂರು: ಮೂರು ವರ್ಷಗಳಿಂದ ಸ್ಥಗಿತಗೊಂಡಿರುವ ಕರಾವಳಿ ಉತ್ಸವವನ್ನು ಪ್ರಸಕ್ತ ವರ್ಷ ನಡೆಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಈ ಕುರಿತು ನಡೆದ ಸಭೆಯಲ್ಲಿ ಅವರು ಮಾತನಾಡಿ, ಕರಾವಳಿ ಉತ್ಸವದಲ್ಲಿ ಜನಾಕರ್ಷಣೀಯ ಕಾರ್ಯಕ್ರಮಗಳಿಗೆ ಒತ್ತು ನೀಡಬೇಕು. ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳನ್ನು ಜೊತೆಗೂಡಿಸಿ ಈಗಿನ ಅಭಿರುಚಿಗೆ ತಕ್ಕಂತೆ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳುವುದು ಉತ್ತಮವಾಗಿದೆ ಎಂದು ಹೇಳಿದರು.

ಜಿಲ್ಲೆಯ ಶಿಕ್ಷಣ ಸಂಸ್ಥೆಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳ ಸಾಂಸ್ಕೃತಿಕ ಉತ್ಸವವನ್ನು ನಡೆಸಬಹುದಾಗಿದೆ. ಗುಣಮಟ್ಟದ ಕಾರ್ಯಕ್ರಮಗಳಿಗೆ ಅದ್ಯತೆ ನೀಡಬೇಕು. ಹೊರಗಿನ ಕಲಾವಿದರಿಗೆ, ಸ್ಥಳೀಯರಿಗೆ ಒತ್ತು ನೀಡಬೇಕಿದೆ. ಕರಾವಳಿ ಉತ್ಸವವನ್ನು 10 ದಿನದ ಬದಲು ಮೂರು ದಿನಗಳಿಗೆ ಸೀಮಿತಗೊಳಿಸಿ ಹೆಚ್ಚು ಗುಣಮಟ್ಟದ ಹಾಗೂ ಜನಾಕರ್ಷಣೆಯ ಕಾರ್ಯಕ್ರಮಗಳಿಗೆ ಒತ್ತು ನೀಡುವ ಬಗ್ಗೆ ಪರಿಶೀಲಿಸಲಾಗುವುದು. ಕರಾವಳಿ ಉತ್ಸವದ ಬಗ್ಗೆ ಮುಂದಿನ ದಿನಗಳಲ್ಲಿ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ. ಆನಂದ್ ಕೆ, ಡಿಸಿಪಿ ಸಿದ್ದಾರ್ಥ್ ಗೋಯಲ್, ಹೆಚ್ಚುವರಿ  ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್, ಮಹಾ ನಗರಪಾಲಿಕೆ ಆಯುಕ್ತ ಆನಂದ್ ಸಿ. ಎಲ್ ಇದ್ದರು.

  1.  

District Collector Mullai Mugilan MP said that the coastal festival which has been suspended for three years is being considered for the current year.

In a meeting held on Friday in the District Collector’s office, he said that emphasis should be placed on popular programs during the Coastal Utsav. He said that it would be better to form programs according to the current tastes in collaboration with various associations of the district.

A cultural festival of students can be conducted using the educational institutions of the district. Priority should be given to quality programs. Emphasis should be given to outside artists and locals. Limiting the Coastal Utsav to three days instead of 10 days and emphasizing more quality and popular programs will be reviewed. He said that a meeting will be held in the next few days and a final decision will be taken regarding the coastal festival.

Zilla Panchayat CEO Dr. Anand K, DCP Siddarth Goyal, Additional District Collector Dr. Santhosh Kumar, Commissioner Anand C. L was there.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com