Breaking News

ಬಿಗ್ ಬಾಸ್ ಸ್ಪರ್ಧಿ ಸಂತೋಷಗೆ ಹುಲಿ ಉಗುರು ಕಂಟಕ, ಅರಣ್ಯಾಧಿಕಾರಿಗಳಿಂದ ಬಂಧನ

 

ಬೆಂಗಳೂರು: ಬಿಗ್‌ ಬಾಸ್‌ ಮನೆಯಿಂದಲೇ ಇದೇ ಮೊದಲ ಬಾರಿಗೆ ಸ್ಪರ್ಧಿಯೊಬ್ಬರನ್ನು ಬಂಧಿಸಿರುವ ಘಟನೆ ನಡೆದಿದೆ. ಬಿಗ್‌ ಬಾಸ್ ಕನ್ನಡ ಸೀಸನ್‌ 10 ರ ಸ್ಪರ್ಧಿ ಕೃಷಿಕ ವರ್ತೂರು ಸಂತೋಷ್ ಅವರನ್ನು ರಾಮೋನಹಳ್ಳಿ ಅರಣ್ಯಾಧಿಕಾರಿಗಳು ಭಾನುವಾರ ರಾತ್ರಿ ಬಿಗ್‌ ಬಾಸ್‌ ಮನೆಯಿಂದಲೇ ಬಂಧಿಸಿ ಕರೆ ತಂದಿದ್ದಾರೆ.

ಹಳ್ಳಿಕಾರ್‌ ಹಸುಗಳನ್ನು ಸಾಕುತ್ತಾ , ಅದರ ಪಾಲನೆ ಮಾಡಿ ಕೃಷಿಕನಾಗಿ ಸಾಧನೆ ಮಾಡಿರುವ ವರ್ತೂರು ಸಂತೋಷ್ ಅವರು ಚಿನ್ನಾಭರಣಗಳನ್ನು ಹೆಚ್ಚಾಗಿ ಧರಿಸುತ್ತಾರೆ. ಇತ್ತೀಚೆಗೆ ವೀಕೆಂಡ್‌ ನಲ್ಲಿ ಕಿಚ್ಚನ ಜತೆ ಮಾತನಾಡುವಾಗ ಅವರು ಹುಲಿಯ ಉಗುರು ಇರುವ ಲಾಕೆಟ್‌ ಅನ್ನು‌ ಕುತ್ತಿಗೆಗೆ ಹಾಕಿದ್ದರು. ಹುಲಿಯ ಉಗುರನ್ನು ಈ ರೀತಿಯಾಗಿ ಉಪಯೋಗಿಸುವುದು ವನ್ಯಜೀವಿ ಸಂರಕ್ಷಣಾ ಕಾಯಿದೆ ಅಡಿ ಅಪರಾಧವಾಗಿದ್ದು, ಅರಣ್ಯಾಧಿಕಾರಿಗಳು  ವರ್ತೂರು ಅವರನ್ನು ಬಂಧನ ಮಾಡಿದ್ದಾರೆ ಎನ್ನಲಾಗಿದೆ.

  1.  

This is the first time that a contestant has been arrested from the Bigg Boss house. Bigg Boss Kannada season 10 contestant farmer Varthur Santosh was arrested and summoned by Ramonahalli forest officials from Bigg Boss house on Sunday night.

Varthur Santhosh, who has become an agriculturist by rearing and rearing Hallikar cows, wears gold ornaments often. Recently, while talking to Kich on the weekend, he wore a locket with a tiger claw around his neck. Using a tiger’s claw in this manner is an offense under the Wildlife Protection Act, and forest officials are said to have arrested Varthur.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com