Breaking News

400 ಕೆವಿ ವಿದ್ಯುತ್ ಯೋಜನೆ ಸಣ್ಣ, ಅತಿಸಣ್ಣ ರೈತರಿಗೆ ಮಾರಕವಾಗದಿರಲಿ: ರಮಾನಾಥ ರೈ

 

ಮಂಗಳೂರು:  ನಂದಿಕೂರು 400 ಕೆ.ವಿ ವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಸಂಕಷ್ಟ ಉಂಟು ಮಾಡಿದ್ದು,  ಈ ಯೋಜನೆ ರೈತರಿಗೆ ಮಾರಕ ಆಗದ ರೀತಿಯಲ್ಲಿ ಕಾಮಗಾರಿಗೆ ಮುಂದಾಗಿರುವ ಕಂಪನಿ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಅವರು ಸರಕಾರ ಹಾಗೂ ಕಂಪನಿಯನ್ನು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

400 ಕೆವಿ ವಿದ್ಯುತ್ ಲೈನ್ ವಿರೋಧಿ ಹೋರಾಟ ಸಮಿತಿಯ ರೈತರ ಪರವಾಗಿ ನಿಲ್ಲುತ್ತೇನೆ.  ಈ ಯೋಜನೆ ಲೈನ್  ಹಾಯ್ದು ಹೋಗುವ ಮಂಗಳೂರು ಹಾಗೂ ಬಂಟ್ವಾಳ ತಾಲೂಕು ಸೇರಿದಂತೆ ಉಭಯ ಜಿಲ್ಲೆಗಳ ರೈತರನ್ನು ವಿಶ್ವಾಸಕ್ಕೆ ಪಡೆಯದೇ ಯೋಜನೆ ಅನುಷ್ಠಾನಕ್ಕೆ ಪ್ರಯತ್ನ ನಡೆಯುತ್ತಿದೆ. ಈ ಬಗ್ಗೆ ಹಲವು ಸಮಯದಿಂದ ರೈತರು ಪ್ರತಿಭಟನೆ ಮೂಲಕ ವಿರೋಧ ವ್ಯಕ್ತಪಡಿಸಿದ್ದಾರೆ. ರೈತರ ಹೋರಾಟಕ್ಕೆ ಸಂಪೂರ್ಣ ಬೆಂಬಲ ಘೋಷಣೆ ಮಾಡುತ್ತೇನೆ ಎಂದರು.

ಗುತ್ತಿಗೆ ವಹಿಸಿರುವ ಸ್ಟೆರಿಲೈಟ್ ಕಂಪನಿ ಹೈಟೆನ್ಶನ್ ಲೈನ್ ಅಳವಡಿಕೆಗೆ ಸಮೀಕ್ಷೆ ನಡೆಸುತ್ತಿದೆ. ಇದರಿಂದ ರೈತರಿಗೆ ತೊಂದರೆ ಮಾತ್ರವಲ್ಲದೆ, ಪರಿಸರ ಹಾಗೂ ವನ್ಯ ಜೀವಿಗಳಿಗೆ ಹಾನಿ ಉಂಟಾಗಲಿದೆ. ರಾಷ್ಟ್ರೀಯ ಹೆದ್ದಾರಿಯ ಎರಡು ಕಡೆಗಳಲ್ಲಿ ಅಥವಾ ಸಮುದ್ರದ ಮೂಲಕ ಪರ್ಯಾಯ ಕ್ರಮ ವಹಿಸಬೇಕು. ಈ ಹೈಟೆನ್ಶನ್ ಲೈನ್ ಹಾಯ್ದು ಹೋಗುವ ಭಾಗಗಳಲ್ಲಿ ಗರಿಷ್ಠ ಮೂರು ಎಕರೆಯೊಳಗಿನ ಭೂಮಿ ಹೊಂದಿರುವ ಸಣ್ಣ ರೈತರು, ಅಡಿಕೆ, ತೆಂಗು ಸೇರಿದಂತೆ ಮೊದಲಾದ ತೋಟಗಾರಿಕಾ ಬೆಳೆ ಅವಲಂಬಿಸಿದ್ದಾರೆ. ಗ್ರಾಮೀಣ ವಿದ್ಯುಚ್ಛಕ್ತಿ ನಿಗಮ (ಆರ್ಇಸಿ) ಈ ಬಗ್ಗೆ ಗಮನ ಹರಿಸಬೇಕು. ರೂಪಾಯಿ 900 ಕೋಟಿಯ ಯೋಜನೆ ಇದಾಗಿದೆ. ಇಷ್ಟು ದೊಡ್ಡ ಗುತ್ತಿಗೆ ವಹಿಸಿಕೊಂಡಿರುವ ಸಂಸ್ಥೆಗೆ ಪರ್ಯಾಯ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಕ್ರಮ ವಹಿಸುವುದು ದೊಡ್ಡ ವಿಷಯವೇನಲ್ಲ ಎಂದವರು ಹೇಳಿದರು.

  1.  

ಈ ಹೈಟೆನ್ಶನ್ ಲೈನ್ ನಮ್ಮ ಕೃಷಿ ಭೂಮಿಯಲ್ಲಿ ಹಾಯ್ದು ಹೋಗುವುದರಿಂದಾಗಿ ಮಳೆಗಾಲದಲ್ಲಿ ಇದರಿಂದಾಗಬಹುದಾದ ಅಪಾಯಗಳನ್ನು ಊಹಿಸಲು ಅಸಾಧ್ಯ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಸರಕಾರದ ಗಮನ ಸೆಳೆಯಲಾಗಿದೆ. ಜಿಲ್ಲಾಡಳಿತ ರೈತರ ಪರ ನಿಂತು ಕ್ರಮ ವಹಿಸಬೇಕು ಎಂದರು.

400 ಕೆ.ವಿ. ಹೈಟೆನ್ಶನ್ ಲೈನ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಲೋಹಿತಾಶ್ವ, ಬೇಬಿ ಕುಂದರ್, ಸುಧೀರ್ ಕುಮಾರ್, ಚಿತ್ತರಂಜನ್, ಅನ್ನು ಗೌಡ, ಸಂಜೀವ್ ಗೌಡ, ಪದ್ಮನಾಭ ಗೌಡ, ಆಲ್ವಿನ್, ಪಿಯುಸಿಲ್ ರೊಡ್ರಿಗಸ್ ಇದ್ದರು.

Former minister Ramanath Rai urged the government and the company in a press conference on Monday that the project to connect Nandikur 400 KV electricity has caused hardship to small and very small farmers, so that the project is not fatal to the farmers and the company that is working on it should make an alternative arrangement.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com