Breaking News

ಹಿರಿಯ ಪತ್ರಕರ್ತ ಪಿ. ಎಂ. ‌ಮಣ್ಣೂರ್ ನಿಧನ

 

ಕಲಬುರಗಿ:  ಹಿರಿಯ ಪತ್ರಕರ್ತ ಪಿ. ಎಂ. ‌ಮಣ್ಣೂರ್ ಅನ್ಯಾರೋಗ್ಯದಿಂದಾಗಿ ಶುಕ್ರವಾರ ಬೆಂಗಳೂರಿನ‌ ಖಾಸಗಿ ಆಸ್ಪತ್ರೆಯಲ್ಲಿ ನಿಧ‌ನರಾಗಿದ್ದಾರೆ.

ಅವರು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಅವರು ಬೆಂಗಳೂರಿನ‌ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಅವರು ನಿಧನರಾಗಿದ್ದಾರೆ.

ಸತ್ಯಕಾಮ ಕನ್ನಡ ದಿನ ಪತ್ರಿಕೆ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದರು.‌ ಜಿಲ್ಲೆಯ ಸಾಹಿತ್ಯ ರಂಗದಲ್ಲೂ ಪತ್ರಕರ್ತ ಪಿ. ಎಂ. ಮಣ್ಣೂರ್ ಛಾಪು ಮೂಡಿಸಿದ್ದರು. 371 (ಜೆ) ಹೋರಾಟದಲ್ಲಿ ಮಾಜಿ ಸಚಿವ ದಿವಂಗತ ವೈಜನಾಥ್ ಪಾಟೀಲ್ ನೇತೃತ್ವದ ಹೋರಾಟದಲ್ಲಿ ಸಕ್ರಿಯರಾಗಿ ಪಾಲ್ಗೊಂಡಿದ್ದರು.

ಕಲಬುರಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಅವರು ಕೆಲಸ ಮಾಡಿದ್ದರು. ಮೃತರ ಅಂತ್ಯಕ್ರಿಯೆ ಶನಿವಾರ ಕಲಬುರಗಿಯಲ್ಲಿ ನಡೆಯಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

  1.  

Senior Journalist P. M. Mannur died in a private hospital in Bangalore on Friday due to illness.

He was ill for a few days and was undergoing treatment at a private hospital in Bangalore. He died unresponsive to treatment.

Satyakama worked as the editor of a Kannada daily newspaper. Journalist P. M. Mannur had made an impression. He was an active participant in the 371 (J) struggle led by former minister late Vaijnath Patil.

He worked as the President of Kalaburagi District Working Journalists Association. His family sources said that the funeral of the deceased will be held in Kalaburagi on Saturday.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com