Breaking News

ವೈಭವದ 34 ನೇ ವರ್ಷದ ಮಂಗಳೂರು ದಸರಾಕ್ಕೆ ಸಿದ್ಧತೆ: ಇತಿಹಾಸ ಭಾವ ನೆನಪಿಸುವ ಸ್ತಬ್ಧಚಿತ್ರಗಳ ಮೆರುಗು

 

ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ 34 ನೇ ವರ್ಷದ ನವರಾತ್ರಿ ಮಹೋತ್ಸವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಈ ಬಾರಿ ಕೂಡ ಮಂಗಳೂರು ದಸರಾ ಶ್ರೀ ಕ್ಷೇತ್ರದ ನವೀಕರಣದ ರೂವಾರಿ ಬಿ. ಜನಾರ್ಧನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಇದೇ 15 ರಂದು ಗಣೇಶ, ನವದುರ್ಗೆ ಮತ್ತು ಶಾರದಾ ಮಾತೆಯ ಮೂರ್ತಿ ಪ್ರತಿಷ್ಠಾಪನೆಗೊಳಿಸಿ ಪ್ರಾರಂಭವಾಗಲಿದೆ ಎಂದು ದೇವಳದ ಅಧ್ಯಕ್ಷ ಎಚ್.ಎಸ್. ಸಾಯಿರಾಂ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಅವರು ಮಾತನಾಡಿ, ದಸರಾ ಮಹೋತ್ಸವವು ಅ.25 ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು, ಅ. 24 ರಂದು 4 ಗಂಟೆಗೆ ಮಂಗಳೂರು ದಸರಾ ಮೆರವಣಿಗೆ ಮಾಜಿ ಸಚಿವ ಬಿ. ಜನಾರ್ಧನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಮಂಗಳೂರು ನಗರದ ರಾಜ ರಸ್ತೆಯಲ್ಲಿ ಸಾಗಿ ಕ್ಷೇತ್ರದ ಪುಷ್ಕರಿಣಿಯಲ್ಲಿ ಮೂರ್ತಿ ವಿಸರ್ಜನೆ ನಡೆಯಲಿದೆ.  ಅ.15 ರಿಂದ ಅ. 23 ರವರಿಗೆ ಪ್ರತಿದಿನ ಸಂಜೆ 6 ರಿಂದ ರಾತ್ರಿ 9 ಗಂಟೆಯವರೆಗೆ ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು  ಕ್ಷೇತ್ರದಲ್ಲಿ ನಡೆಯಲಿದೆ ಎಂದರು.

ಮಂಗಳೂರು ದಸರಾ ಮೆರವಣಿಗೆಯಲ್ಲಿ ಜಿಲ್ಲೆ ಹಾಗೂ ರಾಜ್ಯದ ಹಲವು ಕಡೆಗಳಿಂದ ಬರುವ ಭಾರತೀಯ ಸನಾತನ ಧರ್ಮದ, ಇತಿಹಾಸ ಭಾವದ ನೆನಪುಗಳನ್ನು ಸ್ಮರಿಸುವ ವಿಶೇಷ ಸ್ತಬ್ದಚಿತ್ರಗಳು ಭಾಗವಹಿಸಲಿದ್ದು, ಈ ಸುಂದರ ಮೆರವಣಿಗೆ ವಿಶೇಷ ಮೆರುಗು ನೀಡಲಿದೆ. ಸಾಂಸ್ಕೃತಿಕ ಮೆರವಣಿಗೆ ಸಾಗುವ ರಸ್ತೆಯ ಎರಡೂ ಬದಿಗಳಲ್ಲಿರುವ ಎಲ್ಲಾ ಕಟ್ಟಡದ ಮಾಲೀಕರು ತಮ್ಮ ಕಟ್ಟಡಗಳನ್ನು ವಿದ್ದುದ್ದೀಪದಿಂದ ಅಲಂಕರಿಸಿ “ಮಂಗಳೂರು ದಸರಾ” ಹಬ್ಬದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

  1.  

ಉಪಾಧ್ಯಕ್ಷೆ ಉರ್ಮಿಳಾ ರಮೇಶ್, ಪ್ರಧಾನ ಕಾರ್ಯದರ್ಶಿ ಮಾಧವ ಸುವರ್ಣ, ಹರಿಕೃಷ್ಣ ಬಂಟ್ವಾಳ್, ಸಮಿತಿ ಸದಸ್ಯರಾದ ಕೆ. ಮಹೇಶ್ಚಂದ್ರ, ರವಿಶಂಕರ್ ಮಿಜಾರ್, ಎಂ. ಶೇಖರ್ ಪೂಜಾರಿ, ಸಂತೋಷ್ ಕುಮಾರ್, ಜಗದೀಪ್ ಡಿ. ಸುವರ್ಣ, ದೇವೇಂದ್ರ ಪೂಜಾರಿ, ಡಾ.ಅನುಸೂಯ ಬಿ.ಟಿ. ಸಾಲಿಯಾನ್, ಕಿಶೋರ್ ಯೆಯ್ಯಾಡಿ, ಚಂದನ್, ಡಾ. ಬಿ.ಜಿ. ಸುವರ್ಣ, ವಾಸುದೇವ ಕೋಟ್ಯಾನ್ ಇದ್ದರು.

Preparations are being made for the 34th annual Navratri festival in Kudroli Gokarnath Constituency, and this time too, Ruvari B. Under the guidance of Janardhana Pujari, the idols of Ganesha, Navdurga and Sarada Mata will be installed on the 15th, said the president of the temple H.S. Sairam told the press conference.

District Treasurer Padmaraj R. He said that the Dussehra festival will be held till 25th A.D. with various religious and cultural programs. Mangalore Dussehra procession at 4 o’clock on 24th former minister B. Under the guidance of Janardhan Pujari, the idol will be dissolved at Pushkarini in Sagi Kshetra on Raja Road in Mangalore city. A.15 to A. He said that on the 23rd, cultural programs by famous artists will be held in the field from 6 pm to 9 pm every day.

Special stills commemorating the memories of Indian Sanatan Dharma and historical spirit from many parts of the district and the state will participate in the Mangalore Dussehra procession, which will give a special glow to this beautiful procession. He appealed to all the building owners on both sides of the road where the cultural procession will take place to decorate their buildings with lights and participate in the “Mangalore Dussehra” festival.

Vice President Urmila Ramesh, General Secretary Madhava Suvarna, Harikrishna Bantwal, Committee Members K. Maheshchandra, Ravishankar Mizar, M. Shekhar Pujari, Santosh Kumar, Jagdeep D. Suvarna, Devendra Pujari, Dr. Anusuya BT. Salian, Kishore Yeyadi, Chandan, Dr. B.G. Suvarna, Vasudeva Kotyan were there.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com