Breaking News

ಅಸಹ್ಯ ಹುಟ್ಟಿಸುವ ಮಟ್ಕಾ ಸೋಡಾ: ಕೊನೆಗೂ ಎಚ್ಚೆತ್ತ ಪಾಲಿಕೆ ಆರೋಗ್ಯ ಅಧಿಕಾರಿಗಳು

 

ಮಂಗಳೂರು: ಸ್ವಚ್ಛತೆಗೆ ಆದ್ಯತೆ ನೀಡದೇ ಮಟ್ಕಾ ಸೋಡಾ ಮಾರಾಟ ಮಾಡುತ್ತಿದ್ದ ಕುದ್ರೋಳಿ ದೇವಸ್ಥಾನ ಬಳಿಯ ನವರಾತ್ರಿ ಉತ್ಸವದ ಸ್ಟಾಲ್ ಗೆ ಪಾಲಿಕೆ ಆರೋಗ್ಯ ಇಲಾಖೆ  ಅಧಿಕಾರಿಗಳು ದಾಳಿ ನಡೆಸಿದ್ದಾರೆ.‌

ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ದ್ವಾರದ ಬಳಿಯಲ್ಲೇ ಹಿಂದಿ ಮಾತನಾಡುತ್ತಿರುವ ವ್ಯಾಪಾರಿಗಳು ಮಟ್ಕಾ ಸೋಡಾ ಸ್ಟಾಲ್ ಹಾಕಿದ್ದರು. ಸ್ಟಾಲ್ ನಲ್ಲಿ ರಾತ್ರಿ ವೇಳೆ ಭರ್ಜರಿ ವ್ಯಾಪಾರ ಮಾಡುತ್ತಿದ್ದರು. ಗ್ರಾಹಕರೊಬ್ಬರು ಮಟ್ಕಾ ಸೋಡಾ ಮಾರಾಟ ಮಾಡುವ ಸ್ಟಾಲ್  ದುಃಸ್ಥಿತಿ ಕುರಿತು ವಿಡಿಯೊ ಮಾಡಿ ಜಾಲತಾಣದಲ್ಲಿ ವೈರಲ್ ಮಾಡಿದ್ದರು. ಜನರು ಸೋಡಾ ಕುಡಿದ ಮಟ್ಕಾವನ್ನು ತೊಳೆಯುವ ನೀರು ತ್ಯಾಜ್ಯದ ರೀತಿಯಲ್ಲಿ ಕಂಡು ಬಂದಿತ್ತು.  ಸ್ಟಾಲ್ ಸಿಬ್ಬಂದಿ ತಂಬಾಕು ಜಗಿದು ಅಲ್ಲಿಯೇ ಉಗುಳುತ್ತಿದ್ದರು. ಬಾಯಿಂದ ತೆಗೆದು ಕೈತೊಳೆದ ನೀರಿನಲ್ಲೇ ಮಟ್ಕಾ ತೊಳೆಯುತ್ತಿದ್ದರು. ಆ ವಿಡಿಯೊ ಜಾಲತಾಣದಲ್ಲಿ ವೈರಲ್ ಆಗಿದ್ದಲ್ಲದೆ, ಶುಚಿತ್ವ ಇಲ್ಲದ ಮಟ್ಕಾ ಸೋಡಾ ಮಾರಾಟದ  ಬಗ್ಗೆ ಜನರಿಂದ ಬಾರಿ ಆಕ್ರೋಶ ಕೇಳಿ ಬಂದಿತ್ತು.

ವಿಡಿಯೊ ವೈರಲ್ ಆಗುತ್ತಿದ್ದಂತೆ ಪಾಲಿಕೆ ಆರೋಗ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ. ಮಟ್ಕಾ ಸೋಡಾ ಸ್ಟಾಲ್ ನಲ್ಲಿದ್ದ ಪಾಟ್ ಸೇರಿ ಎಲ್ಲ ವಸ್ತುಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದು ಶುಚಿತ್ವ ಕಾಪಾಡದೆ ಸ್ಟಾಲ್ ಗಳನ್ನು ಹಾಕದಂತೆ ತಾಕೀತು ಮಾಡಿದ್ದಾರೆ.  ಕುದ್ರೋಳಿ ನವರಾತ್ರಿ ಉತ್ಸವಕ್ಕೆ ಬಹಳಷ್ಟು ಸ್ಟಾಲ್ ಗಳನ್ನು ಹಾಕಿದ್ದು ಇತರೇ ಸ್ಟಾಲ್ ಗಳಲ್ಲೂ ಶುಚಿತ್ವ ಬಗ್ಗೆ ಪರಿಶೀಲನೆ ಮಾಡಿದ್ದಾರೆ.‌

  1.  

Officials of the Department of Health have raided the Navaratri festival near the Kudroli Temple, which was selling matka soda without prioritizing cleanliness.

Mutka soda stalls were placed at the gate of Kudroli Gokarnanath Temple. He was trading at night at the stall. A customer has gone viral on the website by video about the stall of the stall selling matka soda. The water that was washing soda matka was found in a waste of water. The stall crew was tobacco and spit there. Matka was washed away from the mouth and washed in the washed water. The video has gone viral on the website and has been outraged by people about the sale of unswathed Matka soda.

As the video goes viral, policy officials have attacked. The authorities have confiscated all the items, including the pot in the Matka Soda Stall, and demanded that the stalls be put in place without maintaining cleanliness. Kudroli has put a lot of stalls for the Navratri festival and inspected cleanliness in other stalls.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com