Breaking News

ಹೀಗಿದೆ ನಿಮ್ಮ ಭಾನುವಾರದ ರಾಶಿಫಲ

 

ತುಲಾ: ಸಮಸ್ಯೆ ಪರಿಹರಿಸುವ ಮನೋಭಾವ ಇಂದು ನಿಮ್ಮದು. ಅಂತಹ ಪ್ರಯತ್ನ ಸಫಲ. ಸಂಬಂಧದಲ್ಲಿ ಪ್ರಾಮಾಣಿಕತೆ ಇರಲಿ.

ವೃಶ್ಚಿಕ: ವೃತ್ತಿ ಬದುಕಿನಲ್ಲಿ ಉನ್ನತಿ ಕಾಣುವಿರಿ. ಆರ್ಥಿಕ ಅಭಿವೃದ್ಧಿ. ಹೊಸ ವಿಷಯಗಳನ್ನು ಕಲಿಯುವ ಉತ್ಸಾಹ. ಕೌಟುಂಬಿಕ ಪರಿಸರ ಉಲ್ಲಾಸದಾಯಕ ಆಗಿರಲಿದೆ.

ಧನು: ಕಾರ್ಯದಲ್ಲಿ ಹೆಚ್ಚು ಆಸ್ಥೆ ವಹಿಸಿ. ತಪ್ಪುಗಳಾಗುವ ಸಾಧ್ಯತೆಯಿದೆ. ಅದನ್ನು ನಿವಾರಿಸಿ.

ಮಕರ: ಇಂದು ನಾಯಕರಂತೆ ವರ್ತಿಸಿ, ನಿರ್ಧಾರ ತಳೆಯುವಲ್ಲಿ ಮುಂಚೂಣಿ ವಹಿಸಿ.

ಕುಂಭ: ನಿಮಗೆ ಪೂರಕ ದಿನ. ಆದರೆ ನಿಮ್ಮ ನಿರ್ಧಾರ ಅಹಿತಕರ ಫಲಿತಾಂಶ ನೀಡದಂತೆ ಎಚ್ಚರ ವಹಿಸಿ.

ಮೀನ: ನಿಮ್ಮ ಪ್ರೀತಿಗೆ ಪುನರುಜ್ಜೀವ ನೀಡಲು ಸಕಾಲ. ಕೆಟ್ಟಿರುವ ಸಂಬಂಧ ಮತ್ತೆ ಸರಿಪಡಿಸಿ. ಇತರರ ಒತ್ತಡಕ್ಕೆ ಮಣಿಯದಿರಿ.

  1.  

ಮೇಷ: ಇತರರ ಜತೆಗಿನ ನಿಮ್ಮ ಭಾವನೆ ವ್ಯಕ್ತಪಡಿಸಲು ಮುಜುಗರ ಬೇಡ. ಸೂಕ್ತ ಸ್ಪಂದನೆ ದೊರಕಲಿದೆ.

ವೃಷಭ: ವೃತ್ತಿಯಲ್ಲಿ ಸಮಸ್ಯೆ ಉಂಟಾದೀತು.ಅದನ್ನು ಪರಿಹರಿಸಲು ವಿವೇಕ ಬೇಕು. ದುಡುಕಿನ ಪ್ರತಿಕ್ರಿಯೆ ತೋರಬೇಡಿ.

ಮಿಥುನ: ವೃತ್ತಿ ಮತ್ತು ಖಾಸಗಿ ಬದುಕು ಎರಡರಲ್ಲೂ ನಿಮಗೆ ಪೂರಕ ಬೆಳವಣಿಗೆ. ಇತರರು ನಿಮ್ಮನ್ನು ಸರಿಯಾಗಿ ಅರಿತುಕೊಳ್ಳುವರು.

ಕಟಕ: ಯಶಸ್ಸು ನಿಮಗೆ ಸುಲಭವಾಗಿ ದೊರಕಲಿದೆ. ಹೆಚ್ಚು ಕಷ್ಟ ಪಡುವ ಅಗತ್ಯವಿಲ್ಲ. ಇತರರು ನಿಮ್ಮ ಮಾತು ಪಾಲಿಸುವರು.

ಸಿಂಹ: ಕೆಲಸದ ಒತ್ತಡ ಅಧಿಕ. ನೀವು ಶಾಂತವಾಗಿ, ತಾಳ್ಮೆಯಿಂದ ವರ್ತಿಸಬೇಕು. ಇಲ್ಲವಾದರೆ ಸಂಘರ್ಷದ ಸ್ಥಿತಿ ನಿರ್ಮಾಣವಾದೀತು.

ಕನ್ಯಾ: ಬಾಕಿಯಿದ್ದ ಕೆಲವು ಕಾರ್ಯ ಇಂದು ಪೂರೈಸುವ ಅವಕಾಶ. ಮೊದಲಾಗಿ ನಿಮ್ಮ ಉದಾಸೀನತೆ ತೊಡೆಯಬೇಕು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com