Breaking News

ಶ್ರೀ ರಾಮ ಕ್ರೆಡಿಟ್ ಸೊಸೈಟಿಯ ಸದಸ್ಯರಿಗೆ ಶೇ 17 ಲಾಭಾಂಶ ವಿತರಣೆ: ನಾಗರಾಜ್ ಕಾಮಧೇನು

 

ಕುಂದಾಪುರ: ಶ್ರೀ ರಾಮ ಕ್ರೆಡಿಟ್ ಸೊಸೈಟಿಯು ಈ ವರ್ಷದಲ್ಲಿ 219 ಕೋಟಿ ರೂಪಾಯಿಗೂ ಹೆಚ್ಚು ವ್ಯವಹಾರವನ್ನು ನಡೆಸಿದ್ದು,  167.96 ಲಕ್ಷ ರೂಪಾಯಿ ನಿವ್ಹಳ ಲಾಭ ಗಳಿಸಿದೆ. ಈ ಬಾರಿ ಸೊಸೈಟಿ ಸದಸ್ಯರಿಗೆ ಶೇ 17 ಲಾಭಾಂಶ ನೀಡಲು ನಿರ್ಧರಿಸಲಾಗಿದೆ ಎಂದು ಸೊಸೈಟಿ ಅಧ್ಯಕ್ಷ ನಾಗರಾಜ್ ಕಾಮಧೇನು ಹೇಳಿದರು.

ನಗರದಲ್ಲಿ ನಡೆದ ಸಂಸ್ಥೆಯ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

6308.38 ಲಕ್ಷ ರೂಪಾಯಿ ಠೇವಣಿ ಹೊಂದಿದ್ದು, 4833.99 ಲಕ್ಷ ರೂಪಾಯಿ ಸದಸ್ಯರಿಗೆ ಸಾಲ ಸೌಲಭ್ಯ ನೀಡಲಾಗಿದೆ. 985.55 ಲಕ್ಷ ರೂಪಾಯಿಗಳನ್ನು ವಿವಿಧ ನಿಧಿಗಳಲ್ಲಿ ಇಡಲಾಗಿದೆ. ಬ್ಯಾಂಕ್‌ ಗ್ರಾಹಕರ ಅನುಕೂಲಕ್ಕಾಗಿ ಹಲವು ಯೋಜನೆಗಳನ್ನು ಅನುಷ್ಠಾನಗೊಳಿದೆ. ತ್ವರಿತ ಸ್ಪಂದನೆ, ಪಾರದರ್ಶಕ ಆಡಳಿತ ವ್ಯವಸ್ಥೆ, ತಂತ್ರಜ್ಞಾನ ಬಳಕೆ, ತಜ್ಞರ ಸಲಹೆಗಳೊಂದಿಗೆ ಸೊಸೈಟಿ ಗ್ರಾಹಕ ಸ್ನೇಹಿ ಸಂಸ್ಥೆಯನ್ನಾಗಿಸಲು ಆಡಳಿತ ಮಂಡಳಿ ಬದ್ಧತೆ ಹೊಂದಿದೆ ಎಂದರು.

ವಿಶ್ವ ರಾಮಕ್ಷತ್ರೀಯ ಸಮಾಜ ಸೇವಾ ಸಂಘದ ಅಧ್ಯಕ್ಷ ಶಶಿಧರ ನಾಯಕ್ ಅವರು ಮಾತನಾಡಿ, 28 ವರ್ಷಗಳ ಹಿಂದೆ ಸಮಾಜದ ಭವಿಷ್ಯದ ಅವಶ್ಯಕತೆ ಹಾಗೂ ಬೆಳವಣಿಗೆಯ ಕಾರಣದಿಂದ ರಾಮಕ್ಷತ್ರೀಯ ಸಮಾಜದ ಹಿರಿಯರು ಸ್ಥಾಪಿಸಿರುವ ಈ ಸಂಸ್ಥೆ  ಅಭಿವೃದ್ಧಿ ಪಥದಲ್ಲಿ ಮುನ್ನೆಡೆಯುತ್ತಿರುವುದು ಸಾರ್ಥಕತೆಯನ್ನು ತೋರುತ್ತಿದೆ ಎಂದರು.

ರಾಮಕ್ಷತ್ರೀಯ ಸಮಾಜದ ಪ್ರತಿಭಾನ್ವಿತ 17 ಮಂದಿ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಸೊಸೈಟಿ ಸದಸ್ಯರಾಗಿರುವ ತಲ್ಲೂರು ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷ ಗಿರೀಶ್ ಎಸ್.ನಾಯಕ್, ಉಪ್ಪೂರು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆ ಗಾಯತ್ರಿ ಉಪ್ಪೂರು, ಹಂಗಳೂರು ಗ್ರಾಮ ಪಂಚಾಯಿತಿ ನೂತನ ಉಪಾಧ್ಯಕ್ಷ ಸತೀಶ್ ನೇರಂಬಳ್ಳಿ, ಕೋಟೇಶ್ವರ ಗ್ರಾಮ ಪಂಚಾಯಿತಿ ನೂತನ ಉಪಾಧ್ಯಕ್ಷೆ ಆಶಾ ರಾಮಚಂದ್ರ, 5 ನೇ ಬಾರಿ ಸಾಸ್ತಾನ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌  ನಿರ್ದೇಶಕರಾಗಿ ಆಯ್ಕೆಯಾದ ಶ್ರೀಧರ ಪಿ.ಎಸ್ ಹಾಗೂ ಕುಂದಾಪುರ ರಾಮಕ್ಷತ್ರೀಯ ಸಮಾಜದ ನೂತನ ಅಧ್ಯಕ್ಷ ಡಿ.ಕೆ.ಪ್ರಭಾಕರ ಅವರನ್ನು ಗೌರವಿಸಲಾಯಿತು.

  1.  

ಉಪಾಧ್ಯಕ್ಷ ರಾಧಾಕೃಷ್ಣ ಬಿ ನಾಯಕ್, ನಿರ್ದೇಶಕ ಅಶೋಕ್ ಬೆಟ್ಟಿನ್, ಶ್ರೀಧರ ಪಿ.ಎಸ್, ದೇವಕಿ ಪಿ ಸಣ್ಣಯ್ಯ, ಎಂ.ಜಿ.ರಾಜೇಶ್, ಜಿ.ಆರ್.ಪ್ರಕಾಶ್, ಕೆ.ರಾಮನಾಥ ನಾಯಕ್, ಎನ್.ವಿ.ದಿನೇಶ್,  ಗೋಪಾಲಕೃಷ್ಣ, ಲಕ್ಷ್ಮೀ ಡಿ.ಕೆ.ಪ್ರಭಾಕರ, ಮಂಜುನಾಥ್ ಮದ್ದೋಡಿ, ರವೀಂದ್ರ ಕಾವೇರಿ, ಅಜೇಯ್ ಹವಾಲ್ದಾರ್, ಡಿ.ಸದಾಶಿವ, ಕರುಣಾಕರ ರಾವ್ ಇದ್ದರು.

ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ರಾಘವೇಂದ್ರ ನಿರೂಪಿಸಿದರು, ನಾಗರಾಜ್ ಕಾಮಧೇನು ಸ್ವಾಗತಿಸಿದರು, ಆಶೋಕ್ ಬೆಟ್ಟಿನ್ ವಂದಿಸಿದರು.

Shree Rama Credit Society transacted a business of over Rs 219 crore during the year and earned a net profit of Rs 167.96 lakh. Society President Nagaraj Kamadhenu said that this time it has been decided to give 17% dividend to the members of the society.

He spoke while presiding over the annual general meeting of the organization held in the city.

6308.38 lakh rupees are deposited and 4833.99 lakh rupees have been loaned to the members. 985.55 lakh rupees are kept in various funds. Bank has implemented many schemes for the convenience of customers. He said that the management board is committed to make the society a customer-friendly organization with quick response, transparent management system, use of technology and expert advice.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com