Breaking News

ಗುರುಪ್ರಸಾದ್‌ ಮನೆಗೆ ನುಗ್ಗಿ ಕಟ್ಟಿ ಹಾಕಿ ದರೋಡೆ: 15 ಪವನ್‌ ಚಿನ್ನ ಕಳವು

 

ಪುತ್ತೂರು: ಶಾಸಕ ಅಶೋಕ್ ರೈ ಅವರ ಬೆಂಬಲಿಗ ಗುರುಪ್ರಸಾದ್ ರೈ ಮನೆಗೆ ತಂಡವೊಂದು ನುಗ್ಗಿ ಮನೆ ಮಂದಿ ಕಟ್ಟಿ ಹಾಕಿ ನಗದು ದರೋಡೆ ಮಾಡಿದ ಘಟನೆ ಬಡಗನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುದ್ಕಾಡಿ ಎಂಬಲ್ಲಿ ನಡೆದಿದೆ.

ಗುರುವಾರ ರಾತ್ರಿ ಎರಡು ಗಂಟೆ ವೇಳೆಗೆ ಈ ಘಟನೆ ನಡೆದಿದೆ.‌ ಬಡಗನ್ನೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ, ಕುದ್ಕಾಡಿ ನಿವಾಸಿ ಗುರುಪ್ರಸಾದ್ ರೈ ಅವರ ಮನೆ ಬಾಗಿಲು ಒಡೆದು ಒಳನುಗ್ಗಿದ 8 ಮಂದಿಯ ತಂಡವು ಗುರುಪ್ರಸಾದ್ ಅವರನ್ನು ಕಟ್ಟಿಹಾಕಿ, ಕುತ್ತಿಗೆಗೆ ಚಾಕು ಹಿಡಿದು ಕಪಾಟಿನಲ್ಲಿದ್ದ 40 ಸಾವಿರ ರೂಪಾಯಿ ಮತ್ತು 15 ಪವನ್ ಚಿನ್ನವನ್ನು ದರೋಡೆ ಮಾಡಿದೆ. ಒಂದೂವರೆ ಗಂಟೆ ಕಾಲ ಮನೆಯೊಳಗೇ ಇದ್ದು, ಎಲ್ಲ ಕಡೆಗಳಲ್ಲೂ ಹುಡುಕಾಡಿದ್ದಾರೆ ಎಂದು ತಿಳಿದು ಬಂದಿದೆ.

ತಂಡದ ಸದಸ್ಯರು ತುಳು ಮತ್ತು ಕನ್ನಡ ಭಾಷೆ ಮಾತನಾಡುತ್ತಿದ್ದರು. ಒಳಗೆಲ್ಲ ಜಾಲಾಡಿದ ಬಳಿಕ ಹಿಂದಿನ ಬಾಗಿಲಿನಿಂದ ಹೊರಗೆ ಹೋಗಿ ತಪ್ಪಿಸಿಕೊಂಡಿದ್ದಾರೆ. ಹೊರಗೆ ಹೋಗುವಾಗ ಗುರುಪ್ರಸಾದ್ ಅವರ ಕಟ್ಟಿದ‌ ಕೈಗಳನ್ನು ಬಿಚ್ಚಿ ದರೋಡೆಕೋರರು ಪರಾರಿ ಅಗಿದ್ದಾರೆ. ಇದೇ ವೇಳೆ ಗುರುಪ್ರಸಾದ್ ಅವರ ಮೊಬೈಲ್‌ ಅನ್ನು ನೀರಿಗೆ ಹಾಕಿ ಹಾನಿ ಮಾಡಿದ್ದಾರೆ.

  1.  

ಘಟನಾ ಸ್ಥಳಕ್ಕೆ ಐಜಿಪಿ ಡಾ. ಚಂದ್ರಗುಪ್ತ, ಎಸ್ಪಿ ರಿಷ್ಯಂತ್‌, ಡಿವೈಎಸ್‌ ಪಿ ಡಾ. ಗಾನಾ  ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.

The incident took place at Kudkadi under Badagannur Gram Panchayat where a team broke into the house of MLA Ashok Rai’s supporter Guruprasad Rai and tied up the housemen and robbed them of cash.

The incident took place on Thursday night at two o’clock. A group of 8 men broke into the house of Guruprasad Rai, a resident of Kudkadi, a former member of Badagannur Gram Panchayat, tied him up, held a knife to his neck and robbed him of 40,000 rupees and 15 pawan of gold from the cupboard. It is learned that he stayed inside the house for one and a half hours and searched everywhere.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com