Breaking News

ದೇಶದಲ್ಲಿ 6 ಸಾವಿರ ಸ್ಟಾರ್ಟ್‌ ಅಪ್‌, 9 ಲಕ್ಷ ಮಂದಿಗೆ ಉದ್ಯೋಗ: ಸಂಸದ ಕಟೀಲ್

 

ಮೂಡುಬಿದಿರೆ: ದೇಶದಲ್ಲಿ ನಿರುದ್ಯೋಗ ನಿರ್ಮೂಲನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ದೀನ್ ದಯಾಳ್ ಕೌಶಲ ಅಭಿವೃದ್ಧಿ ಮಂತ್ರಾಲಯ ಆರಂಭಿಸುವ ಮೂಲಕ ಉದ್ಯೋಗ ಸೃಷ್ಟಿಗೆ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ದೇಶದಲ್ಲಿ 6 ಸಾವಿರ ಸ್ಟಾರ್ಟ್‌ ಅಪ್ ಕಂಪನಿಗಳು ಆರಂಭಿಸಲಾಗಿದೆ. ದೇಶದಲ್ಲಿ 2014 ರಿಂದ 2023 ರವರಿಗೆ 9 ಲಕ್ಷ ಯುವಕರಿಗೆ ಉದ್ಯೋಗ ನೀಡಲಾಗಿದೆ ಎಂದು ಹೇಳಿದರು.

ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸಿರುವ 13 ನೇ ವರ್ಷದ ಆಳ್ವಾಸ್ ಪ್ರಗತಿ ಉದ್ಯೋಗ ಮೇಳಕ್ಕೆ ಅವರು ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

ಉದ್ಯೋಗ ಮೇಳ ನಡೆಸುವುದು ಮಹತ್ವದ ಹಾಗೂ ಕಠಿಣ ಸವಾಲಿನ ಕೆಲಸ ಎನ್ನುವುದು ನನಗೆ ಮನವರಿಕೆ ಆಗಿದೆ. 12 ವರ್ಷಗಳಿಂದ ಯುವಕರಿಗೆ ಉದ್ಯೋಗ ನೀಡುವ ಸವಾಲಿನ ಉದ್ಯೋಗ ಮೇಳ ನಡೆಸುತ್ತಿರುವ ಆಳ್ವಾಸ್ ಶಿಕ್ಷಣ ಸಂಸ್ಥೆಯ ಕೆಲಸ ಶ್ಲಾಘನೀಯ ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಅವರು ಮಾತನಾಡಿ, ಉದ್ಯೋಗ ಮೇಳಗಳನ್ನು ಪ್ರಾಮಾಣಿಕ ರೀತಿಯಲ್ಲಿ  ಆಯೋಜಿಸುತ್ತಾ ಬಂದಿದ್ದೇವೆ. 2,220 ಕಂಪನಿಗಳು ಭಾಗವಹಿಸಿ 65,661 ಯುವಜನರಿಗೆ ಉದ್ಯೋಗ ನೀಡಲು ಸಾಧ್ಯ ಅಗಿದೆ. ಈ ಬಾರಿ 13 ನೇ ವರ್ಷದ ಈ ಉದ್ಯೋಗ ಮೇಳದಲ್ಲಿ 206 ಕಂಪನಿಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆ. 17,750 ಮಂದಿಗೆ  ಉದ್ಯೋಗ ಸಿಗುವ ನಿರೀಕ್ಷೆ ಇದೆ ಎಂದರು.

ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿದರು.‌ ಶಾಸಕರಾದ ಹರೀಶ್ ಪೂಂಜಾ, ಬೋಜೇಗೌಡ, ಮಾಜಿ ಸಚಿವ, ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ, ಯುಎಇ ಬುರ್ಜಿಲ್ ಹೋಲ್ಡಿಂಗ್ಸ್ ನ ಮುಖ್ಯಸ್ಥ ಡಾ.ಸಂಜಯ ಕುಮಾರ್, ಅಲೆಂಬಿಕ್ ಫಾರ್ಮಾಸ್ಯೂಟಿಕಲ್ಸ್ ಮಾನವ ಸಂಪನ್ಮೂಲ ಸಹ ಉಪಾಧ್ಯಕ್ಷ ಅರವಿಂದ ತ್ರಿಪಾಠಿ, ಪ್ಯಾಕ್ಟ್ ಸೆಟ್ ಸಿಸ್ಟಂ ಇಂಡಿಯಾ ಪ್ರೈ ಲಿಮಿಟೆಡ್ ನ ಉಪಾಧ್ಯಕ್ಷೆ ಅನುಪಮ್ ರಂಜನ್, ಉದ್ಯೋಗ ಮೇಳದ ಸಂಯೋಜಕ ವಿವೇಕ್ ಆಳ್ವ ಇದ್ದರು.

  1.  

To eliminate unemployment in the country, Prime Minister Narendra Modi has taken a significant step towards job creation by starting the Deen Dayal Skill Development Ministry. 6 thousand start-up companies have been started in the country. He said that 9 lakh youths have been given employment in the country from 2014 to 2023.

He was speaking on Friday while inaugurating the 13th annual Alvas Pragati Udyog Mela organized by Moodbidire Alvas Education Foundation.

I am convinced that conducting a job fair is an important and challenging task. He said that the work of Alwas Education Institute, which has been conducting a challenging employment fair for the youth for 12 years, is commendable.

Dr. M. Mohan Alva, President of Alva’s Education Foundation, said that we have been organizing job fairs in an honest manner. 2,220 companies will participate and provide employment to 65,661 youth. This time in its 13th year, representatives of 206 companies participated in this job fair. He said that 17,750 people are expected to get employment.

MLA Umanatha Kotyan spoke. MLAs Harish Poonja, Boje Gowda, Former Minister, State Commissioner of Scouts and Guides PGR Scindia, Head of UAE Burjeel Holdings Dr. Sanjay Kumar, Alembic Pharmaceuticals HR Associate Vice President Arvind Tripathi, Pact Set System Anupam Ranjan, Vice President of India Private Limited, Vivek Alva, Coordinator of the Job Fair were present.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com