Breaking News

ಮಹಾತ್ಮ ಗಾಂಧೀಜಿ ಅಹಿಂಸಾ ವಾದ ವಿಶ್ವಕ್ಕೆ ಮಾದರಿ: ಹರೀಶ್‌ ಕುಮಾರ್‌

 

ಮಂಗಳೂರು: ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದ ಕಾರ್ಯಕ್ರಮ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ಸೋಮವಾರ ಮಲ್ಲಿಕಟ್ಟೆ ಕಾಂಗ್ರೆಸ್ ಭವನದಲ್ಲಿ ನಡೆಯಿತು.

ಮಹಾತ್ಮ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಬಳಿಕ ಮಾತನಾಡಿದ ಅವರು, ಮಹಾತ್ಮ ಗಾಂಧಿ ಅವರು ಬ್ರಿಟಿಷರ, ದಬ್ಬಾಳಿಕೆ, ದೌರ್ಜನ್ಯವನ್ನು ಮೆಟ್ಟುನಿಂತು ದೇಶದ ಜನತೆ ಪ್ರೀತಿ, ವಿಶ್ವಾಸಗಳಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ಅವರ ನಡೆ-ನುಡಿ, ತತ್ವಾದರ್ಶ, ಅಹಿಂಸಾ ವಾದ ಜಗತ್ತಿಗೆ ಮಾರ್ಗದರ್ಶಕ. ಅವರು ದೇಶಕ್ಕೆ ಹಾಕಿ ಕೊಟ್ಟ ಸೂತ್ರಗಳು ದೇಶ ಮರೆಯಲು ಸಾಧ್ಯವಿಲ್ಲ. ಗಾಂಧಿ ಹಂತಕ ಗೋಡ್ಸೆಯನ್ನು ಮೆರೆಸುವುದು ದೇಶದ ದುರಂತ. ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಶ್ರಮಿಸಿದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ವ್ಯಕ್ತಿತ್ವ, ಸರಳತೆ ಎಲ್ಲರಿಗೂ ಆದರ್ಶ ಎಂದರು.

ಮಾಜಿ ಸಚಿವ ಬಿ.ರಮಾನಾಥ ರೈ ಅವರು ಮಾತನಾಡಿ, ದೇಶದಲ್ಲಿ ಅನೇಕ ರೀತಿಯ ಚಳವಳಿ ನಡೆದರೂ ಅಂತಿಮವಾಗಿ ಅಹಿಂಸಾ ಮಾರ್ಗ ಯಶಸ್ವಿ ಕಂಡಿತು. ಇದಕ್ಕಾಗಿ ಗಾಂಧಿ ಅವರನ್ನು ಜಗತ್ತಿನ ಜನರು ಮೆಚ್ಚುತ್ತಾರೆ. ಗಾಂಧಿ ಅವರು ವಿದ್ಯಾರ್ಥಿ ದೆಸೆಯಲ್ಲಿ ಕಪ್ಪು-ಬಿಳಿ ತಾರತಮ್ಯದ ವಿರುದ್ಧ ಹೋರಾಡಿ ಬಳಿಕ ಭಾರತಕ್ಕೆ ಬಂದು ಪ್ರಬಲ ಚಳವಳಿಯಲ್ಲಿ ತೊಡಗಿಸಿಕೊಂಡರು. ಪ್ರಧಾನಿ ಮೋದಿ ವಿದೇಶದಲ್ಲಿ ಗಾಂಧಿ ಬಗ್ಗೆ ಹೊಗಳುತ್ತಾರೆ. ಆದರೆ, ಅವರ ಶಿಷ್ಯರು ಭಾರತದಲ್ಲಿ ಅವಮಾನಿಸುತ್ತಾರೆ ಎಂದು ಹೇಳಿದರು.

ಭಾರತ ರತ್ನ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪ್ರಾಮಾಣಿಕ ಜೀವನ, ಸ್ವಾತಂತ್ರ್ಯ ಹೋರಾಟ, ಭಾರತೀಯನಿಗೆ ಪ್ರೇರಣೆ. ಸೈನಿಕರು ಮತ್ತು ರೈತರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಲು ಶಾಸ್ತ್ರಿ ಅವರ ಜೈ ಜವಾನ್, ಜೈ ಕಿಸಾನ್ ಎಂಬ ಘೋಷಣೆ ನೀಡಿದರು ಎಂದರು.

  1.  

ಮಾಜಿ ರಾಜ್ಯ ಸಭಾ ಸದಸ್ಯ ಬಿ.ಇಬ್ರಾಹೀಂ, ಮಾಜಿ ಶಾಸಕ ಜೆ.ಆರ್.ಲೋಬೊ, ಸುರೇಶ್ ಬಳ್ಳಾಲ್, ಸದಾಶಿವ್ ಉಳ್ಳಾಲ್, ಲುಕ್ಮಾನ್ ಬಂಟ್ವಾಳ, ಶಾಹುಲ್ ಹಮೀದ್ ಕೆ.ಕೆ, ವಿಶ್ವಾಸ್ ಕುಮಾರ್ ದಾಸ್, ಪ್ರಕಾಶ್ ಸಾಲ್ಯಾನ್, ಜೆ.ಅಬ್ದುಲ್ ಸಲೀಂ, ಅಬ್ದುಲ್ ರವೂಫ್, ಮಾಜಿ ಮೇಯರ್ ಜೆಸಿಂತಾ ಆಲ್ಫ್ರೆಡ್, ತುಂಬೆ ಪ್ರಕಾಶ್ ಶೆಟ್ಟಿ, ನೀರಜ್ ಚಂದ್ರಪಾಲ್, ಮಾಜಿ ಮೇಯರ್ ಶಶಿಧರ್ ಹೆಗ್ಡೆ ಇದ್ದರು.

The birthday program of Mahatma Gandhi and Lal Bahadur Shastri was held at Mallikatte Congress Bhavan on Monday under the chairmanship of District Congress President K. Harish Kumar.

Speaking after laying flowers on the portrait of Mahatma Gandhi, Lal Bahadur Shastri, Mahatma Gandhi stood up to the British, oppression and tyranny and gained the love and trust of the people of the country and plunged into the freedom struggle. His words, actions, philosophy, non-violence are a guide to the world. The formulas he gave to the country cannot be forgotten. It is a country’s tragedy to glorify Gandhi’s assassin Godse. He said that the personality and simplicity of former Prime Minister Lal Bahadur Shastri, who worked hard for the economic and social development of the country, was an ideal for all.

Former Minister B. Ramanatha Rai said that although there were many types of movement in the country, finally the path of non-violence was successful. For this Gandhi is admired by the people of the world. Gandhi fought against black-white discrimination in his student country and then came to India and became involved in a powerful movement. PM Modi praises Gandhi abroad. However, he said that his disciples would insult him in India.

Bharat Ratna Lal Bahadur Shastri’s Honest Life, Freedom Struggle, Inspiration for Indian. He said that Shastri’s slogan Jai Jawan, Jai Kisan was given to boost the morale of soldiers and farmers.

Former Rajya Sabha Member B. Ibrahim, Former MLA J.R. Lobo, Suresh Ballal, Sadashiv Ullal, Lukman Bantwala, Shahul Hameed KK, Vishwas Kumar Das, Prakash Salyan, J. Abdul Salim, Abdul Raoof, Former Mayor Jacinta Alfred , Tumbe Prakash Shetty, Neeraj Chandrapal, former mayor Shashidhar Hegde were there.

  1.  

Leave a Reply

Your email address will not be published. Required fields are marked *