Breaking News

ಕ್ಷೇತ್ರ ಬಂಗಾರಮಕ್ಕಿ ಮಾರುತಿ ಸ್ವಾಮೀಜಿ ಚಾತುರ್ಮಾಸ್ಯ ಸಂಪನ್ನ

 

ಹೊನ್ನಾವರ: ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಮಾರುತಿ ಗುರೂಜಿ ಅವರ ಚಾತುರ್ಮಾಸ್ಯ ವ್ರತದ ಸೀಮೋಲ್ಲಂಘನ ಕಾರ್ಯಕ್ರಮ ಭಾದ್ರಪದ ಶುಕ್ಲ ಹುಣ್ಣಿಮೆಯಂದು ಧಾರ್ಮಿಕ ವಿಧಿಗಳಾದ ಹೋಮ, ಹವನ ನೆರವೇರಿಸಿ, ಶರಾವತಿಗೆ ಪೂಜೆ ಸಲ್ಲಿಸುವುದರ ಜತೆಗೆ ಸಂಪನ್ನವಾಯಿತು.

ಗುರುವಂದನಾ ಕಾರ್ಯಕ್ರಮದಲ್ಲಿ ಯಾದವಗಿರಿ ಶಂಕರ ಸಂಸ್ಥಾನಮ್ ಪೀಠದ ವಿದ್ಯಾಭಿನವ ಸುಬ್ರಹ್ಮಣ್ಯ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ವಿಧಾನ ಪರಿಷತ್ ಸದಸ್ಯ ಟಿ. ಎ. ಶರವಣ  ಮಾತನಾಡಿ, ಕ್ಷೇತ್ರದ ಜತೆಗಿನ ಬಹುಕಾಲದ ಸಂಬಂಧವನ್ನು ಸ್ಮರಿಸಿ, ಗುರೂಜಿ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ, ಸಾಮಾಜಿಕ ಕಳಕಳಿಯ ಯೋಜನೆಗಳನ್ನು ಮೆಚ್ಚಿ ಸರ್ಕಾರವು ಮಾಡಬೇಕಾದ ಹಲವು ಕಾರ್ಯವನ್ನು ಪೀಠಾಧಿಪತಿಗಳಾಗಿ ತಾವು ಮಾಡುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ ಎಂದರು.

ಕಾರ್ಯಕ್ರಮಕ್ಕೆ ಬಂದಿದ್ದ ಶಿಷ್ಯ, ಭಕ್ತ ವೃಂದ, ಶ್ರೀ ಕ್ಷೇತ್ರದ ಸಿಬ್ಬಂದಿ, ವಿದ್ಯಾರ್ಥಿಗಳು, ಸ್ಥಳೀಯರು, ಗುರುವಂದನೆ ಸಲ್ಲಿಸಿ, ಮಾರುತಿ ಗುರೂಜಿ ಅವರ ಆಶೀರ್ವಚನವನ್ನು ಆಲಿಸಿ, ಮಂತ್ರಾಕ್ಷತೆಯನ್ನು ಸ್ವೀಕರಿಸಿದರು.

ನಂತರ ವೇದಿಕೆಯಲ್ಲಿ ಮಂಗಳೂರಿನ ಹೆಜ್ಜೆನಾದ ತಂಡದವರಿಂದ ಸಂಗೀತ ಮತ್ತು ನೃತ್ಯ ಕಾರ್ಯಕ್ರಮ ಹಾಗೂ ಖ್ಯಾತ ಯಕ್ಷಗಾನ ಕಲಾವಿದರಿಂದ ಲವ-ಕುಶ ಕಾಳಗ ಯಕ್ಷಗಾನ ನಡೆಯಿತು.

  1.  

Sri Kshetra Bangaramakki Maruti Guruji’s Chaturmasya Vrat Seemollanghana program was completed on the full moon of Bhadrapada with the performance of religious rites such as Homa, Havan and worship to Sharavati.

Vidyabhinava Subrahmanya Bharathi Swamiji of Yadavagiri Shankara Sansthanam Peeth gave blessings in the Guruvandana program.

Vidhan Parishad member T. who arrived at the program. A. Saravan said, recalling the long-term relationship with the constituency, he said that it is indeed a matter of pride that Guruji’s contribution to the education sector and the projects of social concern are being done by the government as the presiding officer.

The disciples, devotees, Sri Kshetra staff, students, local people who came to the program paid their obeisances, listened to Maruti Guruji’s blessings and received mantrakshat.

Later, a music and dance program was performed by the troupe of Mangaluru and Lava-Kusa Kalaga Yakshagana was performed by famous Yakshagana artists.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com