Breaking News

ಮಂಗಳೂರು: ಅಮೃತನಗರದಲ್ಲಿ ಮನೆಯೊಂದಕ್ಕೆ ಸಿಡಿಲು, ಹಾನಿ, ಇಬ್ಬರು ಆಸ್ಪತ್ರೆಗೆ

 

ಮಂಗಳೂರು: ಇಲ್ಲಿನ ಹೊರವಲಯದ ವಾಮಂಜೂರು ಅಮೃತ ನಗರದಲ್ಲಿ ಗೋಪಾಲ ಪೂಜಾರಿ ಎಂಬುವವರ ಮನೆಗೆ ಸೋಮವಾರ ಸಿಡಿಲು ಬಡಿದ ಪರಿಣಾಮ ಮನೆಯ ವಿದ್ಯುತ್ ಉಪಕರಣಗಳಿಗೆ ಹಾನಿ ಉಂಟಾಗಿದ್ದು, ಮನೆಯ ಗೋಡೆ ಅಲಲ್ಲಿ ಬಿರುಕು ಬಿಟ್ಟಿದೆ.

  1.  

ಸಿಡಿಲು ಹೊಡೆದ ರಭಸಕ್ಕೆ ಶಾರ್ಟ್ ಸರ್ಕೀಟ್ ಉಂಟಾಗಿ ವಿದ್ಯುತ್  ಸ್ವಿಚ್ ಬೋರ್ಡ್ ಹಾಗೂ ಮೀಟರ್ ಬಾಕ್ಸ್ ಗೆ ಹಾನಿ ಆಗಿದೆ. ಮನೆಯಲ್ಲಿದ್ದ ಮಹಿಳೆ ಹಾಗೂ 5 ವರ್ಷದ ಮಗುವಿನ ಕಿವಿಗೆ ಹಾನಿ ಆಗಿದ್ದು,  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.  ಮನೆಯಲ್ಲಿ ನಾಲ್ಕು ಮಂದಿ ಇದ್ದರು ಎಂದು ಹೇಳಲಾಗುತ್ತದೆ.

On Monday, lightning struck the house of Gopal Pujari in the outskirts of Wamanjur Amrita Nagar, causing damage to the electrical appliances of the house and cracks in the wall of the house.

The lightning strike caused a short circuit and damaged the electrical switch board and meter box. It has been learned that the woman and the 5-year-old child in the house suffered ear damage and are undergoing treatment at the hospital. It is said that there were four people in the house.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com