Breaking News

ಶಾರದಾ ವಿದ್ಯಾನಿಕೇತನಕ್ಕೆ ಸಮಗ್ರ ಚಾಂಪಿಯನ್‌ ಷಿಪ್, 41 ಪದಕ ದಾಖಲೆ

 

ಮಂಗಳೂರು: ಶಾರದಾ ವಿದ್ಯಾನಿಕೇತನ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ 7 ಚಿನ್ನ, 24 ಬೆಳ್ಳಿ, 10 ಕಂಚು ಸೇರಿ ಒಟ್ಟು 41 ಪದಕಗಳನ್ನು ಬಾಚಿಕೊಂಡಿದ್ದಾರೆ.

14 ವರ್ಷದ ಒಳಗಿನ ಬಾಲಕರ ವಿಭಾಗದ ವಿದ್ಯಾರ್ಥಿಗಳು ಸಮಗ್ರ ಚಾಂಪಿಯನ್‌ ಷಿಪ್ ಮತ್ತು 17 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರು ರನ್ನರ್ ಅಪ್ ಪ್ರಶಸ್ತಿ ದಾಖಲಿಸಿದ್ದಾರೆ. ಸೆಪ್ಟೆಂಬರ್ 15, 16 ರಂದು ಮಂಡ್ಯದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟಕ್ಕೆ 8 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಶಾರದಾ ಸಮೂಹ ಸಂಸ್ಥೆಗಳ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ಸಾಧಕರನ್ನು ಅಭಿನಂದಿಸಿದರು.

  1.  

The students of Sharada Vidyaniketan Public School bagged a total of 41 medals including 7 gold, 24 silver and 10 bronze in the Vidyabharati District Level Athletic Games held at Vivekananda College, Puttur.

Under-14 boys category students bagged the overall championship and under-17 boys and girls runner-up titles. State level to be held in Mandya on September 15, 16, 8 students have been selected for the athletic event.

Management Board, Principal and Staff of Sarada Group of Institutions congratulated the achievers.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com