Breaking News

5.25 ಕೋಟಿ ವೆಚ್ಚದಲ್ಲಿ ಬಿಲ್ಲವ ಹಾಸ್ಟೆಲ್ ನಿರ್ಮಾಣ: ನವೀನ್ ಚಂದ್ರ ಡಿ. ಸುವರ್ಣ

 

ಮಂಗಳೂರು: ಕುಂಜತ್ತಬೈಲ್‌ನಲ್ಲಿ 1 ಎಕರೆ ಜಾಗದಲ್ಲಿ 5.25 ಕೋಟಿ ವೆಚ್ಚದಲ್ಲಿ ಬಿಲ್ಲವ ಹಾಗೂ ಹಿಂದುಳಿದ ಸಮುದಾಯದಲ್ಲಿನ ಉನ್ನತ ವೃತ್ತಿ ಶಿಕ್ಷಣ ಬಯಸುವ ವಿದ್ಯಾರ್ಥಿಗಳ ಅನುಕೂಲತೆಗಾಗಿ ದಿ.ದಾಮೋದರ ಆರ್. ಸುವರ್ಣ ಸ್ಮಾರಕ ‘ಬಿಲ್ಲವ ಹಾಸ್ಟೆಲ್ ನಿರ್ಮಿಸಲಾಗಿದ್ದು ನಿರ್ಮಿಸಲಾಗಿದೆ. ಇದೇ 24 ರಂದು ಲೋಕಾರ್ಪಣೆ ಆಗಲಿದೆ ಎಂದು ಅಖಿಲ ಭಾರತ ಬಿಲ್ಲವರ ಯುನಿಯನ್ ಅಧ್ಯಕ್ಷ ನವೀನ್ ಚಂದ್ರ ಡಿ. ಸುವರ್ಣ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬ್ರಹ್ಮಶ್ರೀ ನಾರಾಯಣ ಗುರುಗಳ ವಿದ್ಯೆಯಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಬಲಯುತರಾಗಿರಿ ಎಂಬ ಧ್ಯೇಯದೊಂದಿಗೆ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅಖಿಲ ಭಾರತ ಬಿಲ್ಲವರ ಯೂನಿಯನ್‌ ನಿಂದ ಬಿಲ್ಲವ ಹಾಸ್ಟೆಲ್ ನಿರ್ಮಿಸಲಾಗಿದೆ. ನಗರದ ಪುರಭವನದಲ್ಲಿ ಲೋಕಾರ್ಪಣಾ ಸಮಾರಂಭ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟನೆ ಮಾಡಲಿದ್ದಾರೆ. ದೀಪ ಪ್ರಜ್ವಲನೆಯನ್ನು ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಅವರು ನಡೆಸಲಿದ್ದಾರೆ. ಅಧ್ಯಕ್ಷತೆಯನ್ನು ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್‌ಚಂದ್ರ  ಸುವರ್ಣ ವಹಿಸಲಿದ್ದಾರೆ. ಸ್ಮರಣ ಸಂಚಿಕೆಯನ್ನು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್‌ ಬಿಡುಗಡೆಗೊಳಿಸಲಿದ್ದಾರೆ ಎಂದು ತಿಳಿಸಿದರು.

ಮಂಗಳೂರಿನಿಂದ 6 ಕಿಲೋ ಮೀಟರ್‌ ದೂರದ ಪ್ರಶಾಂತ ವಾತಾವರಣದಲ್ಲಿ ಹಾಸ್ಟೆಲ್ ನಿರ್ಮಿಸಲಾಗಿದೆ. ಬಿಲ್ಲವ ಹಾಗೂ ಹಿಂದುಳಿದ ಸಮುದಾಯದಲ್ಲಿ ಉನ್ನತ ವೃತ್ತಿ ಶಿಕ್ಷಣ ಬಯಸುವ ವಿದ್ಯಾರ್ಥಿಗಳ ಅನುಕೂಲಕ್ಕೆ ಇದು ಸಹಕಾರಿ ಆಗಲಿದೆ. 5 ಮಹಡಿ ಕಟ್ಟಡ ಇದಾಗಿದ್ದು ಒಟ್ಟು 19,500 ಚದರ ಅಡಿ ವಿಸ್ತೀರ್ಣ ಹೊಂದಿದೆ. ನೆಲ ಅಂತಸ್ತಿನಲ್ಲಿ ಆಡಳಿತ ಕಚೇರಿ, ಗ್ರಂಥಾಲಯ ಹಾಗೂ ವಸತಿ ಕೊಠಡಿಗಳು, 1 ನೇ ಹಾಗೂ 3 ನೇ ಮಹಡಿಯಲ್ಲಿ ವಸತಿ ಕೊಠಡಿ ಮತ್ತು 2 ನೇ ಮಹಡಿಯಲ್ಲಿ ಸಭಾಂಗಣ ಒಳಗೊಂಡಿದೆ. ತಳಮಹಡಿಯಲ್ಲಿ ಅಡುಗೆ ಕೋಣೆ, ಉಗ್ರಾಣ ಕೋಣೆಗಳಿವೆ. 100 ಮಂದಿ ವಿದ್ಯಾರ್ಥಿಗಳಿಗೆ ವ್ಯವಸ್ಥಿತ ವಸತಿ ಸೌಲಭ್ಯವಿದ್ದು ವೃತ್ತಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದರು.

ಮಾಜಿ ಸಂಸದ ಡಿ.ವಿ. ಸದಾನಂದ ಗೌಡ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಸಚಿವರಾದ ದಿನೇಶ್ ಗುಂಡೂರಾವ್, ಮಧು ಬಂಗಾರಪ್ಪ, ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ವಿ. ಸುನೀಲ್ ಕುಮಾರ್, ಉಮಾನಾಥ್ ಕೋಟ್ಯಾನ್, ವೇದವ್ಯಾಸ್‌ ಕಾಮತ್‌, ಡಾ.ವೈ. ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಮೇಯರ್ ಜಯಾನಂದ ಅಂಚನ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಮುಖ್ಯ ಸಚೇತಕ ಕೆ. ವಸಂತ ಬಂಗೇರ, ಮಾಜಿ ಶಾಸಕ ಗೋಪಾಲ ಪೂಜಾರಿ ಪಾಲ್ಗೊಳ್ಳಲಿದ್ದಾರೆ ಎಂದರು.

  1.  

ಉದ್ಯಮಿ ಜಯರಾಮ ಬನಾನ್, ಸಣ್ಣ ಕೈಗಾರಿಕಾ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಉದಯಚಂದ್ರ ಡಿ. ಸುವರ್ಣ, ಆರ್ಯ ಈಡಿಗ ಸಂಘದ ಅಧ್ಯಕ್ಷ ತಿಮ್ಮೇಗೌಡ ,ಉದ್ಯಮಿ ಜೆ.ಪಿ. ಸುಧಾಕರ್‌, ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎನ್.ಟಿ. ಪೂಜಾರಿ, ಮುಂಬೈ  ಬಿಲ್ಲವ ಅಸೋಸಿಯೇಶನ್ ಅಧ್ಯಕ್ಷ ಹರೀಶ್ ಜೆ. ಅಮೀನ್, ಬೆಂಗಳೂರು ಬಿಲ್ಲವ ಅಸೋಸಿಯೇಶನ್ ಅಧ್ಯಕ್ಷ ವೇದಕುಮಾರ್, ಅಖಿಲ ಭಾರತ ಬಿಲ್ಲವರ ಮಹಿಳಾ ಸಂಘದ ಅಧ್ಯಕ್ಷೆ ಸುಮಲತಾ ಎನ್. ಸುವರ್ಣ, ದುಬಾಯಿ ಬಿಲ್ಲವ ಬಳಗ-ಮಹಿಳಾ ವಿಭಾಗದ ಅಧ್ಯಕ್ಷೆ ಗೀತಾ ಸುವರ್ಣ, ಕಾರ್ಪೊರೇಟರ್ ಶರತ್ ಕುಮಾರ್ ಉಪಸ್ಥಿತರಿರಲಿದ್ದಾರೆ. ಉದ್ಯಮಿ  ಸುಶೀರ್ ಕುಮಾರ್, ಎಂಜಿನಿಯರ್ ಬಾಬ ಅಲಂಕಾರ್ ಅವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.

ಅಖಿಲ ಭಾರತ ಬಿಲ್ಲವರ ಮಹಿಳಾ ಸಂಘದ ಅಧ್ಯಕ್ಷೆ ಸುಮಲತಾ ಎನ್. ಸುವರ್ಣ, ಸುಖಲಾಕ್ಷಿ ಸುವರ್ಣ, ಕೋಶಾಧಿಕಾರಿ ಕಾಶೀನಾಥ್, ಜೊತೆ ಕಾರ್ಯದರ್ಶಿ ಯೋಗೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಜೀವನ್ ಕುಮಾರ್ ಇದ್ದರು.

The Damodar R. Damodar R. Krishnan is the one for the benefit of the students who wish to take up the Billava and the backward community at a cost of Rs 5.25 crore in Kunjatbail. The Golden Memorial ‘Billava Hostel has been built and built. All India Billawar Union President Naveen Chandra D. The Suvarna told a press conference on Wednesday.

The Billava Hostel has been built by the All India Billawara Union to encourage education with the mission of being independent of the Brahmashree Narayana Guru and being strong by the organization. The Lokarpana Ceremony will be held in the city hall. Chief Minister Siddaramaiah will inaugurate. Former Union Minister B. Janardhan Poojary will run. All India Billavar Union President Naveenchandra D. The golden will be played. Commemorative issue Khadar said he would be released.

The hostel is built in a quiet atmosphere of 6 kilometers from Mangalore. This will be helpful for the benefit of students who want higher careers in the Billava and the backward community. It has a 5 -storey building with a total of 19,500 sq. Ft. Ground floor The rooms include the room, the 1st and 3rd floor and the hall on the 2nd floor. There are kitchen and warehouses on the ground floor. He said 100 students have a systematic housing facility and students who receive vocational education will be given the first priority.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com