Breaking News

ಕಬ್ಬು ಬೆಳೆಗಾರರ ಸಮಸ್ಯೆಗೆ ಜಿಲ್ಲಾಡಳಿತದ ಸ್ಪಂದನೆ: ಡಿಸಿ ಗಂಗೂಬಾಯಿ ಮಾನಕರ

 

ಕಾರವಾರ: ಕಬ್ಬು ಅರೆಯುವ ಹಂಗಾಮು ನ. 1 ರಿಂದ 15 ರವರಿಗೆ ಆರಂಭ ಆಗಲಿದ್ದು, ಸಕ್ಕರೆ ಕಾರ್ಖಾನೆಯಿಂದ ಜಿಲ್ಲೆಯ ಕಬ್ಬು ಬೆಳೆಗಾರರರಿಗೆ ಯಾವುದೇ ಸಮಸ್ಯೆಗಳು ಆಗದಂತೆ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳು ಮತ್ತು ಜಿಲ್ಲೆಯ ಕಬ್ಬು ಬೆಳಗಾರರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಬ್ಬು ಬೆಳೆಗೆ ಹಳಿಯಾಳ ತಾಲೂಕಿನ ಇ.ಐ.ಡಿ.ಪ್ಯಾರಿ (ಇಂಡಿಯಾ) ಲಿ. ಅವರು ಪ್ರತಿ ಟನ್ ಗೆ 3,678 ರೂಪಾಯಿ ಲಾಭದಾಯಕ ಬೆಲೆ ನಿಗದಿ ಪಡಿಸಿದ್ದು, ಜಿಲ್ಲೆಯ ಕಬ್ಬು ಬೆಳೆಗಾರರಿಂದ ಕಬ್ಬು ಖರೀದಿಸುವ ಸಂದರ್ಭದಲ್ಲಿ ಬೆಳಗಾರರಿಗೆ ಯಾವುದೇ ರೀತಿ ಸಮಸ್ಯೆ ಉಂಟಾಗದಂತೆ ಸಮನ್ವಯದಿಂದ ಕಬ್ಬು ಖರೀದಿ ಎಲ್ಲಾ ಪ್ರಕ್ರಿಯೆ ನಡೆಸುವಂತೆ ನಿರ್ದೇಶನ ನೀಡಿದರು.

ಜಿಲ್ಲೆಯ ರೈತರು ಕಾರ್ಖಾನೆಗೆ ತರುವ ಕಬ್ಬನ್ನು ತೂಕ ಮಾಡುವಾಗ ಬೆಳಗಾರರು ಮತ್ತು ಕಾರ್ಖಾನೆ ನಡುವೆ ಯಾವುದೇ ಗೊಂದಲಗಳು ಉಂಟಾಗದಂತೆ ಪಾರದರ್ಶಕವಾಗಿ ತೂಕ ಮಾಡುವಂತೆ ಮತ್ತು ತೂಕದ ಪ್ರಮಾಣವನ್ನು ಬೆಳಗಾರರು ನೋಡಲು ಅನುಕೂಲವಾಗುವಂತೆ ಎಲ್ಲಾ ಅಗತ್ಯ ವ್ಯವಸ್ಥೆ ಮಾಡುವಂತೆ ಹಾಗೂ ಮುಂದಿನ ಅವಧಿ ವೇಳೆಗೆ ಕಾರ್ಖಾನೆ ಪ್ರವೇಶ ದ್ವಾರದಲ್ಲಿಯೇ ತೂಕ ಪರೀಕ್ಷಿಸಲು ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.

ಕಬ್ಬು ಕಟಾವು ಮತ್ತು ಸಾಗಣೆ ವೆಚ್ಚದಲ್ಲಿ ಹೆಚ್ಚಿನ ದರ ಪಡೆಯುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ರೈತ ಮುಖಂಡರು ಇತರೆ ಜಿಲ್ಲೆಯಲ್ಲಿ ಪ್ರತಿ ಟನ್ ಗೆ 772 ದರ ಇದ್ದು, ಜಿಲ್ಲೆಯಲ್ಲಿ 893 ದರ ಇದೆ ಎಂದು ಅಸಮಾದಾನ ವ್ಯಕ್ತಪಡಿಸಿದರು. ಹಿಂದಿನ ಆದೇಶದ ಪ್ರಕಾರವೇ ದರ ಪಡೆಯುವಂತೆ ತಿಳಿಸಿದರು, ಈ ಕುರಿತು ಕಾರ್ಖಾನೆಯ ಅಧಿಕಾರಿಗಳು ಪರಿಶೀಲಿಸಿ ದರ ಕಡಿಮೆಗೊಳಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

  1.  

ಕಾರ್ಖಾನೆಗೆ ತೆಗೆದುಕೊಂಡು ಬಂದ ಕಬ್ಬನ್ನು ಕೂಡಲೇ ತೂಕ ಮಾಡದೇ 2-3 ದಿನ ತಡವಾಗಿ ತೂಕ ಮಾಡುವುದುರಿಂದ ಕಬ್ಬು ಒಣಗಿ ತೂಕ ಕಡಿಮೆ ಆಗುತ್ತಿದೆ.  ಅಲ್ಲದೇ ಪ್ಲಾಂಟೇಷನ್ ಸ್ಲಿಪ್ ಮತ್ತು ಆದ್ಯತಾ ಪಟ್ಟಿ ನೀಡಬೇಕು, ಪ್ರತಿ ದಿನ ರಿಕವರಿಯನ್ನು ಪಾರದರ್ಶಕವಾಗಿ ತೋರಿಸುವಂತೆ ರೈತರು ಆಗ್ರಹಿಸಿದರು.

ಜಿಲ್ಲೆಯ ಕಬ್ಬು ಬೆಳಗಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಯಾವುದೇ ಗೊಂದಲ ಮತ್ತು ಸಮಸ್ಯೆಗಳಿಗೆ ಆಸ್ಪದ ನೀಡದಂತೆ ಸಕ್ಕರೆ ಕಾರ್ಖಾನೆ ಕಾರ್ಯನಿರ್ವಹಿಸಬೇಕು. ದಾಖಲೆಗಳನ್ನು ಪರಿಶೀಲಿಸಿ 2016-17 ರಲ್ಲಿನ ಎಫ್.ಆರ್.ಪಿ ಮೇಲಿನ ಹೆಚ್ಚುವರಿ ಬಾಕಿ ಮೊತ್ತ ರೂ.305 ನ್ನು ಬೆಳಗಾರರಿಗೆ ಪಾವತಿಸಬೇಕು. ಈ ಹಿಂದೆ ರೈತರ ಮೇಲೆ ಕಾರ್ಖಾನೆ ದಾಖಲಿಸಿರುವ ಪ್ರಕರಣಗಳ ವಿವರ ಪಡೆದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜತೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ಕಾರವಾರ ಉಪ ವಿಭಾಗಾಧಿಕಾರಿ ಜಯಲಕ್ಷ್ಮೀ ರಾಯಕೋಡ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ್, ಆಹಾರ ಇಲಾಖೆ ಉಪ ನಿರ್ದೇಶಕ ಮಂಜುನಾಥ ರೇವಣಕರ, ಇ.ಐ.ಡಿ.ಪ್ಯಾರಿ (ಇಂಡಿಯಾ) ಪ್ರೈ.ಲಿ ವ್ಯವಸ್ಥಾಪಕ ವೆಂಕಟರಾವ್, ಕಬ್ಬು ಬೆಳಗಾರರ ಮುಖಂಡರು ಮತ್ತು ರೈತ ಮುಖಂಡರು ಇದ್ದರು.

Sugarcane harvesting season. District Collector Gangubai Manaka instructed that it will start from 1st to 15th and the sugar factory should work without causing any problems to the sugarcane growers of the district.

He spoke while presiding over a meeting of sugar factory representatives and sugarcane farmers of the district held on Friday at the Collectorate Hall.

EID Parry (India) Ltd. of Haliya Taluk for sugarcane crop. He fixed a remunerative price of Rs 3,678 per tonne and directed that the entire process of sugarcane purchase should be coordinated so that Belgar does not face any problem while buying sugarcane from the sugarcane growers of the district.

The farmers of the district were instructed to weigh the sugarcane brought to the factory in a transparent manner so that there is no confusion between the growers and the factory and to make all necessary arrangements so that the growers can see the amount of weight and to carry out all the necessary arrangements to check the weight at the entrance of the factory by the next period.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com