Breaking News

ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಕೊಡುಗೆ ಅಪಾರ: ಸ್ಪೀಕರ್‌ ಖಾದರ್‌

 

ಉಳ್ಳಾಲ: ವೀರರಾಣಿ ಅಬ್ಬಕ್ಕ ಚರಿತ್ರೆ ಎಲ್ಲ ಕಡೆಗೆ ಪ್ರಸರಿಸಲು ಅಬ್ಬಕ್ಕ ಉತ್ಸವ ಸಮಿತಿ ಕೊಡುಗೆ ಅಪಾರ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು.

ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಹಾಗೂ ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ಕುತ್ತಾರ್ ವೆಜಿನೇಷನ್ ನಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ನರಿಂಗಾನ ಗ್ರಾಮದಲ್ಲಿ ಐದು ಎಕರೆ ಜಾಗದಲ್ಲಿ ತುಳು ಗ್ರಾಮ ಮಾಡಿ ಪ್ರವಾಸಿ ಕೇಂದ್ರ ಮಾಡಲು ಯೋಜನೆ ರೂಪಿಸಲಾಗಿದೆ ಎಂದರು ಹೇಳಿದರು.

ಮಾಜಿ ಶಾಸಕ ಜಯರಾಮ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ವೀರರಾಣಿ ಅಬ್ಬಕ್ಕ ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಬೇಕು, ಮಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಬ್ಬಕ್ಕ ಹೆಸರು ಇಡಬೇಕು ಎಂದು ಒತ್ತಾಯಿಸಿ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ಸ್ಥಳೀಯ ಶಾಸಕರು ಆಗಿರುವ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಮನವಿ ಸಲ್ಲಿಸಿದರು.

ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಅಧ್ಯಕ್ಷ ಪ್ರವೀಣ್, ನಗರಸಭೆ ಪೌರಾಯುಕ್ತ ವಾಣಿ ಆಳ್ವ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್, ಅಬ್ಬಕ್ಕ ಉತ್ಸವ ಸಮಿತಿ ಗೌರವಾಧ್ಯಕ್ಷ ಸದಾನಂದ ಬಂಗೇರ, ಅಧ್ಯಕ್ಷ ದಿನಕರ್ ಉಳ್ಳಾಲ, ಕೋಶಾಧಿಕಾರಿ ಆನಂದ ಅಸೈಗೋಳಿ, ಸದಸ್ಯರಾದ ಧನಲಕ್ಷ್ಮಿ ಗಟ್ಟಿ, ದೇವಕಿ, ಉಳ್ಳಾಲ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಸಂತ್ ಕೊಣಾಜೆ ಇದ್ದರು.

  1.  

Speaker U.T. Khader said that Abbakka Utsav Samiti contributed a lot to spread the history of Veerarani Abbakka all over the world.

He spoke after receiving the award at the award ceremony held at Kuttar Vegetation in association with Ullala Veerarani Abbakka Utsav Samiti and South Canara Photographers Association.

He said that a plan has been made to make Tulu village a tourist center on a five acre land in Naringana village.

Former MLA Jayaram Shetty gave introductory speech. On behalf of the Veerarani Abbakka Utsav Samiti, a petition was submitted to Speaker U. T. Khader, who is a local MLA, demanding that funds be released for the construction of Veerarani Abbakka Bhavan and that Mangalore International Airport should be named Abbakka.

South Canara Photographer Association President Praveen, City Council Municipal Commissioner Vani Alva, Block Congress President Sadashiva Ullal, Abbakka Utsav Samiti Honorary President Sadananda Bangera, President Dinkar Ullal, Treasurer Anand Asaigoli, Members Dhanalakshmi Gatti, Devaki, Ullal Taluk Journalist Association President Vasant Konaje were present.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com